ಕುಶಾಲನಗರ, ಆ. ೧೬: ಅತಿ ಹಚ್ಚಿನ ಬೇಡಿಕೆ ಹೊಂದಿರುವ ಬೆಣ್ಣೆ ಹಣ್ಣು (ಬಟರ್ ಫ್ರೂಟ್) ದರ ದಿಢೀರನೆ ಇಳಿಕೆಗೊಂಡಿದೆ. ಕೆ.ಜಿ. ಒಂದಕ್ಕೆ ಕುಶಾಲನಗರ ಸುತ್ತಮುತ್ತ ರೂ. ೮೦ ರಿಂದ ನೂರರ ತನಕ ಮಾರಾಟ ಮಾಡಲಾಗುತ್ತಿತ್ತು.
ಇದೀಗ ಕೆ.ಜಿ. ಒಂದಕ್ಕೆ ೧೫ ರಿಂದ ೨೦ ರೂ.ಗಳವರಗೆ ದರ ಇಳಿಕೆಯಾಗಿದೆ. ಈ ಬಾರಿ ಹೆಚ್ಚಿನ ಪ್ರಮಾಣದ ಬೆಳೆ ಬಂದ ಕಾರಣ ದರ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-ಸಿಂ