ವೀರಾಜಪೇಟೆ, ಆ. ೯: ಇಲ್ಲಿನ ನೆಹರುನಗರದ ನವಜ್ಯೋತಿ ಸಂಘದ ಮಹಾಸಭೆ ಇತ್ತೀಚಿಗೆ ಸಂಘದ ಕಚೇರಿಯಲ್ಲಿ ನಡೆದು ನೂತನ ಆಡಳಿತ ಮಂಡಳಿ ರಚನೆ ಮಾಡಲಾಯಿತು. ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಪ್ರಸನ್ನ, ಸಂಘ ಸ್ಥಾಪನೆಗೊಂಡು ೩೧ ವರ್ಷ ಕಳೆದಿದೆ. ಸಾಮಾಜಿಕ ಕಳಕಳಿಯೊಂದಿಗೆ ಸಂಘ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಂಘದಲ್ಲಿ ಸದಸ್ಯ ಬಲ ವಿರಳವಾಗಿದ್ದು ಹೆಚ್ಚಿಸುವ ಪ್ರಯತ್ನ ಹಾಗೂ ಯುವ ಜನಾಂಗವನ್ನು ಸಂಘದ ಸದಸ್ಯರನ್ನಾಗಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ನೂತನ ಅಡಳಿತ ಮಂಡಳಿ ರಚನೆ ಮಾಡಿ ಅಧ್ಯಕ್ಷರಾಗಿ ಜಾಕೀರ್ ಹುಸೈನ್, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಸುನೀಶ್, ಉಪಾಧ್ಯಕ್ಷ ಬ್ಲೇಜಿ ಸಿಕ್ವೇರ, ಕೋಶಾಧಿಕಾರಿ ಸಿ.ಎಂ. ಧನು, ಗೌರವಾಧ್ಯಕ್ಷರಾಗಿ ಮರ್ವಿನ್ ಲೋಬೊ ಸೇರಿ ೨೧ ಮಂದಿ ನಿರ್ದೇಶಕರುಗಳು ಆಯ್ಕೆಗೊಂಡರು.
ಸದಸ್ಯರಾದ ಜ್ಯೂಡಿ ವಾಜ್ ಸ್ವಾಗತಿಸಿ, ವಂದಿಸಿದರು.