ಮಡಿಕೇರಿ, ಆ. ೧೩: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯ್ತಿಯ ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಆಟಿ ಹಬ್ಬ ಸಂಭ್ರಮದಿAದ ನೆರವೇರಿತು. ಗ್ರಾಮ ವ್ಯಾಪ್ತಿಯ ಗೌಡ ಸಮುದಾಯದವರು ಹುಮ್ಮಸ್ಸಿನಿಂದ ಪಾಲ್ಗೊಂಡು ಸಾಮೂಹಿಕವಾಗಿ ಹಬ್ಬ ಆಚರಿಸಿದರು.
ಗೌಡ ಸಮಾಜ ಕಟ್ಟಡದಲ್ಲಿ ನಡೆದ ಕಾರ್ಯಕ್ರಮವನ್ನು ಊರಿನ ಹಿರಿಯರಾದ ಕುಂಬಗೌಡನ ಕಮಲ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥ ಹಾಗೂ ಪತ್ರಕರ್ತ ಕುಡೆಕಲ್ ಸಂತೋಷ್ ಆಟಿ ಹಬ್ಬಾಚರಣೆ ಹಿನ್ನೆಲೆ ಕುರಿತು ಮಾಹಿತಿ ನೀಡಿದರು. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿಕರೇ ಮೂಲಾಧಾರವಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಆಚರಿಸಲ್ಪಡುವ ಪ್ರತಿ ಹಬ್ಬಾಚರಣೆಗಳಿಗೂ ಕೃಷಿಯ ನಂಟು ಇರುವದಾಗಿ ಹೇಳಿದರು. ಗೌಡ ಸಮುದಾಯದವರು ಕೃಷಿಯಲ್ಲೇ ಬದುಕು ಕಟ್ಟಿಕೊಂಡವರು. ಕೃಷಿಯ ನಡುವೆ ಮಳೆಗಾಲದಲ್ಲಿ ಬರುವ ಹಬ್ಬವೇ ಆಟಿಯಾಗಿದ್ದು, ಆಟಿ ತಿಂಗಳಲ್ಲಿ ಸೇವಿಸುವ ವಿಶಿಷ್ಟ ತಿನಿಸುಗಳ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಇದೇ ಪ್ರಥಮ ಬಾರಿಗೆ ಮಕ್ಕಂದೂರಿನಲ್ಲಿ ಸಾಮೂಹಿಕವಾಗಿ ಆಚರಣೆ ಮಾಡಲಾಗುತ್ತಿದೆ. ಮುಂದಕ್ಕೆ ಇನ್ನೂ ವಿಜೃಂಭಣೆಯಿAದ ಆಚರಿಸುವಂತಾಗಲಿ ಎಂದು ಆಶಿಸಿದರು.
ಆಟಿ ತಿಂಗಳಲ್ಲಿ ಸಿಗುವ ಮದ್ದು ಸೊಪ್ಪಿನ ವಿಶೇಷತೆ, ಅದರಿಂದಾಗುವ ಪ್ರಯೋಜನಗಳು ಹಾಗೂ ತಯಾರಿಸುವ ವಿಧಾನಗಳ ಬಗ್ಗೆ ತೂಟೇರ ರೀಟಾ ಮಾಹಿತಿ ನೀಡಿದರು.
ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ, ವಿಎಸ್ಎಸ್ಎನ್ ನಿರ್ದೇಶಕ ಅಣ್ಣೆಚ್ಚಿರ ಸತೀಶ್ ಮಾತನಾಡಿ ಈ ಹಿಂದೆ ಆಟಿ ಹಬ್ಬ ಆಚರಣೆ ಮಾಡುತ್ತಿದ್ದ ಬಗ್ಗೆ ಹಾಗೂ ಇದೀಗ ಅಚರಣೆ ಮಾಡುತ್ತಿರುವ ಬಗ್ಗೆ ತಿಳಿಸಿದರು. ಇಂತಹ ಹಬ್ಬಾಚರಣೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕೆಂದರು. ಗೌಡ ಸಮಾಜದ ಮಾಜಿ ಅಧ್ಯಕ್ಷ ತೂಟೆರ ವೆಂಕಟರಮಣ ಹಾಗೂ ಶಿಕ್ಷಕ ಕುಂಬಗೌಡನ ರಂಜಿತ್ ಆಟಿ ಹಬ್ಬದ ಕುರಿತಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್ ಪ್ರಥಮ ಬಾರಿಯ ಹಬ್ಬಾಚರಣೆಗೆ ಸಹಕಾರ ನೀಡಿದಂತೆ ಮುಂದಿನ ಎಲ್ಲ ಕಾರ್ಯಕ್ರಮಗಳಿಗೂ ಸಹಕಾರ ನೀಡುವಂತೆ ಕೋರಿದರು.
ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ಚೀಯಂಡಿ ಸುಜಯ್ ಇದ್ದರು. ಈರೇಗೌಡನ ನೀಲಾವತಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೊಟ್ಟಕೇರಿಯನ ಪ್ರದೀಪ್ ಸ್ವಾಗತಿಸಿದರೆ, ಗುಡ್ಡೆಮನೆ ಯೋಗಾನಂದ ಸ್ವಾಗತಿಸಿ, ದೇರಣ್ಣನ ಸರೋಜ ವಂದಿಸಿದರು.
ಇದೇ ಸಂದರ್ಭ ಹಲವರು ಹಾಡು ಹಾಡಿ ರಂಜಿಸಿದರು. ಜನಾಂಗದ ಮಹಿಳೆಯರು ಮನೆಯಿಂದ ಮಾಡಿ ತಂದಿದ್ದ ವಿಶೇಷ ತಿನಿಸುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ನಂತರ ಎಲ್ಲರೂ ಸಹಭೋಜನದಲ್ಲಿ ಪಾಲ್ಗೊಂಡರು.