ಅದು ೬೦-೭೦ ರ ದಶಕದ ಮಾತು. ಜ್ಞಾನದ ಗಳಿಕೆಗೆ, ತಿಳುವಳಿಕೆಯ ಹೆಚ್ಚಳಕ್ಕೆ ಶಾಲಾಪಠ್ಯಗಳನ್ನು ಬಿಟ್ಟರೆ ಪತ್ರಿಕೆ ಮತ್ತು ರೇಡಿಯೋವನ್ನು ಆಶ್ರಯಿಸುತ್ತಿದ್ದೆವು. ಸಾಂಪ್ರದಾಯಿಕವಾದ ಸುದ್ದಿವಾಹಕಗಳಾಗಿ ಅವು ಅತ್ಯಂತ ಜನಪ್ರಿಯವಾಗಿದ್ದವು; ವಿಶ್ವಾಸಾರ್ಹವಾಗಿದ್ದವು. ಆ ಕಾಲಕ್ಕೆ ಪತ್ರಿಕೆ ತರಿಸುವುದು, ರೇಡಿಯೋ ಕೇಳುವುದು ಪ್ರತಿಷ್ಠೆಯ ಸಂಕೇತವಾಗಿದ್ದವು. ಊರ ಮುಖಂಡರೋ ಕೊಂಚ ಸಿರಿವಂತರೋ ಅದನ್ನು ತರಿಸಿದರೆ ಊರ ಅರಳೀಕಟ್ಟೆಯೇ ವಾರ್ತಾಪ್ರಸಾರದ ಕೇಂದ್ರವಾಗುತ್ತಿತ್ತು. ಅಕ್ಷರಬಲ್ಲ ಊರ ಶಾನುಭೋಗರು ಪತ್ರಿಕೆ ಓದಿ ವಿವರಿಸುತ್ತಿದ್ದರೆ ಕೇಳುವ ಮಂದಿ ನೂರಾರು. ಜನರ ತಿಳುವಳಿಕೆಗಷ್ಟು ಸಾಕಿತ್ತು. ಆರಕ್ಕೇರದ, ಮೂರಕ್ಕಿಳಿಯದ ನೆಮ್ಮದಿ ಬದುಕಿಗೆ ಪ್ರಪಂಚಜ್ಞಾನದ ಅಗತ್ಯ ಅವರಿಗಿರುತ್ತಿರಲಿಲ್ಲ. ಆದರೆ, ವರ್ತಮಾನ ! ಕಲಿತವರ ಸಂಖ್ಯೆ ಜಾಸ್ತಿಯಾಗುತ್ತಿರುವಷ್ಟೇ ವೇಗದಲ್ಲಿ ಮಾಹಿತಿ ಪ್ರಪಂಚ ವಿಸ್ತಾರವಾಗುತ್ತಿದೆ; ಕಲ್ಪನೆಗೂ ಮೀರಿ ತಾಂತ್ರಿಕ ಬದಲಾವಣೆಗಳಾಗುತ್ತಿವೆ. ಜ್ಞಾನದ ಪ್ರಸಾರ ಭುವಿ-ಬಾನನ್ನು ತಬ್ಬುತ್ತಿದೆ. ಸೃಜನಶೀಲತೆ ಮತ್ತು ಕ್ರಿಯಾಶೀಲತೆ, ವ್ಯಕ್ತಿಗತ ಬಳಕೆಯನ್ನು ದಾಟಿ ವಿಶ್ವದತ್ತ ಚಲಿಸುತ್ತಿದೆ. ಇದಕ್ಕೆ ಮುಖ್ಯಕಾರಣ ಮಾಧ್ಯಮಗಳು. ಸಮೂಹ ಮಾಧ್ಯಮ ಗಳು ಮನುಕುಲದ ಬದುಕನ್ನು ಆವರಿಸಿವೆ. ಅವಿಲ್ಲದೆ ಜೀವಿಸಲಾರೆವು ಎನ್ನುವ ಮನಸ್ಥಿತಿಗೆ ಜನರನ್ನು ತಂದು ನಿಲ್ಲಿಸಿವೆ. ಇಂದು ಮಾಧ್ಯಮಗಳು ಕೇವಲ ಮಾಹಿತಿಕೋಶವಾಗಿ ಉಳಿದಿಲ್ಲ. ವಿಶ್ವಕೋಶವಾಗಿ ಬೆಳೆದಿವೆ. ಮನುಷ್ಯನ ಆಲೋಚನಾಕ್ರಮ, ಸಂವೇದನಾಶೀಲತೆ ಕ್ರಿಯೆ-ಪ್ರತಿಕ್ರಿಯೆಗಳ ಮೇಲೆ ಪ್ರತ್ಯಕ್ಷ-ಪರೋಕ್ಷವಾಗಿ ಆಳವಾದ ಪ್ರಭಾವ ಬೀರುತ್ತಿವೆ. ಒಂದೆಡೆ ಸಕಾರಾತ್ಮಕ ಭಾವವನ್ನು ಮೂಡಿಸುತ್ತಲೇ ಇನ್ನೊಂದೆಡೆ ಚಲನಶೀಲ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದಲೇ ಮಾಧ್ಯಮದ ಈ ಶಕ್ತಿಯನ್ನು ಬಹು ಎಚ್ಚರಿಕೆಯಿಂದ ಸ್ವೀಕರಿಸಬೇಕಾಗುತ್ತದೆ; ತೆರೆದ ಕಣ್ಣಿಂದ ಗ್ರಹಿಸಬೇಕಾಗುತ್ತದೆ; ಸಮಾಜಮುಖಿಯಾಗಿ ದುಡಿಸಿಕೊಳ್ಳ ಬೇಕಾಗುತ್ತದೆ.
ವಾಸ್ತವವಾಗಿ ಸಮೂಹ ಮಾಧ್ಯಮಗಳ ಪಾತ್ರ ಮಹತ್ತರವಾದುದು. ಅವು ಸಾರ್ವಜನಿಕ ವೇದಿಕೆಗಳು. ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವಿನ ಸಂವಹನ ಸೇತುಗಳು, ದೇಶ-ವಿದೇಶಗಳ ವಸ್ತುಸ್ಥಿತಿಯನ್ನು ಅನಾವರಣ ಮಾಡುವ ವರ್ತಮಾನದ ಸಾಧನಗಳು. ಸಾಮಾಜಿಕ ಅನಿಷ್ಟಗಳ ಬಗ್ಗೆ, ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಸಾಂಸ್ಕೃತಿಕ ಬಿಕ್ಕಟ್ಟುಗಳ ಬಗ್ಗೆ ಅರಿವು ಮೂಡಿಸುವ ಮಾರ್ಗದರ್ಶಕಗಳು. ಜೀವವಿರೋಧಿ ಧೋರಣೆಗಳನ್ನು ರಚನಾತ್ಮಕವಾಗಿ ಪಲ್ಲಟಗೊಳಿಸುವ ಕೈದೀವಿಗೆಗಳು. ರಾಜ್ಯ ರಾಷ್ಟçದ ಸಮಸ್ತ ಅಭಿವೃದ್ಧಿಗೆ ಕ್ರಿಯಾತ್ಮಕವಾಗಿ ಸ್ವಂದಿಸುವ ಜೀವಂತಿಕೆಯ ಅಭಿವ್ಯಕ್ತಿಗಳು. ಅವುಗಳ ಮೂಲಕ ಕುಳಿತಲ್ಲೇ ವಿಶ್ವವನ್ನು ಸುತ್ತಬಲ್ಲ; ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಲ್ಲ; ಪರಿಣಾಮಕಾರಿ ಬದುಕನ್ನು ಕಟ್ಟಬಲ್ಲ ಅವಕಾಶಗಳಿವೆ.
ಮಾಧ್ಯಮ ಒಂದು ಕ್ರಿಯಾತ್ಮಕ ಕಲೆ. ಅದರ ಇತಿಹಾಸವೇ ರೋಚಕಕಥನ; ಮಹಾಪ್ರಬಂಧದ ವಸ್ತು. ಆರಂಭದಲ್ಲಿ ಮೌಖಿಕ, ಲಿಖಿತರೂಪದಲ್ಲಿದ್ದ ಸಂವಹನ ವ್ಯವಸ್ಥೆ. ೧೫ನೇ ಶತಮಾನದ ಮಧ್ಯಭಾಗದಿಂದೀಚೆಗೆ ಜೋಹನ್ಸ್ ಗುಟನ್ ಬರ್ಗ್ನನಿಂದಾಗಿ ಮುದ್ರಣ ರೂಪ ಪಡೆಯಿತು; ಜ್ಞಾನ ಪ್ರಸಾರದಲ್ಲೊಂದು ಹೊಸಕ್ರಾಂತಿಯನ್ನೇ ಸೃಷ್ಟಿಸಿತು. ವಿಶೇಷವಾಗಿ ಪತ್ರಿಕೆಗಳ ಪಾತ್ರವನ್ನಿಲ್ಲಿ ದಾಖಲಿಸಬೇಕು. ಸ್ವಾತಂತ್ರ ಹೋರಾಟಗಾರರ ನವಸಮಾಜದ ನಿರ್ಮಾಣದ ಕನಸಿಗೆ ಸ್ಪಷ್ಟ ರೂಪುರೇಖೆಗಳನ್ನು ನಿರ್ಮಿಸುವ ಮೂಲಕ ಅವು ಮೂಡಿಸಿದ ಜನಜಾಗೃತಿ, ಸಂಘಟನೆಯ ಪರಿಣಾಮವನ್ನು ಯಾರೂ ಮರೆಯುವಂತಿಲ್ಲ. ಅವುಗಳ ವಸ್ತುನಿಷ್ಠ ವಿಶ್ಲೇಷಣೆ, ಮೌಲ್ಯಯುತ ಚಿಂತನೆ, ಪ್ರಾಮಾಣಿಕತೆ, ಜವಾಬ್ದಾರಿಯ ಪ್ರಜ್ಞೆ ಮತ್ತು ಸತ್ಯ ಪ್ರತಿಪಾದನೆಗಳಿಂದಾಗಿ ಪತ್ರಿಕೆಗಳು ಬಹುಬೇಗ ಜನರ ನಂಬಿಕೆಗೆ ಪಾತ್ರವಾದುವು. ಸುದ್ದಿಪ್ರಧಾನ, ವಿಷಯಪ್ರಧಾನ, ಸಾಹಿತ್ಯ ಪ್ರಧಾನವಾಗಿ ಬೆಳಕಿಗೆ ಬಂದ ಮುದ್ರಣಮಾಧ್ಯಮ ವಿವಿಧ ವಯೋಮಾನ ದವರನ್ನೂ ಆಕರ್ಷಿಸಿತು. ಅಭಿವ್ಯಕ್ತಿಗೆ ಅವಕಾಶಕಲ್ಪಿಸಿತು. ಹೀಗಾಗಿ ಮುದ್ರಣ ಮಾಧ್ಯಮ ಸಾರ್ವಕಾಲಿಕವಾಗಿ ಅನುಕೂಲಕರ ಎನ್ನಿಸಿತು.
೨೦ನೇ ಶತಮಾನದ ವೇಳೆಗೆ ಆವಿಷ್ಕಾರಗೊಂಡ ಎಲೆಕ್ಟಾçನಿಕ್ ಮಾಧ್ಯಮ, ಮಾಧ್ಯಮಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿತು. ಮುದ್ರಣ ಮಾಧ್ಯಮಕ್ಕೇ ಸವಾಲು ಒಡ್ಡಿತು. ದೃಶ್ಯ-ಶ್ರವ್ಯ-ಎರಡೂ ಸಾಧ್ಯತೆಗಳನ್ನೊಳ ಗೊಂಡ ಈ ಮಾಧ್ಯಮ ಕ್ಷಣಮಾತ್ರದಲ್ಲಿ ವಿಶ್ವವಿದ್ಯಮಾನಗಳ, ಚರಚರಾವಸ್ತು ವಿಶೇಷತೆಗಳನ್ನು ನೋಡುವವನ ಅಂಗೈಯಲ್ಲಿಟ್ಟು ವಿಜೃಂಭಿಸಿತು. ಎರಡೂ ಮಾಧ್ಯಮಗಳ ಉದ್ದೇಶ ಸಾರ್ವಜನಿಕ ಹಿತ, ಪ್ರಜಾಸತ್ತೆಯ ರಕ್ಷಣೆ, ಜನಾಭಿಪ್ರಾಯ ರೂಢಿಸುವಿಕೆ-ಒಟ್ಟಾರೆ ಸಾಮಾಜಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದೇ ಆಗಿದೆ. ಅದರ ಪರಿಣಾಮವಾಗಿ ಶಿಕ್ಷಣ, ಮನರಂಜನೆ, ಮಾರುಕಟ್ಟೆ ವ್ಯವಸ್ಥೆ, ಜಾಹೀರಾತು, ಉದ್ಯೋಗ ಒದಗಿಸುವಿಕೆ,. ಧರ್ಮ ಪರಿಭಾವನೆ, ಸಂಸ್ಕೃತಿ ಚಿಂತನೆ-ಇತ್ಯಾದಿ ಹತ್ತು-ಹಲವು ಸಂಗತಿ ಗಳನ್ನು ಜನಪರವಾಗಿ ವಿಸ್ತರಿಸಲು ಪ್ರಯತ್ನಿಸಿದವು. ಮಾತ್ರವಲ್ಲ ಸ್ವರೂಪಗಳಲ್ಲಿ ಬದಲಾವಣೆಗಳನ್ನು ತಂದುಕೊAಡವು. ಮಾನವ ಬೌದ್ಧಿಕವಾಗಿ ಎತ್ತರೆತ್ತರಕ್ಕೆ ಬೆಳೆದಂತೆಲ್ಲಾ ಎಲೆಕ್ಟಾçನಿಕ್ ಮಾಧ್ಯಮವನ್ನು ಬಳಸಿಕೊಳ್ಳುವುದೂ ಎಲ್ಲೆ ಮೀರಿದೆ. ಮಾತ್ರವಲ್ಲ ಅದಕ್ಕೇ ದಾಸರಾಗಿ ವಿವೇಚನೆಯನ್ನು ಕಳೆದು ಕೊಳ್ಳುತ್ತಿರುವುದೂ ಹೆಚ್ಚಿದೆ. ಸುಪ್ತವಾಗಿದ್ದ ತಾನು ತನ್ನದೆಂಬ ಸ್ವಾರ್ಥಭಾವ ಬಲಿಯತೊಡಗಿ ಮನುಷ್ಯ ಸಂಬAಧಗಳನ್ನೇ ದೂರ ಸರಿಸುತ್ತಿದೆ. ಎಷ್ಟೋ ಬಾರಿ ನಮ್ಮ ಪರಿಸರಗಳೇ ನಮಗೆ ಅಪರಿಚಿತ ವಾಗುವಂತಹ ಆತಂಕದ ಪರಿಸ್ಥಿತಿಯನ್ನು ಎದುರುಗೊಳ್ಳುವಂತೆ ಮಾಡಿದೆ. ಬಹಳವಾಗಿ ಕಾಡುವ ಈ ಅಪರಿಚಿತತ್ವಕ್ಕೆ ಮಾಲೀಕತ್ವವೂ ಮಾಧ್ಯಮಗಳ ಖಾಸಗಿ ಕಾರಣವಾಗಿದ್ದಿರಬಹುದು.
ವಾಣಿಜ್ಯೀಕರಣ: ಈ ಹೊತ್ತು ಬದುಕೇ ವ್ಯಾಪಾರೀಕರಣಗೊಳ್ಳುತ್ತಿದೆ. ಶಿಕ್ಷಣ, ಉದ್ಯೋಗ, ವಧೂವರರ ಆಯ್ಕೆ ಯಾವುದನ್ನೇ ಆಗಲಿ ಹಣ ಇಲ್ಲವೆ ಅಧಿಕಾರದ ಮೇಲೆ ಮೌಲ್ವಿಕರಿಸುತ್ತಿದ್ದೇವೆ. ಹಾಗೆಯೇ, ಖಾಸಗಿ ಮಾಲೀಕತ್ವದ ಪ್ರಾಯೋಜಕತ್ವದಲ್ಲಿರುವ ಬಹುಪಾಲು ಮಾಧ್ಯಮಗಳು ದೇಣಿಗೆ ಕೊಡುವವರನ್ನು, ಪ್ರಧಾನವಾಗಿ ಜಾಹೀರಾತು, ಚಂದಾದಾರಿಕೆಯನ್ನು ಅವಲಂಬಿತವಾಗುವುದರಿAದ ವಾಣಿಜ್ಯ ಹಿತಾಸಕ್ತಿಗಳಿಗೆ ಹೆಚ್ಚು ಹೊಂದಿಕೊಳ್ಳ ಬೇಕಾಗುತ್ತದೆ. ಹೀಗಾಗಿ ಮೂಲ ಆಶಯಕ್ಕೆ ಭಿನ್ನವಾಗಿ ತಮ್ಮದೇ ಧೋರಣೆಗಳ ಮುಖವಾಣಿಯಾಗುತ್ತಿರುವುದು ಆಶ್ಚರ್ಯದ ಸಂಗತಿಯಾಗಿ ಉಳಿದಿಲ್ಲ. ಎಷ್ಟರಮಟ್ಟಿಗೆ ಎಂದರೆ ಸುಳ್ಳನ್ನೇ ನಿಜದ ತಲೆಮೇಲೆ ಹೊಡೆದಂತೆ ಪ್ರಚಾರ ಮಾಡಲೂ ಹಿಂಜರಿಯವು ! ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಬದಲು ಬಂದ ಸಮಸ್ಯೆಗಳನ್ನು ಎದುರಿಸಲು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿಯನ್ನು ಸೃಷ್ಟಿಸಿ ಬಿಡುತ್ತವೆ.
ಉದಾಹರಣೆಗೆ ಕೊರೊನಾ ರೋಗದಿಂದ ಸತ್ತವರಿಗಿಂತ, ಮಾಧ್ಯಮ ಕೊಟ್ಟ ಮಾಹಿತಿಗಳ ಭಯದಿಂದಲೇ ತತ್ತರಿಸಿದವರ ಸಂಖ್ಯೆಯೇ ಹೆಚ್ಚು. ಇದನ್ನು ಮಾಧ್ಯಮದ ಫಲಶುÈತಿ ಎನ್ನದೆ ವಿಧಿಯಿಲ್ಲ ಅಲ್ಲವೇ? ! ಹಾಗೆಂದು ಸರ್ಕಾರಿ ಮಾಧ್ಯಮವಾಗಿ ದೂರದರ್ಶನದಂಥ ಚಾನಲ್ ಕೂಡ ಶೇ. ೧೦೦ ರಷ್ಟು ಸರಿ ಎಂದು ಅರ್ಥೈಸಿಕೊಳ್ಳಬೇಕಾದ ಅಗತ್ಯವಿಲ್ಲ. ಇಲ್ಲಿ ಮಾಲೀಕತ್ವದ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ಸಾರ್ವಜನಿಕ ಮಾಧ್ಯಮವಾಗಿ ಸಂವಹನಗೊಳ್ಳುವುದರಿAದ ಸಮಕಾಲೀನ ಸರ್ಕಾರಗಳು ತಮ್ಮ ಪಕ್ಷದ ಅಭಿಪ್ರಾಯಗಳನ್ನು ಜನತೆಯಲ್ಲಿ ರೂಪಿಸಲು ಪ್ರಯತ್ನಿಸುವ ಅಪಾಯವಿದೆ. ಆದರೂ ಜನಸಾಮಾನ್ಯರಿಗೆ ಸರ್ಕಾರಿ ಯೋಜನೆ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಇದರ ಪಾತ್ರ ಪ್ರಧಾನವಾದುದು. ಹಿಂದೆ ವಾರ್ತಾ ಇಲಾಖೆಯೇ ಈ ಕೆಲಸವನ್ನು ನಿರ್ವಹಿಸುತ್ತಿತ್ತು. ಹಳ್ಳಿ ಹಳ್ಳಿಗೆ ಅಧಿಕಾರಿಗಳ ತಂಡ ಹೋಗಿ. ದೃಶ್ಯಗಳ ಮೂಲಕ ಜನರ ಬದುಕು ಹಸನಾಗುವ ಸಾಧ್ಯತೆಯ ಬಗ್ಗೆ ತಿಳಿವಳಿಕೆ ನೀಡುತ್ತಿದ್ದವು. ಸರ್ಕಾರ ಒದಗಿಸುವ ಸವಲತ್ತುಗಳ ಬಗ್ಗೆ, ಅದನ್ನು ಪಡೆವ ಮಾರ್ಗಸೂಚಿಗಳ ಬಗ್ಗೆ ಸವಿವರವಾದ ಮಾಹಿತಿಗಳನ್ನು ಕೊಡುತ್ತಿದ್ದವು. ಇದಕ್ಕೆ ಪರ್ಯಾಯವಾಗಿ ಬಂದ ದೂರದರ್ಶನ ಆ ಕೆಲಸವನ್ನು ಭಾಗಶಃವಾಗಿ ಮನಗಾಣಿಸುತ್ತಿದೆ. ಇದಕ್ಕೆ ಜನಾಭಿಪ್ರಾಯ, ಅವರ ಅಪೇಕ್ಷೆಯಲ್ಲಿನ ವೈವಿಧ್ಯತೆಯೂ ಕಾರಣವಿರಬಹುದು. ಅದು ಎಷ್ಟೇ ಮುತುವರ್ಜಿಯಿಂದ ಮಾಹಿತಿ ಪ್ರಸಾರ ಮಾಡಿದರೂ ಇತರ ವಾಹಿನಿಗಳ ಪೈಪೋಟಿಯಲ್ಲಿದು ಸೊರಗಿದಂತೇ ಕಾಣುತ್ತದೆ. ಒಂದೇ ಒಂದು ಸಮಾಧಾನ ಎಂದರೆ ವಿಷಯ ಮಂಡನೆಯನ್ನು ಚುಯಂಗಮ್ಮನAತೆ ಎಳೆಯದೆ ಕಾಲಮಿತಿಯನ್ನು ಕಾಯ್ದು ಕೊಂಡಿರುವುದು.
ಪ್ರಾದೇಶಿಕವಾಹಿನಿಗಳು: ಕನ್ನಡದಲ್ಲಿ ಸಾಕಷ್ಟು ವಾಹಿನಿಗಳಿವೆ. ಪ್ರಾದೇಶಿಕವಾಹಿನಿಗಳು ಪ್ರಾದೇಶಿಕ ಚಟುವಟಿಕೆಗಳನ್ನು ಕಾಣಿಸುವ ಸುದ್ದಿ ಮಾಧ್ಯಮಗಳಾಗಿ ಕಾರ್ಯವಹಿಸುತ್ತಿರುವುದೇ ಹೆಚ್ಚು. ಆದರೆ, ರಾಜ್ಯ-ರಾಷ್ಟçವ್ಯಾಪಿ ಪ್ರಸಾರವುಳ್ಳ ವಾಹಿನಿಗಳು ಸದಾಕಾಲ ತಮ್ಮ ಟಿಆರ್ಪಿಯನ್ನು ಹೆಚ್ಚಿಸಿಕೊಳ್ಳುವತ್ತಲೇ ಆಸಕ್ತಿ ವಹಿಸುತ್ತವೆ. ಇದಕ್ಕೆ ಕಾರಣ ಅವುಗಳ ಮಾರುಕಟ್ಟೆಯ ಗುಲಾಮಗಿರಿ, ವಾಣಿಜ್ಯಕರಣದ ಒತ್ತಡ, ಅಧಿಕಾರಶಕ್ತಿ ಗಳೊಂದಿಗಿನ ಕುಚುಕು. ಹೀಗಾಗಿ ಬಂಡಶಾಹಿಗಳ ಪರವಾಗಿ ಸ್ಪಂದಿಸುವುದು ಅವಕ್ಕೆ ಅನಿವರ್ಯ. ದೇಶದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದರೂ, ಅವಕ್ಕೆ ಬೆನ್ನು ಹಾಕಿ, ಮೌಢ್ಯವನ್ನು ಬೆಳೆಸುವಂಥ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತ, ಮತಾಂಧ ರಾಜಕಾರಣವನ್ನು ಪೋಷಿಸುವುದಕ್ಕೆ, ಬೆಂಬಲಿಸುವುದಕ್ಕೆ ಹಾತೊರೆಯುವ ವಾಹಿನಿಗಳು ಮನುಷ್ಯ ನನ್ನು ಮನುಷ್ಯನನ್ನಾಗಿ ರೂಪಿಸುವತ್ತ ಮುಖ ಮಾಡುವುದು ಕಡಿಮೆ. ಯಾವುದೇ ವಾಹಿನಿಯನ್ನು ನೋಡಿ, ಕ್ರೆöÊಂ ವಿಷಯ ಕಡ್ಡಾಯವಾಗಿರುತ್ತದೆ. ಕೊಲೆ, ಸುಲಿಗೆ, ದರೋಡೆ, ಕೋಮು-ಗಲಭೆ, ಅತ್ಯಾಚಾರದಂಥ ಸಂಗತಿಗಳನ್ನು ಮತ್ತೆ ಮತ್ತೆ ಮರುಪ್ರಸಾರ ಮಾಡುತ್ತವೆ. ಎಲ್ಲಾ ವಾಹಿನಿಗಳಲ್ಲೂ ಇದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಅವು ಕೊಡಮಾಡುವ ಃಡಿeಚಿಞiಟಿg ಟಿeತಿsಗಳಿಗೆ ತಲೆ-ಬುಡ-ಮಿದುಳುಗಳೂ ಇರುವುದಿಲ್ಲ. ಬಾತ್ಮೀದಾರ ಹಂಚಿಕೊಳ್ಳುವ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವಷ್ಟು ವ್ಯವಧಾನ ವಿರುವುದಿಲ್ಲ. ಉದಾಹರಣೆಗೆ ರಾಜಕಾರಣಿಗಳ ಮಾತನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಿದ್ದರೂ, ಅದೇ ರಾಜಕಾರಣಿ ತನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಿರಾಕರಿಸುವು ದನ್ನೂ ಅಷ್ಟೇ ಆಸಕ್ತಿಯಿಂದ ಪ್ರಸಾರ ಮಾಡುವ ವಾಹಿನಿಗಳ ನಡೆಗೆ ಏನು ಹೇಳಬೇಕು ? ಇಲ್ಲಿ ಮೂರ್ಖನಾಗುವವನು ಪ್ರೇಕ್ಷಕ !
ಇವರಿಗೆ ಬಹುಸಂಖ್ಯಾತರ ಬದುಕಿನ ಬವಣೆಯ ಪ್ರಸಾರಕ್ಕೆ ಸಮಯದ ಅಭಾವ ಕಾಡುತ್ತದೆ. ಆದರೆ ಸೆಲಬ್ರಿಟಿಗಳನ್ನೋ ಸಿನಿಮಾಮಂದಿಗಳ ದಿನಚರಿಯನ್ನೋ ತಿಳಿಸುವುದು ತಮ್ಮ ವಾಹಿನಿಗಳ ಹೆಚ್ಚುಗಾರಿಕೆ ಎಂದು ಭಾವಿಸುತ್ತವೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಇವು ಕೊಡುವ ಹಳಸಲು ಮಾಹಿತಿಗಳು ಕೆಲವೊಮ್ಮೆ ತಲೆನೋವು ತರಿಸುತ್ತವೆ; ಮನಸ್ಸಿನ ನೆಮ್ಮದಿ ಕೆಡಿಸುತ್ತವೆ. ಉದಾಹರಣೆಗೆ ಧರ್ಮಸ್ಥಳದ ಘಟನೆಯನ್ನು ನೋಡಿ. ಪ್ರಸಾರ ಮಾಡುವುದರಲ್ಲೂ ಪೈಪೋಟಿ; ವಾರಪೂರ್ತಿ ಅದೇ ಸುದ್ದಿ. ಬೇರೆ ಸುದ್ದಿಗಳೇ ಇಲ್ಲವೇ ? ನೋಡಿದ್ದನ್ನೇ ನೋಡಲು ಯಾರಿಗೆ ಪುರಸೊತ್ತಿರುತ್ತದೆ ? ಯಾರಲ್ಲಿ ಆಸಕ್ತಿ ಉಳಿದಿರುತ್ತದೆ ? ಹೇಳಿ. ಕೆಲವು ವಾಹಿನಿಗಳೂ ಯಥಾವತ್ತಾಗಿ ಸುದ್ದಿಯನ್ನು ಹಂಚುವುದಿಲ್ಲ. ಪೊಲೀಸರಂತೆ ಚಿತ್ರಿಸಲಾಗುತ್ತದೆ. ಹೆಣ್ಣಿನ ಅಸ್ತಿತ್ವ, ಆಕಾಂಕ್ಷೆಗಳಿಲ್ಲಿ ಗೌಣ. ಏನಿದ್ದರೂ ಆಕೆ ಕೌಟುಂಬಿಕ ಹಿತಾಸಕ್ತಿಯನ್ನೂ ರಕ್ಷಿಸುವ ಸಿದ್ದಮಾದರಿಯ ಪಡಿಯಚ್ಚು ಮಾತ್ರ. ಈಗೀಗ ಕೊಂಚ ಬದಲಾವಣೆಯ ಗಾಳಿ ಬೀಸುತ್ತಿದೆ. ಆದರೂ, ಆಧುನಿಕ ಸ್ತಿçà ಪಾತ್ರಧಾರತ್ವದ ಪ್ರತಿನಿಧೀಕರಣ ಪುರುಷ ಸಮಾಜದ ಅಲಿಖಿತ ಶಾಸನದಿಂದಾಗಿ ಮರೀಚಿಕೆಯಾಗೇ ಉಳಿದಿದೆ. ಇಲ್ಲಿಯೇ ಒಂದು ಮಾತನ್ನು ಸ್ಪಷ್ಟಪಡಿಸಬೇಕು. ನಮ್ಮ ಕಾಲದಲ್ಲಿ ಸಿನಿಮಾಗಳು ಸಾಮಾಜಿಕ ಜಾಗೃತಿ ಮೂಡಿಸುವ, ಸಹಜೀವನಕ್ಕೆ ಒತ್ತುಕೊಡುವ, ಅವಿಭಕ್ತ ಕುಟುಂಬದ ಇಲ್ಲವೆ ಮನುಷ್ಯ ಸಂಬAಧಗಳನ್ನು ಬೆಸೆಯುವಂಥ ಕಥಾ ಹಂದರದ ಮೇಲೆ ನಿರ್ದೇಶಿತವಾಗುತ್ತಿದ್ದವು. ಹೊಡಿ-ಬಡಿ, ಚಾಕು-ಚೂರಿ ಸಂಸ್ಕೃತಿಯಿರಲಿಲ್ಲ. ಅವು ಕಥೆಗೆ ಪೂರಕವಾಗಿದ್ದರೂ ಪ್ರೇಕ್ಷಕ ಅದನ್ನು ನಿರಾಕರಿಸಲೇಬೇಕಾದ ಸಂದರ್ಭ ಸನ್ನಿವೇಶಗಳನ್ನು ರೂಪಿಸಲಾಗುತ್ತಿತ್ತು. ಸಿನಿಮಾ ಸಂಗೀತವಾಗಲಿ, ಹಾಡಿನ ರಚನೆಯಾಗಲಿ ಮನಸ್ಸನ್ನು ಮುದಗೊಳಿಸುತ್ತಿದ್ದವು. ಈಗ ಅದಕ್ಕೆ ವಿರುದ್ಧವಾಗೇ ಚಿತ್ರಗಳು ಬರುತ್ತಿವೆ. ಕುಟುಂಬ ಸಮೇತ ಕುಳಿತು ನೋಡುವಂಥ ಸಿನಿಮಾಗಳು ಬರುತ್ತಿಲ್ಲ. ಯುವ ಜನಾಂಗವನ್ನು ಪ್ರಚೋದಿಸುವ, ಸುಪ್ತ ಕಾಮನೆಗಳನ್ನು ಉದ್ದೀಪಿಸುವ, ಹುಸಿ ನಾಯಕತ್ವವನ್ನು ಆರೋಪಿಸಿಕೊಳ್ಳು ವಂತಹ ಸಿನಿಮಾಗಳೇ ಹೆಚ್ಚು ಬರುತ್ತಿವೆ. ಪ್ರತ್ಯಕ್ಷ-ಪರೋಕ್ಷವಾಗಿ ಪುರುಷಶಕ್ತಿ ಮತ್ತು ಸ್ತಿçà ಅಧೀನತ್ವವನ್ನು ವ್ಯವಸ್ಥಿತವಾಗಿ ಪೋಷಿಸುತ್ತಿವೆ. ಇಂಥ ವೈರುಧ್ಯಗಳ ನಡುವೆಯೂ ಪ್ರಯೋಗಾತ್ಮಕ ಸಿನಿಮಾಗಳು ಹೊಸ ಕನಸುಗಳನ್ನು ಹುಟ್ಟುಹಾಕುತ್ತಿರುವುದು ಮೆಚ್ಚುವಂಥ ಸಂಗತಿ.
ಜಾಹೀರಾತೇ ಒಡೆಯ : ಜಾಹೀರಾತು ಮಾಧ್ಯಮವಂತೂ ಮೂಲತಃ ಮಾರುಕಟ್ಟೆ ಆಧಾರಿತವಾದುದು. ತಮ್ಮ ಉತ್ಪನ್ನಗಳಿಗೆ ಗ್ರಾಹಕರನ್ನು ಆಕರ್ಷಿಸುವುದೇ ಇದರ ಉದ್ದೇಶ. ಇದಕ್ಕಾಗಿ ರೂಪದರ್ಶಿಗಳನ್ನು ಬಳಸುತ್ತಾರೆ. ಇಲ್ಲಿ ಲಿಂಗತ್ವದ ಪ್ರಶ್ನೆ ಉದ್ಭವಿಸದು. ಹೆಣ್ಣು-ಗಂಡು ಯಾರೂ ರೂಪದರ್ಶಿ ಗಳಾಗಬಹುದು. ಏಕೆಂದರೆ ಇದೂ ಒಂಥರ ಉದ್ಯೋಗವೇ. ಹಣ ಗಳಿಕೆಯ ಮಾರ್ಗವೇ. ಸಾಮಾನ್ಯವಾಗಿದು ಸ್ವತಂತ್ರ ಗುತ್ತಿಗೆ ಆಧಾರಿತವಾಗಿರುತ್ತದೆ. ವಿಷಾದದ ಸಂಗತಿ ಎಂದರೆ ಬಹುಪಾಲು ಜಾಹೀರಾತುಗಳು ಹೆಣ್ಣನ್ನು ಸರಕಾಗೇ ಗ್ರಹಿಸಿವೆ; ಹೆಣ್ಣಿನ ಸೌಂದರ್ಯದ ವಿಕ್ರಯಕ್ಕೆ ಪ್ರಾಧಾನ್ಯತೆ ಕೊಟ್ಟಿವೆ. ಕನಿಷ್ಟ ಉಡುಗೆ ತೊಡಿಸಿ, ಪ್ರಚೋದನಕಾರಿ ಅರೆನಗ್ನ ಭಂಗಿ ಗಳಿಂದ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತವೆ. ಹೆಣ್ಣಿನ ವ್ಯಕ್ತಿತ್ವಕ್ಕೆ ಮಸಿಬಳಿದು ಲೈಂಗಿಕ ನಿಷ್ಠವಾಗಿ ಬಳಸಿಕೊಳ್ಳ ಲಾಗುತ್ತಿದೆ. ಗಂಡಸರ ಒಳಉಡುಪಿಗೂ, ಬಳಸುವ ಶೇವಿಂಗ್ ಕ್ರೀಮಿಗೂ, ಸೇದುವ ಸಿಗರೇಟಿಗೂ ಎಲ್ಲಿಂದ ಎಲ್ಲಿಯ ಸಂಬAಧ !? ಹೆಣ್ಣು ರೂಪದರ್ಶಿಗಳು ಅವನ್ನು ನೋಡಿ, ಆಸ್ವಾದಿಸಿ ಸಮರ್ಥಿಸುವಂತೆ ಚಿತ್ರಿಸಲಾಗುತ್ತದೆ. ಇಂಥ ಜಾಹೀರಾತು ಸಂದೇಶಗಳನ್ನು ಹದಿಹರಯದವರು ನಿಜವೆಂದು ಭಾವಿಸುತ್ತಾರೆ. ಇದರಿಂದ ಜಾಹೀರಾತಿನ ಮಾರುಕಟ್ಟೆ ಉದ್ದೇಶವೇನೋ ಈಡೇರುತ್ತದೆ. ಆದರೆ ಹದಗೆಡುವ ಯುವ ಮನಸುಗಳನ್ನು ಸರಿದಾರಿಗೆ ತರುವ ಜವಾಬ್ದಾರಿ ಯಾರದ್ದು ? ಉತ್ತರ ಸಿಗದ ಪ್ರಶ್ನೆಗಳಿವು.
ಸೌಂದರ್ಯವರ್ಧಕ ಸಾಮಗ್ರಿಗಳಿಗಂತೂ ಯಾವತ್ತೂ ಬೇಡಿಕೆ ಇದೆ. ಪಾರಂಪರಿಕವಾಗಿ ಸೌಂದರ್ಯದ ಕಲ್ಪನೆ ಗುಣವನ್ನು ಅವಲಂಬಿಸಿದ್ದಾಗಿದೆ. ಈಗದು ಬದಲಾಗಿದೆ. ಸೌಂದರ್ಯ ಎಂದರೆ ತೂಕರಹಿತ, ತೆಳುನಡು (ಜೀರೋಸೈಜ್), ಬಿಳಿಚರ್ಮ, ನೆರಿಗೆ ರಹಿತ ಮಿರುಗುವ ಕಾಂತಿ ಎನ್ನುವುದನ್ನು ಸ್ವೀಕರಿಸುವ ಪುರುಷ ನೋಟಕ್ಕೆ ಕಪ್ಪು ಮೈಬಣ್ಣದ ರೂಪದರ್ಶಿಯನ್ನು ಮುಖಾಮುಖಿಯಾಗಿರಿಸಿ, ಹೆಣ್ಣು ಬದಲಾಗಲೇಬೇಕಾದ ಸನ್ನಿವೇಶವನ್ನು ಒತ್ತಾಯ ಪೂರ್ವಕವಾಗಿ ಹೇರುವ ಜಾಹೀರಾತುಗಳ ಭರಾಟೆ ಹೆಚ್ಚುತ್ತಿದೆ. ಸಿದ್ದ ಮಾದರಿಯನ್ನು ಸ್ಥಿರೀಕರಣಗೊಳಿಸಲಾಗುತ್ತಿದೆ. ಹಣದ ಹಿಂದೆ ನಿರ್ಮಾಪಕರು ಓಡುತ್ತಿದ್ದಾರೆ. ಈ ಬಗೆಯ ಹೋಲಿಕೆಗಳು ಯುವಜನಾಂಗ ಮತ್ತು ಮಧ್ಯವಯಸ್ಕ ಮಹಿಳೆಯರ ದೇಹ ಮತ್ತು ಮನಸುಗಳ ಮಟ್ಟಿಗೆ ಇದರಿಂದ ವಿಸ್ತರಣೆಗೊಂಡಿದೆ. ಇದರಿಂದಾಗಿ ಯುವಜನತೆ ಓದುವ ಪ್ರಕ್ರಿಯೆಯಿಂದ ವಿಮುಖರಾಗುತ್ತಿದ್ದರೆ. ಮಕ್ಕಳು ತಮ್ಮ ಬಾಲ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಸಹಜ ಮನೋವಿಕಾಸವಾಗುತ್ತಿಲ್ಲ. ಸ್ವತಂತ್ರ ಆಲೋಚನಾ ಕ್ರಮ ದಕ್ಕುತ್ತಿಲ್ಲ. ಶೈಕ್ಷಣಿಕ ಬೆಳವಣೆಗೆಗೆ ಪೂರಕವಲ್ಲದ, ವಯೊಸಹಜ ಇತಿಮಿತಿ ಇಲ್ಲದ ಬೇಕು-ಬೇಡಗಳು ಮಕ್ಕಳು ಯುವ ಮನಸುಗಳನ್ನು ಪಾಶ್ಚಾತ್ತೀಕರಣಕ್ಕೊಳ ಮಾಡುತ್ತಿವೆ. ವಿಶೇಷವಾಗಿ ಮಕ್ಕಳ ಎಳೆಮನಸು ದುರ್ಬಲಗೊಳ್ಳುತ್ತಿವೆ. ಜೀವಕ್ಕೆ ಮಾರಕವಾಗುತ್ತಿವೆ. ಉದಾಹರಣೆಗೆ ಮಕ್ಕಳ ವೀಡಿಯೋ ಗೇಮ್ಗಳನ್ನು ಗಮನಿಸಿ, ಸಾಹಸಾದಿ ಪ್ರವೃತ್ತಿಯನ್ನು ಪ್ರಚೋದಿಸುತ್ತಲೇ ಪರೋಕ್ಷವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಗೇಮ್ ಒಡ್ಡುವ ಸವಾಲಿನಲ್ಲಿ ಸೋತ ಮಕ್ಕಳಂತು ಖಿನ್ನತೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಕಂಡಿದ್ದೇವೆ.
ಇವತ್ತಿನ ಮಕ್ಕಳು ಹದಿಹರಯದವರಿಗೆ ಸಾಮಾಜಿಕ ಮಾಧ್ಯಮಗಳೇ ಸರ್ವಸ್ವ, ಜ್ಞಾನಭಂಡಾರ. ದಿನದ ೨೪ ಗಂಟೆಯೂ ಅದೇ ಅವರ ಸಂಗಾತಿ. ಮಾಧ್ಯಮದಿಂದ ಮಾಧ್ಯಮಕ್ಕೆ ಜಿಗಿಯುವುದೇ ಹವ್ಯಾಸ, ತೃಪ್ತಿ, ಊಟ ನಿದ್ರೆಯನ್ನು ಕಡೆಗಣಿಸುವಷ್ಟು ಆಸಕ್ತಿ. ಕುಳಿತಲ್ಲೇ ಕುಳಿತುಕೊಳ್ಳುವುದರಿಂದ ದೈಹಿಕ ಚಟುವಟಿಕೆ ಇಲ್ಲದೆ ಮೈಮನ ಹಿಪ್ಪೆ ಯಾಗುವುದು. ಸಹಜ ಮನೋವಿಕಾಸವಾಗದು. ಮಾನಸಿಕ ದೃಢತೆ ಕುಂದುತ್ತದೆ. ಅಂಥವರಿAದ ಯಾವುದೇ ಉತ್ಪಾದನೆ (Pಡಿoಜuಛಿಣiviಣಥಿ) ನಿರೀಕ್ಷಿಸುವಂತಿಲ್ಲ. ಜಡ್ಡು ಹಿಡಿದ ಮನಸ್ಸು. ನಾಲ್ಕಾರು ತಾಸು ಒಂದೆಡೆ ಕೂರಲಾರರು, ನಿರ್ದಿಷ್ಟ ವಿಷಯವನ್ನು ತಲಸ್ಪರ್ಶೆಯಾಗಿ ಗ್ರಹಿಸಲಾರರು. ಒಂಟಿತನವನ್ನು ಬಯಸಿ, ಬಯಸಿ ತಂದುಕೊಳ್ಳುವುದರಿAದ ಮನುಷ್ಯ ರೊಂದಿಗಿನ ಒಡನಾಟ ಕ್ಷೀಣವಾಗಿ ಸಂಬAಧದ ಬೆಲೆ ಅರ್ಥವಾಗುವುದಿಲ್ಲ. ಕಾಲಕ್ರಮೇಣ ಒಂಟಿತನವೇ ಅವರನ್ನು ಶಾಪವಾಗಿ ಕಾಡಿದರೆ ಆಶ್ಚರ್ಯವಿಲ್ಲ.
ಜೀವನದ ಬಗ್ಗೆ, ಜಿಗುಪ್ಪೆ ಬಂದರೂ ಬರಬಹುದು! ಇನ್ನು ಸೈಬರ್ ಕ್ರೆöÊಮ್ಗಳು, ಹ್ಯಾಕಿಂಗ್ ಪ್ರಕರಣಗಳೂ ಸಾಮಾನ್ಯವಾಗುತ್ತಿವೆ. ನಕಲಿ ಖಾತೆಗಳು ಖಾಸಗೀತನವನ್ನು ಕೊಲ್ಲುತ್ತಿವೆ. ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ. ಅವುಗಳ ಸ್ವರೂಪ ಕಲ್ಪನೆಗೆ ಮೀರಿದ್ದಾಗಿದೆ. ಗುರುತಿಸಲೂ ಸಾಧ್ಯವಾಗುತ್ತಿಲ್ಲ. ಜನರೂ ಅಷ್ಟೇ, ತಿಳಿದೋ ತಿಳಿಯದೆಯೋ ಏಮಾರುತ್ತಿ ದ್ದಾರೆ. ಅವು ಒಡ್ಡುವ ಆಮಿಷಗಳಿಗೆ ಬಲಿಯಾಗಿ ಹಣವನ್ನೋ, ಜೀವವನ್ನೂ ಕಳೆದುಕೊಂಡ ಪ್ರಸಂಗಗಳಿವೆ. ಹಾಗೆಂದು ಎಲ್ಲವನ್ನು ತಪ್ಪು ಅಪ್ರಯೋಜಕ ಎಂದೂ ನಿರಾಕರಿಸುವಂತಿಲ್ಲ. ‘ಬುಕ್ಬ್ರಹ್ಮ' ಸಾಹಿತ್ಯಿಕ ಪರಿಚಾರಿಕೆ ಮಾಡುತ್ತಿದೆ. ಮರೆಯಾಗಿ ಹೋಗಬಹುದಾದ ಕನ್ನಡದ ಹಿರಿಕಿರಿಯ ಪ್ರಸಿದ್ಧ ಅಪ್ರಸಿದ್ಧ ಸಾಹಿತಿಗಳ ಕೃತಿಪರಿಚಯ ಮಾಡುವ ಮೂಲಕ ಅಭಿವ್ಯಕ್ತಿಯ ಸಾಧ್ಯತೆ, ಮಹತ್ವವನ್ನು ಜೀವಂತಗೊಳಿಸುತ್ತಿದೆ. ಯೂಟ್ಯೂಬ್ಗಳ ಮಾಹಿತಿಯನ್ನು ಸ್ವೀಕರಿಸಿಯೇ ಅನೇಕ ಮಹಿಳಾ ಉದ್ಯಮಿಗಳು ಪ್ರವರ್ಧಮನಕ್ಕೆ ಬಂದಿದ್ದಾರೆ. ಧಾರ್ಮಿಕ ಶೈಕ್ಷಣಿಕ ಉಪನ್ಯಾಸಗಳೂ ಆಸಕ್ತರನ್ನು ಸಕ್ರಿಯಗೊಳಿಸಿದೆ. ಘಿ ಮಾಧ್ಯಮಗಳು ರಾಜಕಾರಣದ ಆಗುಹೋಗಿಗೆ, ರಾಜಕೀಯಸ್ಕರ ಮನೋಭೂಮಿಕೆಯ ಮಾಧ್ಯಮವಾಗಿ ಮತದಾರರ ಗಮನ ಸೆಳೆಯುವಲ್ಲಿ ಮತ್ತು ನಿರಾಕರಿಸುವಲ್ಲಿ ಸಫಲವಾಗಿವೆ. ಫೇಸ್ಬುಕ್, ಅಪರಿಚಿತ ಜ್ಞಾನಶಾಖೆಗಳ ಬಗ್ಗೆ ಕುತೂಹಲ ಮೂಡಿಸುತ್ತ ಆಸಕ್ತರ