ಪೊನ್ನಂಪೇಟೆ, ಆ. ೧೪: ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೨೦೨೫-೨೬ನೇ ಸಾಲಿನ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಯನ್ನು ನೆಲ್ಲಿಹುದಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆಂಟೋನಿ ವಿವಿಯನ್ ಆಲ್ವಾರಿಸ್ ದೀಪ ಬೆಳಗಿಸುವ ಮೂಲಕ ನೆರವೇರಿ ಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವು ದರಿಂದ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆ, ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವುದರ ಮೂಲಕ ತಾವೆಲ್ಲರೂ ಉತ್ತಮ ಸಮಾಜ ಕಟ್ಟುವ ಕಾರ್ಯದಲ್ಲಿ ಕೈಜೋಡಿಸ ಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲ ಜಿ.ಎನ್. ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಆರ್. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ. ವಿ. ಲೋಕೇಶ್ ಅತಿಥಿಗಳ ಪರಿಚಯ ಮಾಡಿದರು. ಸುಜಾತ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಇದೇ ಸಂದರ್ಭ ಕಾಲೇಜು ವಿದ್ಯಾರ್ಥಿ ನಾಯಕನಾಗಿ ಸಿದ್ದಿಕ್, ನಾಯಕಿಯಾಗಿ ಮೀರಾ ಕೆ.ಜೆ., ಕ್ರೀಡಾ ಮಂತ್ರಿಯಾಗಿ ಪವನ ಮತ್ತು ಲಕ್ಷಿö್ಮ, ಶಿಸ್ತು ಮಂತ್ರಿಯಾಗಿ ಜಿ.ಎಸ್. ಚಂದನ್, ಮಹಮದ್ ರಹೀಶ್, ಧನ್ಯ ಕಲ್ಕರ್ ಮತ್ತು ನಿತ್ಯ ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಎಸ್. ಕುಶಾಲಪ್ಪ, ಉಪ ಪ್ರಾಂಶುಪಾಲ ಚಂಗಪ್ಪ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಮಕೃಷ್ಣ, ನಿವೃತ್ತ ಉಪನ್ಯಾಸಕ ವಸಂತ ಕುಮಾರ್, ವಿದ್ಯಾರ್ಥಿ ಪೋಷಕ ಪ್ರತಿನಿಧಿ ರಾಜೇಂದ್ರನ್, ಉಪನ್ಯಾಸಕರಾದ ಪೂರ್ಣಿಮ, ಪವಿತ್ರ, ಪ್ರಮೀಳ, ಶಾನ್ ನಾಣಯ್ಯ, ಸರ್ಫಾನ, ನೇತ್ರ, ಸಿಬ್ಬಂದಿಗಳಾದ ನಿಂಗಪ್ಪ ಓತಿಹಾಳ, ಮಾಲಿನಿ ಉಪಸ್ಥಿತರಿದ್ದರು. ನವ್ಯ ಪ್ರಾರ್ಥಿಸಿ, ಉಪನ್ಯಾಸಕಿ ಪಲ್ಲವಿ ಸ್ವಾಗತಿಸಿ, ಸಿ.ಟಿ. ಸಬಿತಾ ವಂದಿಸಿ, ಗ್ರಂಥಪಾಲಕ ಸಿದ್ದಲಿಂಗ ಸ್ವಾಮಿ ನಿರೂಪಿಸಿದರು.