ಕೂಡಿಗೆ, ಆ. ೧೪: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ವ್ಯಾಪ್ತಿಗೊಳಪಡುವ ರೈತ ಮುಖಂಡರ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನಂಜರಾಯಪಟ್ಟಣ ದಾಸವಾಳ, ಚಿನ್ನೂರು, ದುಬಾರೆ, ಹೊಸಪಟ್ಟಣ, ರಂಗಸಮುದ್ರ, ವಿರೂಪಾಕ್ಷಪುರ ರೈತ ಮುಖಂಡರು ಭಾಗವಹಿಸಿದ್ದರು.

ಈ ಗ್ರಾಮ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಕಾಡಾನೆ ಹಾವಳಿ, ಕಾಡು ಹಂದಿ, ಹುಲಿ, ನವಿಲು, ಮಂಗಗಳು ಇವುಗಳ ಹಾವಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ಮತ್ತು ಸಾರ್ವಜನಿಕರಿಗೆ ತಿರುಗಾಡಲು, ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ತೆರಳಲು ಬಹಳ ತೊಂದರೆಯಾಗಿದ್ದು, ಸಂಕಷ್ಟ ಪಡುವಂತಹ ಪ್ರಸಂಗ ಎದುರಾಗಿರುವ ವಿಷಯಗಳ ಬಗ್ಗೆ ಸುಧೀರ್ಘವಾದ ಚರ್ಚೆಗಳು ನಡೆದವು.

ಸಭೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳ ಹಾವಳಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ದಾಸವಾಳ ಭಾಗದವರಾದ ಪ್ರಸನ್ನ ಕುಮಾರ್, ಚೇತನ್, ಸಚಿನ್ ಸೇರಿದಂತೆ ಅನೇಕ ರೈತರು ತಿಳಿಸಿದರು.

ಚಿನ್ಣುರು ಭಾಗದಲ್ಲಿ ಹ್ಯಾಂಗಿAಗ್ ಸೋಲಾರ್ ಹಾಗೂ ಆನೆ ಕಂದಕ ದುರಸ್ತಿ ಮಾಡಲು ಬಾಲಕೃಷ್ಣ, ಪವನ್, ಲೋಕನಾಥ್ ದುರಸ್ತಿಯ ಬಗ್ಗೆ ತಿಳಿಸಿದರು. ಹೊಸಪಟ್ಟಣ ರಂಗಸಮುದ್ರ ವಿರೂಪಾಕ್ಷಪುರ ಭಾಗದಲ್ಲಿ ಹ್ಯಾಂಗಿAಗ್ ಸೋಲಾರ್ ದುರಸ್ತಿ ಮಾಡಲು ಮಾವಜಿ ರವಿ, ಜಯಪ್ರಕಾಶ್ ಸಭೆಯ ಗಮನಕ್ಕೆ ತಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ಈಗಾಗಲೇ ರೈತ ಮುಖಂಡರ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಸಮಗ್ರವಾದ ಮಾಹಿತಿಯನ್ನು ಸಂಗ್ರಹ ಮಾಡಲಾಗಿದೆ ಅದರ ಮುಖೇನ ಸಂಬAಧಿಸಿದ ಇಲಾಖೆಯವರಿಗೆ ಪತ್ರ ವ್ಯವಹಾರವನ್ನು ನಡೆಸುವ ಬಗ್ಗೆ ತಿಳಿಸಿದರು. ಸಂಬAಧಿಸಿದ ಇಲಾಖೆ ಸಮರ್ಪಕವಾಗಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಸಮಿತಿಯನ್ನು ರಚಿಸಿ, ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.