ಮಡಿಕೇರಿ, ಆ. ೧೨: ಅಂತರರಾಷ್ಟಿçÃಯ ಆದಿವಾಸಿ ಬುಡಕಟ್ಟು ದಿನಾಚರಣೆಯ ಪ್ರಯುಕ್ತ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರು ಪೊನ್ನಂಪೇಟೆ ತಾಲೂಕಿನ ನಾಣಚ್ಚಿಗೆ ಭೇಟಿ ನೀಡಿ ಹಾಡಿ ನಿವಾಸಿಗಳ ಮನವಿ ಸ್ವೀಕರಿಸಿದರು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ೧೬ಕ್ಕೂ ಅಧಿಕ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ರಸ್ತೆಯನ್ನು ನಿರ್ಮಿಸಲಾಗಿದೆ. ಹಕ್ಕು ಪತ್ರ ಒದಗಿಸಲಾಗಿದೆ. ಆದಿವಾಸಿ ಮಕ್ಕಳ ಶಿಕ್ಷಣ, ಶ್ರಮಿಸುತ್ತಿದ್ದೇನೆ. ಇಂದು ಎಲ್ಲಾ ಆದಿವಾಸಿ-ಬುಡಕಟ್ಟು ಜನರ ಅಭಿವೃದ್ಧಿಗೆ ಅನುದಾನ ಒದಗಿಸಲು ಡಾ. ಮನಮೋಹನ್ ಸಿಂಗ್ ಅವರು ರೂಪಿಸಿದ ಕಾನೂನು ಕಾರಣವಾಗುತ್ತಿದೆ ಎಂದರು..

ಈ ಸಂದರ್ಭ ಕೆ ಬಾಡಗ ವಲಯ ಅಧ್ಯಕ್ಷ ರವಿ, ಸದಸ್ಯ ಬೋಪಣ್ಣ, ಕುಟ್ಟ ವಲಯ ಅಧ್ಯಕ್ಷ ರಾಮಕೃಷ್ಣ, ನಾಲ್ಕೇರಿ ವಲಯ ಅಧ್ಯಕ್ಷ ಕಟ್ಟಿ ಕಾರ್ಯಪ್ಪ, ಶ್ರೀಮಂಗಲ ವಲಯ ಅಧ್ಯಕ್ಷ ಪಲ್ವಿನ್ ಪೂಣಚ್ಚ, ಗೋಣಿಕೊಪ್ಪ ವಲಯ ಅಧ್ಯಕ್ಷ ಪ್ರಮೋದ್ ಗಣಪತಿ, ಅಪ್ಪಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸರ್ವತೋಮುಖ ಅಭಿವೃದ್ಧಿಗೆ