ಸೋಮವಾರಪೇಟೆ, ಆ. ೧೪: ಬೆಂಗಳೂರಿನ ಎಸ್.ಜಿ. ಮಾಸ್ರ‍್ಸ್ ಅಸೋಸಿಯೇಷನ್ ವತಿಯಿಂದ ನಡೆಸಿದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಮೂಲತಃ ಸೋಮವಾರಪೇಟೆ ಆಲೇಕಟ್ಟೆ ನಿವಾಸಿ ಹೊನಾಲಿ ಕಿಶೋರ್, ಮಲೇಷಿಯಾದಲ್ಲಿ ನಡೆದ ಅಂತರರಾಷ್ಟಿçÃಯ ಮಟ್ಟದ ಸ್ಪರ್ಧೆಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆದಿದ್ದಾಳೆ.

ಮಲೇಷಿಯಾದ ಕೌಲಾಲಂಪುರ್‌ನಲ್ಲಿ ನಡೆದ ಅಂತರರಾಷ್ಟಿçÃಯ ಕರಾಟೆ ಟೆಕ್ವಾಂಡೋ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಈಕೆ ಭಾರತದ ತಂಡವನ್ನು ಪ್ರತಿನಿಧಿದ್ದಳು.

ಪಟ್ಟಣ ಸಮೀಪದ ಚೌಡ್ಲು ಆಲೇಕಟ್ಟೆ ರಸ್ತೆ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಹಾಗೂ ಪ್ರೀತಿ ದಂಪತಿ ಪುತ್ರಿ ಹೊನಾಲಿ ಕಿಶೋರ್, ಬೆಂಗಳೂರು ಸಿಂಧಿ ಹೈಸ್ಕೂಲ್‌ನಲ್ಲಿ ೫ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.