ಚೆಯ್ಯಂಡಾಣೆ, ಆ. ೯: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ೨೦೨೪-೨೫ರ ವಿಶೇಷ ಮಹಾಸಭೆ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆ ಆರಂಭವಾಗುತ್ತಿದAತೆ ಸದಸ್ಯರು ಶಾಲೆ ಮುಚ್ಚಲು ಆಡಳಿತ ಮಂಡಳಿ ಕಾರಣ ಎಂದು ಆಕ್ರೋಶ ಹೊರ ಹಾಕಿದ ಪ್ರಸಂಗ ನಡೆಯಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಗಿರೀಶ್ ಪೂಣಚ್ಚ ವಿದ್ಯಾರ್ಥಿಗಳ ಕೊರತೆಯಿಂದ ಸರಕಾರ ಶಾಲೆಯನ್ನು ಮುಚ್ಚಿದೆ ಹೊರತು ನಾವು ಮುಚ್ಚಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಸರಕಾರದಿಂದ ಬಂದ ಆದೇಶ ಪತ್ರವನ್ನು ಶಿಕ್ಷಕಿ ಹೇಮಮಾಲಿನಿ ಮಂಡಿಸಿದರು. ಬಟ್ಟಿಯಂಡ ಕುಟುಂಬಸ್ಥರ ಪರವಾಗಿ ಸದಸ್ಯ ಜಯರಾಂ ಹಾಗೂ ಅನು ಅಶೋಕ್ ಮಾತನಾಡಿ ನಮ್ಮ ಕುಟುಂಬದ ಹಿರಿಯರು ಶಾಲೆಗೆ ದಾನವಾಗಿ ನೀಡಿದ ಜಾಗವನ್ನು ಶಾಲೆ ಮುಚ್ಚಿದ ಕಾರಣ ಹಿಂದಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
ಬಿದ್ದಂಡ ರಾಜೇಶ್ ಅಚ್ಚಯ್ಯ ಮಾತನಾಡಿ ಶಾಲೆಗೆ ದಾನವಾಗಿ ನೀಡಿದ ೧೫ ಎಕರೆ ಜಾಗದಲ್ಲಿ ೧೪ ಎಕರೆ ೭೫ ಸೆಂಟ್ ಮಾತ್ರ ಇದೆ. ಉಳಿದ ಜಾಗ ಒತ್ತುವರಿಯಾಗಿದೆ ಎಂದರು.
ಬೋವೈರಿಯAಡ ನಾಚಪ್ಪ ಮಾತನಾಡಿ ಈಗಿದ್ದ ಶಾಲೆ ಸರಕಾರದ ಆದೇಶ ಪ್ರಕಾರ ಮುಚ್ಚಿದೆ ಮುಂದೆ ಇಲ್ಲಿ ಒಳ್ಳೆಯ ಯಾವುದಾದರು ಪ್ರತಿಷ್ಠಿತ ವಿದ್ಯಾಸಂಸ್ಥೆ ಬಂದರೆ ನಾವು ಅದಕ್ಕೆ ಬೆಂಬಲ ಕೊಡಬೇಕು ಎಂದರು.
ಬೋವೈರಿಯAಡ ಪ್ರಥ್ವಿ ಮಾತನಾಡಿ ಇಲ್ಲಿ ಯಾವುದೇ ಸಂಸ್ಥೆ ಬಂದರೂ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು, ನಮ್ಮ ವ್ಯಾಪ್ತಿಯ ೭ ಗ್ರಾಮದ ಜನರಿಗೆ ಸೌಲಭ್ಯಗಳಲ್ಲಿ ವಿನಾಯಿತಿ ನೀಡಬೇಕು ಎಂದ ಅವರು ನಮ್ಮ ಊರಿಗೆ ಉಪಕಾರವಾಗುವ ಉದ್ದೇಶ ಮಾತ್ರ ಹೊಂದಿರಬೇಕು ಎಂದರು.
ವಕೀಲರಾದ ಕೆ.ಎಂ.ದೇವಯ್ಯ ಮಾತನಾಡಿ ನಮ್ಮ ಈ ಪರಿಸರದಲ್ಲಿ ಶ್ರೀ ಪರಿಪೂರ್ಣ ಚಾರಿಟೇಬಲ್ ಟ್ರಸ್ಟ್ಗೆ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಆಸಕ್ತಿ ಇದೆ ಎಂಬ ಬಗ್ಗೆ ಮಾಹಿತಿ ನೀಡಿ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಒಪ್ಪಿಗೆ ಕೊಟ್ಟರೆ ಇದರ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದರು.
ತೋಟಂಬೈಲು ಅನಂತ್ ಕುಮಾರ್, ಪೋಕ್ಕುಳಂಡ್ರ ದನೋಜ್, ಸುಮಂತ್, ಗಣು ಕುಶಾಲಪ್ಪ, ಚೇನಂಡ ಜೆಪ್ಪುದೇವಯ್ಯ, ಮನೋಜ್, ಜಗದೀಶ್, ರಾಜ ಉತ್ತಪ್ಪ, ಬಿದ್ದಪ್ಪ, ಮತ್ತಿತರರು ಮಾತನಾಡಿದರು. ಸೆಪ್ಟೆಂಬರ್‌ನಲ್ಲಿ ಮಹಾಸಭೆ ನಡೆಸಿ ಹೊಸ ಆಡಳಿತ ಮಂಡಳಿ ಆಯ್ಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭ ಆಡಳಿತ ಮಂಡಳಿಯ ಕಾರ್ಯದರ್ಶಿ ಬಾಲಕೃಷ್ಣ, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಪ್ರತಾಪ್, ಗಿರೀಶ್, ರಾಯ್ ಸೊಮ್ಮಯ್ಯ, ಮಾಚ್ಚಮ್ಮ, ಮಾಲಿನಿ ಮತ್ತಿತರರು ಉಪಸ್ಥಿತರಿದ್ದರು. ಲೀಲಾವತಿ ಪ್ರಾರ್ಥಿಸಿ, ಗಿರೀಶ್ ಪೂಣಚ್ಚ ಸ್ವಾಗತಿಸಿ, ಶಿಕ್ಷಕ ರಾಜ್ ಕುಮಾರ್ ಸರ್ವರನ್ನು ವಂದಿಸಿದರು.