ಮಡಿಕೇರಿ, ಆ. ೧೩: ಮುಳಿಯ ಜ್ಯುವೆಲ್ಸ್ ಮಡಿಕೇರಿಯಲ್ಲಿ ಡೈಮಂಡ್ ಹಾಗೂ ಜೆಮ್ಸ್ ಜ್ಯುವೆಲ್ಲರಿ ಫೆಸ್ಟ್ಗೆ ವಿದುಷಿ ಮೇಘರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮತ್ತು ಡೈಮಂಡ್ ಆಭರಣಗಳ ಅನಾವರಣಗೊಳಿಸಿದರು.
ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮಾ ಪ್ರಾಸ್ತಾವಿಕ ಮಾತನಾಡಿ, ಮುಂದಿನ ಒಂದು ತಿಂಗಳುಗಳ ಕಾಲ ಡೈಮಂಡ್‌ನ ವಿಶಿಷ್ಟ ಆಭರಣಗಳ ಕಲೆಕ್ಷನ್ ಇರಲಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಚಂದ್ರಶೇಖರ್ ರವರು ಡೈಮಂಡ್ ಟೆಸ್ಟಿನ ಮಷೀನ್ (ಆಖಅ) ಅಳವಡಿಸಿರುವ ಬಗ್ಗೆ ಮಾಹಿತಿ ನೀಡಿದರು ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಮೂಲಕ ಗ್ರಾಹಕರಿಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ ಎಂದರು.
ಮಾರುಕಟ್ಟೆ ವ್ಯವಸ್ಥಾಪಕ ಕೃಷ್ಣ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.