ಮಡಿಕೇರಿ, ಆ.೧೧ : ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ವತಿಯಿಂದ ಆ.೧೭ ರಂದು ಮೂರ್ನಾಡಿನಲ್ಲಿ ೬ ವರ್ಷದೊಳಗಿನ ಮಕ್ಕಳಿಗಾಗಿ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆ ಹಾಗೂ ೨೫ ವರ್ಷ ಮೇಲ್ಪಟ್ಟ ದಂಪತಿಗೆ ರಾಧಾಕೃಷ್ಣ ಛದ್ಮವೇಷ ಸ್ಪರ್ಧೆ ನಡೆಯಲಿದೆ.

ಮೂರ್ನಾಡಿನ ಪ್ರಕೃತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಿರುವ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಸಂದರ್ಭ ಛದ್ಮವೇಷ ಸ್ಪರ್ಧೆಗಳು ನಡೆಯಲಿವೆ. ೬ ವರ್ಷದೊಳಗಿನ ಮಕ್ಕಳು ಶ್ರೀಕೃಷ್ಣನ ಛದ್ಮ ವೇಷವನ್ನು ಮಾತ್ರ ಧರಿಸಬೇಕು. ೨೫ ವರ್ಷ ಮೇಲ್ಪಟ್ಟ ದಂಪತಿ ಹಾವಾಭಾವ ದೊಂದಿಗೆ ರಾಧಾಕೃಷ್ಣ ಛದ್ಮವೇಷ ಪ್ರದರ್ಶಿಸಬೇಕು. ಈ ಸ್ಪರ್ಧಾ ವಿಭಾಗದಲ್ಲಿ ವಯಸ್ಸಿನ ಮಿತಿ ಇರುವುದಿಲ್ಲ. ಆಸಕ್ತರು ಆ.೧೨ರೊಳಗೆ ಹೆಸರನ್ನು ನೋದಾಯಿಸಿ ಕೊಳ್ಳಬೇಕು. ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನ ಮೂರ್ನಾಡು ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಿ.ಪಿ.ಚಂಗಪ್ಪ ೯೪೪೯೦೭೩೦೩೬, ಎಂ.ಕೆ.ಪ್ರವೀಣ ೭೦೧೯೦೯೫೫೨೪, ಮಮತ ಶ್ರೀಹರಿ ೯೬೮೬೯೬೦೩೨೭ ನ್ನು ಸಂಪರ್ಕಿಸಬಹುದಾಗಿದೆ.