ಕೂಡಿಗೆ, ಆ. ೧೬: ಜಿಲ್ಲೆಗೆ ಅಗಮಿಸಿರುವ ಎನ್.ಡಿ.ಆರ್.ಎಫ್. ತಂಡವು ಕೂಡಿಗೆ ಕೃಷಿ ಕ್ಷೇತ್ರದಲ್ಲಿ ತರಬೇತಿ ಕೇಂದ್ರದಲ್ಲಿದ್ದು, ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ, ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಲವು ಬಗೆಯ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಪಾತ್ರ ಇರುವಿಕೆಯನ್ನು ತೋರಿಸಿದರು.

ಎನ್.ಡಿ.ಆರ್.ಎಫ್.ನ ಇನ್ಸ್ಪೆಕ್ಟರ್ ರಾಮ್ ಬಾಜಿ ಅವರ ನೇತೃತ್ವದಲ್ಲಿ ಬಂದ ತಂಡ ಕಾಲೇಜಿನ, ಮತ್ತು ಮೊರಾರ್ಜಿ ಶಾಲೆಯ ಸಹಭಾಗಿತ್ವದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡAತೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದರು. ರಾಮ್ ಬಾಜಿ ಮಾತನಾಡಿ, ಇಡೀ ದೇಶದಲ್ಲಿ ಸೈನಿಕ ತಂಡ ಗಿಡ ನೆಡುವುದರ ಮೂಲಕ ರಾಷ್ಟ್ರದ ಪರಿಸರ ಸಂರಕ್ಷಣೆಯಲ್ಲಿ ತಮ್ಮಗಳ ಪಾತ್ರವನ್ನು ನೆನಪಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಹಂಡ್ರAಗಿ ನಾಗರಾಜ್ ಮಾತನಾಡಿ, ದೇಶ ಕಾಯುವ ಸೈನಿಕರು ಪ್ರಕೃತಿ ವಿಕೋಪಕ್ಕೆ ಗುರಿಯಾದ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಬದಿಗಿಟ್ಟು ಜನರ ರಕ್ಷಿಸುವ ಕೆಲಸವಲ್ಲದೆ ಇಂತಹ ಮಹಾನ್ ಕೆಲಸವನ್ನು ಮಾಡುತ್ತಿರುವುದು ಗೌರವ ತರುವಂತಹ ವಿಚಾರವಾಗಿದೆ ಎಂದು ತಿಳಿಸಿದರು. ಪರಿಸರ ಸಂರಕ್ಷಣೆ ವಿಷಯದ ಬಗ್ಗೆ ಮಕ್ಕಳ ಜವಾಬ್ದಾರಿ ಬಗ್ಗೆ ಸವಿಸ್ತಾರವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಕೆ.ಆರ್. ಭಾರತಿ ಮಾತಾನಾಡಿದರು.

ಸುಭಾಷ್ ಶೀಂಧೇ, ನಿಂಗೇಗೌಡ, ಎಫ್ ಎಸ್. ಎಲ್ಲಪ್ಪ, ಕಾಲೇಜಿನ ಉಪನ್ಯಾಸಕರಾದ ಕಾವೇರಮ್ಮ, ನಾಗಪ್ಪ, ರಮೇಶ್, ಸತೀಶ್, ಮೊರಾರ್ಜಿ ಶಾಲೆಯ. ಶಿಕ್ಷಕರಾದ ಹೆಚ್. ಬಿ. ದಿನೇಶರ್ಚಾರಿ, ಕೆ.ವಿ. ಅಮೃತ, ಎಂ.ಆರ್. ಮೀನಾ, ಕೆ.ಕೆ. ಆಶ್ವತಿ, ಸೇರಿದಂತೆ ಉಪನ್ಯಾಸಕ ವೃಂದ ಹಾಗೂ ಎನ್‌ಡಿಆರ್‌ಎಫ್ ತಂಡದವರು, ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.