ನಾಪೋಕ್ಲು, ಆ. ೧೬: ಪ್ರಥಮ ಪ್ರಯತ್ನ ಯಶಸ್ವಿಯಾದರೆ ಕೊನೆಯವರೆಗೂ ಶುಭಫಲ ದೊರೆಯುತ್ತದೆ. ಆಟಿ ಹಬ್ಬದ ಆಚರಣೆಗಳು ಹಲವಾರು ಕಡೆಗಳಲ್ಲಿ ನಡೆದಿದ್ದರೂ ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ಕೊಡಗು ಗೌಡ ಸಮಾಜಗಳ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಗೌಡ ಸಮಾಜ ಚೇರಂಬಾಣೆ ಮತ್ತು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಸಂಯುಕ್ತ ಆಶ್ರಯದಲ್ಲಿ ಆಟಿ ಜಂಬರ ೨೦೨೫ ಪ್ರಯುಕ್ತ ಕಾರುಗುಂದ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಪ್ರಮಾಣದ ಸಾಂಪ್ರದಾಯಿಕ ತಿನಿಸು ಗಳನ್ನು ಮಾಡಿ ಪ್ರದರ್ಶನ ಮಾಡಿರುವುದು ಶ್ಲಾಘನೀಯ. ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಪೈಪೋಟಿ ನೀಡುವುದು ಕೂಡ ಕಷ್ಟವೇ ಎಂದರು.
ಸಾAಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನದ ಉದ್ಘಾಟನೆ ಮಾಡಿದ ಕೊಡಗು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೆರ ಪುಷ್ಪಾವತಿ ರಮೇಶ್ ಅವರು ಮಾತನಾಡಿ ಈ ಬಗೆಯ ತಿಂಡಿ ತಿನಿಸುಗಳನ್ನು ಕಣ್ಣಿನಿಂದ ನೋಡಿರಲು ಸಾಧ್ಯವಿಲ್ಲ ಕೇಳಿರಲು ಸಾಧ್ಯವೇ ಇಲ್ಲ. ಇಂತಹ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕೆ ಇರಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ. ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ಆಯೋಜಿಸಿರುವ ಇಂತಹ ಉತ್ತಮ ಕಾರ್ಯಕ್ರಮಗಳಿಂದ ಸಂಘಟನೆ ಬಲವರ್ಧನೆ ಸಾಧ್ಯ ಎಂದರು.
ಸಾAಪ್ರದಾಯಿಕ ಹಾಗೂ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಆನೇರ ಜಾನಕಿ ಮೋಹನ್ ಅವರು, ಮುಂದೊAದು ದಿನ ಯಾರಾದರೂ ಒಬ್ಬ ಇಂತಹ ಸಾಂಪ್ರದಾಯಿಕ ವಸ್ತುಗಳನ್ನು ಸಂಶೋಧನಾ ರೂಪದಲ್ಲಿ ಹೊರತರಲಿ ಎಂದು ಆಶಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಪ್ರಾಂಶುಪಾಲರಾದ ಕೆ.ಜಿ ದಿವಾಕರ ಅವರು ನಮ್ಮ ಆಹಾರಗಳು ಅಳಿದುಹೋಗುವ ಕಾಲಕ್ಕೆ ಇಂತಹ ಕಾರ್ಯಕ್ರಮ ಈ ಆಹಾರಗಳಿಗೆ ಪುನಶ್ಚೇತನ ನೀಡಿದೆ. ಹಾಗೆಯೇ ನಮ್ಮ ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಿಳಿಸಿ ಬೆಳೆಸುವ ದೃಷ್ಟಿಯಿಂದ ಮಹಿಳಾ ಒಕ್ಕೂಟದ ಸಹೋದರಿಯರು ಉತ್ತಮ ಹೆಜ್ಜೆ ಇಟ್ಟಿದ್ದಾರೆ. ಸುಮಾರು ೧೭೦ ಬಗೆಯ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ನೂರಕ್ಕೂ ಹೆಚ್ಚು ಪಾರಂಪರಿಕ ವಸ್ತುಗಳ ಪ್ರದರ್ಶನ ಆಯೋಜಿಸುವುದು ಎಂದರೆ ಸುಲಭದ ಮಾತಲ್ಲ. ಇದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರಿಸುವ ಕಾರ್ಯಕ್ರಮ ಎಂದು ನುಡಿದರು.
ಮುಖ್ಯ ಅತಿಥಿಗಳನ್ನು ಸಂಪ್ರದಾಯದAತೆ ಕಂಚಿಮಿ ಹಿಡಿದು ಸ್ವಾಗತ ನೀಡಲಾಯಿತು. ಆಟಿ ಜಂಬರವನ್ನು ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಅವರು ಉದ್ಘಾಟಿಸಿ, ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಚೇರಂಬಾಣೆ ಗೌಡ ಸಮಾಜದ ಬೆನ್ನೆಲುಬಾಗಿ ರಚನೆಯಾಗಿರುವ ಮಹಿಳಾ ಒಕ್ಕೂಟದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಗೌಡ ಜನಾಂಗದ ಸಂಸ್ಕೃತಿ ಬಹಳ ಶ್ರೀಮಂತವಾದುದು. ಈ ಕಾರ್ಯಕ್ರಮದ ಯಶಸ್ವಿಗೆ ಮಹಿಳೆಯರ ಬೆಂಬಲ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ಪೇರಿಯನ ಉದಯ, ಪುದಿಯನೆರವನ ರೇವತಿ ರಮೇಶ್, ತಲಕಾವೇರಿ ದೇವತಕ್ಕರಾದ ಕೋಡಿ ಮೋಟಯ್ಯ, ಭಾಗಮಂಡಲ ಪ್ರಗತಿಪರ ಜೇನು ಕೃಷಿಕರ ಸಂಘದ ಅಧ್ಯಕ್ಷ ಹೊಸೂರು ಸತೀಶ್ಕುಮಾರ್, ತುಂತಜೆ ಗಣೇಶ್, ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್, ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ಹೊಸೋಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲ ಅಪ್ಪಾಜಿ, ಚೊಕ್ಕಾಡಿ ಪ್ರೇಮ ರಾಘವಯ್ಯ ಸೇರಿದಂತೆ ಗಣ್ಯರು, ದೇವನೂರು ಒಕ್ಕೂಟದ ಸದಸ್ಯರು ನೆರೆದಿದ್ದರು. ಮಧ್ಯಾಹ್ನದ ಭೋಜನಕ್ಕಾಗಿ ಆಟಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು. ವಿಶೇಷವಾಗಿ ಕರಿ ಕಾಫಿ ಮನೆ ತಿಂಡಿ ಆಕರ್ಷಣೀಯವಾಗಿತ್ತು. ಗೌಡ ಸಮಾಜ ಹಾಗೂ ವೇದಿಕೆಯನ್ನು ಸಂಪೂರ್ಣವಾಗಿ ಈ ಸಂದರ್ಭದಲ್ಲಿ ಸಿಗುವ ಕಾಡುಹೂವು ಮತ್ತು ಹಣ್ಣುಗಳಿಂದ ಅಲಂಕರಿಸಲಾಗಿತ್ತು ಯಾವುದೇ ಕೃತಕ ಹೂ ಹಣ್ಣು ವಸ್ತುಗಳು ಕಂಡುಬರಲಿಲ್ಲ.
ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಗೆ ಅರೆಭಾಷೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಶಿಕ್ಷಕಿ ತಳೂರು ಉಷಾರಾಣಿ, ನಡುವಟ್ಟಿರ ಸುಮಾ ತೀರ್ಪುಗಾರರಾಗಿ ಭಾಗವಹಿಸಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನರಂಜಿಸಿದವು. ಸಮಾಜದ ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್ ಸ್ವಾಗತಿಸಿ, ನಿರ್ದೇಶಕ ಕೊಡಗನ ತೀರ್ಥ ಪ್ರಸಾದ್ ವಂದಿಸಿದರು. ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಕಾರ್ಯಕ್ರಮ ನಿರೂಪಿಸಿದರು.