ವೀರಾಜಪೇಟೆ, ಆ. ೧೩: ಗಣೇಶೋತ್ಸವ ಆಡಂಬರದ ಆಚರಣೆಯಾಗುವುದಕ್ಕಿಂತ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಸಾಂಪ್ರದಾಯಿಕ ಆಚರಣೆ ಆಗಲಿ. ಕಾನೂನಿನ ಚೌಕಟ್ಟನ್ನು ಮೀರದೆ ಯಶಸ್ವಿಯಾಗಿ ಗಣೇಶೋತ್ಸವ ಆಚರಿಸುವಂತಾಗಬೇಕು ಎಂದು ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ಹೇಳಿದರು.

ವೀರಾಜಪೇಟೆ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ನಡೆದ ಗಣೇಶೋತ್ಸವ ಸಂಘಟಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣೇಶೋತ್ಸವ ದೇವರ ಕಾರ್ಯಕ್ರಮವಾಗಿದ್ದು, ಉತ್ಸವ ಯಶಸ್ವಿಯಾಗಿ ನಡೆಯಲು ಉತ್ತಮವಾದ ಸಂಘಟನೆ ಅಗತ್ಯವಾಗಿದೆ. ಪ್ರತಿ ಗೌರಿ ಗಣೇಶ ಉತ್ಸವ ಸಮಿತಿಯವರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಪರಿಸರ ಸಂರಕ್ಷಣೆ ಪೂರಕವಾಗುವ ನಿಟ್ಟಿನಲ್ಲಿ ಹಬ್ಬ ಆಚರಿಸಬೇಕು. ಡಿ.ಜೆಗೆ ಬಳಸುವಲ್ಲಿ ನಿರ್ದಿಷ್ಟ ಶಬ್ದದ ಮಿತಿಯನ್ನು ಮೀರದಂತೆ ಸಂಘಟಕರು ಎಚ್ಚರ ವಹಿಸಬೇಕು. ಸಿಂಗಲ್ ವಿಂಡೋ ಸಿಸ್ಟಂ ಮಾಡಲಾಗಿದೆ. ಸಮಿತಿಗಳ ವಾಟ್ಸಾö್ಯಪ್ ಗ್ರೂಪ್ ಮಾಡಲಾಗುತ್ತಿದ್ದು ಮಾಹಿತಿ ನೀಡಲಾಗುತ್ತದೆ ಎಂದರು.

ಶೋಭಾಯಾತ್ರೆಯAದು ಮದ್ಯಪಾನ ಮಾಡಿ ಗಲಭೆ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರ ೧೫ ರಿಂದ ೨೦ ತಂಡಗಳನ್ನು ರಚಿಸಲಾಗುತ್ತದೆ. ಇದರೊಂದಿಗೆ ಶೋಭಾಯಾತ್ರೆ ಮಂಟಪವು ವಾಹನದ ಅಳತೆಗೆ ಸಮರ್ಪಕವಾಗಿರಲಿ. ಆಡಂಬರದ ಹಿನ್ನೆಲೆಯಲ್ಲಿ ದೊಡ್ಡ ಮಂಟಪಗಳನ್ನು ಮಾಡಿ ಆಯತಪ್ಪಿ ಬಿದ್ದು ಅಪಘಾತವಾಗದಂತೆ ಎಚ್ಚರ ವಹಿಸಬೇಕು. ವಿಸರ್ಜನೆ ಸ್ಥಳಗಳಲ್ಲಿ ವಿಶೇಷವಾದಂತಹ ಸುರಕ್ಷತಾ ಕ್ರಮಗಳನ್ನು ವಹಿಸಬೇಕು. ಯಾವುದೇ ರೀತಿಯಲ್ಲಿ ಸಮಸ್ಯೆಗಳು ಎದುರಾಗದಂತೆ ಕಾನೂನು ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಬೇಕು ಎಂದರು.

ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ವೀರಾಜಪೇಟೆ ಗೌರಿ ಗಣೇಶ ಉತ್ಸವ ಸಾಮರಸ್ಯದಿಂದ ಎಲ್ಲಾ ಜನಾಂಗದ ಜನರು ಆಚರಣೆ ಮಾಡುವ ಹಬ್ಬವಾಗಿದೆ. ಎಲ್ಲರೂ ಕಡ್ಡಾಯವಾಗಿ ಠಾಣೆಯಲ್ಲಿ ಅನುಮತಿ ತೆಗೆದುಕೊಳ್ಳಬೇಕು ಹಾಗೂ ತಮ್ಮ ಸಮಿತಿಗಳಿಂದ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.

ಗೌರಿ ಗಣೇಶೋತ್ಸವ ಸಮಿತಿ ನಾಡ ಹಬ್ಬದ ಅದ್ಯಕ್ಷ ಶಭರೀಶ್ ಮಾತನಾಡಿ ವೀರಾಜಪೇಟೆ ಗೌರಿ ಗಣೇಶ ಉತ್ಸವ ಇತಿಹಾಸ ಪ್ರಸಿದ್ಧವಾಗಿದೆ. ಎಲ್ಲಾ ವರ್ಷಗಳಲ್ಲಿ ಉತ್ತಮ ರೀತಿಯಲ್ಲಿ ಉತ್ಸವ ನಡೆಯುತ್ತಿದೆ. ಪ್ರತಿಷ್ಠಾಪನೆಯಿಂದ, ವಿರ್ಸಜನೆಯವರಗೆ ನಮ್ಮೊಂದಿಗೆ ಸಹಕಾರ ನೀಡಿ ನಿಯಮ ಪಾಲಿಸಿ. ಶಾಂತಿಯುತವಾಗಿ ಹಾಗೂ ಸೌರ್ಹಾದಯುತವಾಗಿ ಹಬ್ಬ ಆಚರಿಸಲು ಸಹಕಾರ ನೀಡಿ ಎಂದು ಹೇಳಿದರು.

ವಿವಿಧ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಟಿ.ಪಿ ಕೃಷ್ಣ, ಪುಷ್ಪರಾಜ್, ತ್ರಿಶು ಗಣಪತಿ, ಆನಂದ್ ನಂಜಪ್ಪ, ಸಾಯಿನಾಥ್ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿ ಸಲಹೆ ನೀಡಿದರು. ಇದೇ ಸಂದರ್ಭ ಹೆಚ್ಚು ಶಬ್ದ ಹೊರಡಿಸುವ ಡಿಜೆಗಳನ್ನು ಬಳಸುವುದರಿಂದ ಆಗುವ ದುಷ್ಪರಿಣಾಮ ಹಾಗೂ ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆ ಕುರಿತು ಡೆಮೋವನ್ನು ಪೋಲಿಸರು ತೋರಿಸಿ ಜಾಗೃತಿ ಮೂಡಿಸಿದರು.

ವೇದಿಕೆಯಲ್ಲಿ ವೀರಾಜಪೇಟೆ ನಗರ ಠಾಣಾಧಿಕಾರಿ ಎಚ್.ಎಸ್. ಪ್ರಮೋದ್, ವಾಣಿ, ಗ್ರಾಮಾಂತಾರ ಠಾಣಾಧಿಕಾರಿ ಲತಾ, ಉಪಸ್ಥಿತರಿದ್ದರು. ಸಭೆಯಲ್ಲಿ ವೀರಾಜಪೇಟೆ ಪಟ್ಟಣದ ೨೨ ಉತ್ಸವ ಸಮಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.