ಮಡಿಕೇರಿ, ಆ. ೧೬ : ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ನಗರದಾದ್ಯಂತ ನೆಲದಾಳದ ವಿದ್ಯುತ್ ಕೇಬಲ್ ಅಳವಡಿಕೆಗೆ ಚಿಂತನೆ ಹರಿಸಲಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ತನ್ಮಯಿ ಎಂ.ಎನ್. ಅವರಿಗೆ ಮಡಿಕೇರಿ ಲಯನ್ಸ್ ಸಂಸ್ಥೆ ವತಿಯಿಂದ ಜರುಗಿದ ಸನ್ಮಾನವನ್ನು ನೆರವೇರಿಸಿ ಮಾತನಾಡಿದ ಶಾಸಕರು ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕದ ಆದ್ಯತೆಯಾಗಿ ನಗರದಾದ್ಯಂತ ವಿದ್ಯುತ್ ಕೇಬಲ್‌ನ್ನು ಅಂಡರ್ ಗ್ರೌಂಡ್ ಮೂಲಕ ಅಳವಡಿಸುವ ಚಿಂತನೆಯಿದೆ. ರಾಜ್ಯ ವಿದ್ಯುತ್ ಇಲಾಖೆಯ ಸಚಿವರಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು. ಮಡಿಕೇರಿಯಲ್ಲಿ ವರ್ಷದ ೫-೬ ತಿಂಗಳೂ ಮಳೆಬೀಳುವ ಹಿನ್ನೆಲೆಯಲ್ಲಿ ಮೂಲಸೌಲಭ್ಯಕ್ಕೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಮೂಲಸೌಲಭ್ಯಕ್ಕೆ ಗಮನ ನೀಡಲಾಗುತ್ತದೆ. ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿಯೂ ಕಾಲುಹಾದಿ ನಿರ್ಮಾಣದ ೭ನೇ ಪುಟಕ್ಕೆ ಮೊದಲ ಪುಟದಿಂದ) ಯೋಜನೆ ಜಾರಿಯಾಗಲಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಸಂಬAಧಿ ಚಿಕಿತ್ಸಾ ಘಟಕ ಪ್ರಾರಂಭಿಸಿ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಮುಂದಾಗುತ್ತೇವೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ, ಜನಪ್ರತಿನಿಧಿಗಳ ಪ್ರಯತ್ನದೊಂದಿಗೆ ಸರ್ವ ಜನತೆಯ ಸಹಕಾರ ಕೂಡ ಅಗತ್ಯವಾಗಿದೆ. ಸ್ಟೋನ್ ಹಿಲ್‌ನಲ್ಲಿ ರೂ. ೫ ಕೋಟಿ ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕವು ಮಳೆಗಾಲದ ನಂತರ ಬಳಕೆಗೆ ಲಭಿಸಲಿದೆ. ಕ್ರೀಡಾಪಟುಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸೆಮಿ ಒಳಾಂಗಣ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ ಮಂತರ್ ಗೌಡ ಮಡಿಕೇರಿಯನ್ನು ಭವಿಷ್ಯದ ಪೀಳಿಗೆಗೆ ಸುಂದರವಾಗಿಸುವ ಪಣವನ್ನು ಎಲ್ಲರೂ ತೊಡಬೇಕಾಗಿದೆ ಎಂದು ಕರೆ ನೀಡಿದರು.
ಸೋಮವಾರದಂದು ವಿಧಾನಸಭೆಯಲ್ಲಿ ಭೂಕುಸಿತ ಸಂಬAಧ ತಾನು ಚರ್ಚಿಸಲಿದ್ದು , ಮಳೆಗಾಲದಲ್ಲಿ ಸಂಭವಿಸುವ ಅನಾಹುತಗಳ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಿದ್ದೇನೆ. ವಸತಿ ಮತ್ತು ಭೂರಹಿತರ ಸಮಸ್ಯೆಗೂ ಸ್ಪಂದಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸುವುದಾಗಿಯೂ ತಿಳಿಸಿದರು. ತನ್ಮಯಿ ಶೈಕ್ಷಣಿಕ ಸಾಧನೆ ಇತರ ವಿದ್ಯಾರ್ಥಿಗಳಿಗೂ ಆದರ್ಶವಾಗಬೇಕೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎನ್. ತನ್ಮಯಿ, ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ, ೬೨೨ ಅಂಕಗಳಿಸಿದ್ದ ತನ್ನ ಸಹೋದರನ ಸ್ಪೂರ್ತಿಯೇ ತನಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಬರಲು ಕಾರಣವಾಯಿತು.
ಪವರ್‌ಮೆನ್‌ಗಳಿಗೆ ಸನ್ಮಾನ
ಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳ ನಡುವೆ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿಯ ಪವರ್‌ಮೆನ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಪವರ್‌ಮೆನ್‌ಗಳಾದ ಶಿವಣ್ಣ, ರತ್ನಯ್ಯ, ಮಂಜುನಾಥ್, ತಿಮ್ಮೇಗೌಡ, ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಪವರ್‌ಮೆನ್ ರತ್ನಯ್ಯ, ಜನತೆಗೆ ವ್ಯತ್ಯಯವಾಗದಂತೆ ವಿದ್ಯುತ್ ಸಂಪರ್ಕ ನೀಡುವುದೇ ಪವರ್‌ಮೆನ್‌ಗಳಾಗಿ ಕರ್ತವ್ಯವಾಗಿದೆ. ವೃತ್ತಿಯಲ್ಲಿ ಜನರ ಹೊಗಳಿಕೆ, ತೆಗಳಿಕೆ, ಟೀಕೆಗಳನ್ನೂ ಸಮಾನಾಗಿ ಸ್ವೀಕರಿಸಿದ್ದೇವೆ ಎಂದು ಹೇಳಿದರು.
ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮದನ್ ಮಾದಯ್ಯ, ಕಾರ್ಯದರ್ಶಿ ಕೆ. ಮಧುಕರ್, ವಲಯಾಧ್ಯಕ್ಷ ಕೆ.ಎಸ್. ನಟರಾಜ್, ಖಜಾಂಜಿ ಕೆ. ದಾಮೋದರ್ ವೇದಿಕೆಯಲ್ಲಿದ್ದರು.