ಗೋಣಿಕೊಪ್ಪ ವರದಿ, ಆ. ೧೪: ಪೊಂಬೊಳ್ಚ ಕೂಟದಿಂದ ಕೈಕೇರಿಯ ಭಗವತಿ ರಿಕ್ರಿಯೇಷನ್ ಕ್ಲಬ್ ಸಬಾಂಗಣದಲ್ಲಿ ಕಕ್ಕಡ ತೀನಿ ಪೈಪೋಟಿ ಪಿಂಞ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೂಟದ ಅಧ್ಯಕ್ಷ ಚಂಗೇಟಿರ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಕೊಡವರು ಮೂಲತಃ ಪ್ರಕೃತಿ ಪೂಜಕರು ಹಾಗೆ ಪ್ರಕ್ರತಿಯನ್ನು ಮುಂದಿನ ಪೀಳಿಗೆಗೆ ಕಾಪಾಡಿಕೊಳ್ಳುವುದರ ಜತೆಗೆ ಕೊಡವಾಮೆಯನ್ನು ಪೋಷಿಸಬೇಕಿದೆ. ಕೊಡವ ಭಾಷೆ, ಸಂಸ್ಕೃತಿ ಪೋಷಣೆ ನಮ್ಮ ಕರ್ತವ್ಯ ಎಂದು ತಿಳಿಸಿದರು.
ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ಪೋಡಮಾಡ ಭವಾನಿ ನಾಣಯ್ಯ ಮಾತನಾಡಿ, ಆಹಾರ ಪದ್ಧತಿಯಲ್ಲಿನ ವ್ಯತ್ಯಾಸದ ಬಗ್ಗೆ ತಿಳಿಸಿದರು. ಇಂದಿನ ಪೀಳಿಗೆಯ ಆಹಾರ ಪದ್ಧತಿ ಹಾಗೂ ಹಿಂದಿನ ಕಾಲದ ಜನರ ಆಹಾರ ಪದ್ಧತಿ ತುಂಬಾ ಬದಲಾವಣೆ ಕಂಡಿದೆ. ಉತ್ತಮ ಆಹಾರ ಪದ್ದತಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಇದು ಹಿಂದಿನ ಕಾಲದವರ ಆರೋಗ್ಯ ಮತ್ತು ಆಯುಷ್ಯದ ಗುಟ್ಟು ಎಂಬುದನ್ನು ಅರಿತುಕೊಳ್ಳಬೇಕು ಎಂದು ಅರಿವು ಮೂಡಿಸಿದರು.
ಕೂಟದ ಸ್ಥಾಪಕ ಕೋಟೆರ ಪೂಣಚ್ಚ, ಕೂಟದ ಉಪಾಧ್ಯಕ್ಷೆ ಮುಂಡ್ಯೋಳAಡ ಧರಣಿ ಜಗದೀಶ್ ಉಪಸ್ಥಿತರಿದ್ದರು. ಕಕ್ಕಡ ತೀನಿರ ಪೈಪೋಟಿಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಪೈಪೋಟಿಯಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಸದಸ್ಯೆ ಚೋವಂಡ ಜಮುನ ಪ್ರಾರ್ಥಿಸಿ, ಉಪಾಧ್ಯಕ್ಷೆ ಧರಣಿ ಜಗದೀಶ್ ಸ್ವಾಗತಿಸಿದರು. ಸಹಕಾರ್ಯದರ್ಶಿ ಅಜ್ಜಿಕುಟ್ಟೀರ ಭವ್ಯ ಬೋಪಣ್ಣ ನಿರೂಪಿಸಿದರು. ಕಾರ್ಯದರ್ಶಿ ಜಮ್ಮಡ ಮೋನ ಭೀಮಯ್ಯ ವಂದಿಸಿದರು.