ಸಿದ್ದಾಪುರ, ಆ. ೧೨: ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ೧೫ಕ್ಕೂ ಅಧಿಕ ಆನೆಗಳ ಹಿಂಡನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ತಿತಿಮತಿ ವಲಯದ ಚೆನ್ನಂಗಿ ಶಾಖೆಯ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಮರಿಯಾನೆಗಳು ಸೇರಿದಂತೆ ೧೫ ಕ್ಕೂ ಅಧಿಕ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಕಾಡಿಗೆ ಓಡಿಸಲಾಯಿತು.
ಕಾರ್ಯಾಚರಣೆ ನಡೆಸುವ ಸಂದರ್ಭ ಬೇರ್ಪಟ್ಟ ಕೆಲವು ಕಾಡಾನೆಗಳು ತೋಟದಲ್ಲಿ ಉಳಿದುಕೊಂಡಿವೆೆ. ಇತ್ತೀಚೆಗೆ ಈ ಭಾಗದಲ್ಲಿ ರೇಡಿಯೋ ಕಾಲರ್ ಅಳವಡಿಸಿದ ಉಷಾ ಹಾಗೂ ಮೀರ ಗುಂಪಿನ ೩೫ಕ್ಕೂ ಅಧಿಕ ಕಾಡಾನೆಗಳು ಕಾರ್ಯಾಚರಣೆ ಸಂದರ್ಭದಲ್ಲಿ ಕಂಡುಬAದವು.
ಕಾರ್ಯಚರಣೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆರ್. ಆರ್.ಟಿ. ತಂಡದ ರಂಜಿತ್, ಶಂಕರ್, ಪ್ರದೀಪ್, ರೋಷನ್, ಪ್ರಜ್ವಲ್ ಮತ್ತು ಅರುಣ, ಇನ್ನಿತರರು ಹಾಜರಿದ್ದರು.