ಧರ್ಮಸ್ಥಳ, ಆ. ೧೬: ಧರ್ಮಸ್ಥಳ ಸುತ್ತಮುತ್ತ ನಡೆಯುತ್ತಿದ್ದ ಕಾರ್ಯಾಚರಣೆ ಇದೀಗ ಸ್ಥಗಿತಗೊಂಡಿದೆ ಎನ್ನಲಾಗಿದೆ. ನಿಗೂಢ ಸಾವಿನ ವಿಚಾರ ವಿಶ್ವಾದ್ಯಂತ ತೀವ್ರ ಚರ್ಚೆಗೆ ಒಳಪಟ್ಟಿದೆ. ಈ ವಿಚಾರವಾಗಿ ಸಾಕ್ಷಿದಾರನೊಬ್ಬ ಎಸ್.ಐ.ಟಿ. ಮುಂದೆ ಹಾಜರಾಗಿ ಶವಗಳನ್ನು ಹೂತುಹಾಕಿದ್ದ ಬಗ್ಗೆ ಹೇಳಿಕೊಂಡಿದ್ದ. ಈ ಹಿನ್ನೆಲೆ ಕಳೆದ ಹಲವು ದಿನಗಳಿಂದ ಸಾಕ್ಷಿದಾರ ತೋರಿಸಿದ ಜಾಗದಲ್ಲಿ ನಡೆಯುತ್ತಿದ್ದ ಉತ್ಖನನ ಕಾರ್ಯ ಸ್ಥಗಿತಗೊಳಿಸಿ ಕಾರ್ಮಿಕರಿಗೆ ಸಂಬಳ ನೀಡಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.