ಸೋಮವಾರಪೇಟೆ, ಆ. ೧೩: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮಡಿಕೇರಿಯ ಸ್ಮಿತಾ ನೇತ್ರ ಚಿಕಿತ್ಸಾಲಯ ಹಾಗೂ ಯಶಸ್ವಿನಿ ಸಮನ್ವಯಾಧಿಕಾರಿ ಬಿ.ಎಸ್. ಚೇತನ್ ಅವರುಗಳ ಆಶ್ರಯದಲ್ಲಿ ತಾ. ೧೫ರಂದು (ನಾಳೆ) ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧೨.೩೦ರವರೆಗೆ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾವೇರಪ್ಪ ತಿಳಿಸಿದ್ದಾರೆ.
ಮಾದಾಪುರದ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆಯುವ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಸಹಕಾರ ಸಂಘದ ಅಧ್ಯಕ್ಷ ಎನ್.ಎಂ. ಉತ್ತಪ್ಪ ನೆರವೇರಿಸಲಿದ್ದು, ಸ್ಮಿತಾ ನೇತ್ರ ಚಿಕಿತ್ಸಾಲಯದ ವೈದ್ಯ ಸಿ.ಆರ್. ಪ್ರಶಾಂತ್ ಉದ್ಘಾಟಿಸಲಿದ್ದಾರೆ.
ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಉಚಿತ ಕಣ್ಣಿನ ಪೊರೆ ಮತ್ತು ಇನ್ನಿತರ ಶಸ್ತç ಚಿಕಿತ್ಸೆಯನ್ನು ಮಾಡಿಸಿಕೊಡಲಾಗುವುದು. ಶಿಬಿರದಲ್ಲಿ ಕಣ್ಣಿನ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು ಸಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾವೇರಪ್ಪ ಮನವಿ ಮಾಡಿದ್ದಾರೆ.