*ಗೋಣಿಕೊಪ್ಪ, ಆ. ೯: ವ್ಯವಹಾರಿಕ ಬಳಕೆಗೆ ಇಂಗ್ಲೀಷ್ ಭಾಷೆಯ ತಿಳುವಳಿಕೆ ಅತೀ ಅವಶ್ಯಕ ಎಂದು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ತಿಳಿಸಿದರು.

ಪೊನ್ನಂಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಪ್ರಾರಂಭಗೊAಡ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲೀರ ರಶೀದ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಿ, ಸದಸ್ಯರುಗಳಾದ ಮೂಕಳೇರ ಭಾರತಿ, ಸುನಿತಾ, ರಫೀಕ್, ಜುನೈದ್, ರಾಮಕೃಷ್ಣ, ತಹಶೀಲ್ದಾರ್ ಮೋಹನ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಪ್ಪಣ್ಣ, ಅಂಗನವಾಡಿ ಶಿಕ್ಷಕಿಯರು, ಸಹಾಯಕರು ಇದ್ದರು.