ಹೆಬ್ಬಾಲೆ, ಆ. ೧೬ : ಕೆನರಾ ಬ್ಯಾಂಕ್ ಹೆಬ್ಬಾಲೆ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ೫ ಮತ್ತು ೬ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರತಿ ಮಗುವಿಗೂ ೫೦೦೦ ರೂಗಳ ಚೆಕ್ಕನ್ನು ವಿತರಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್ ಎಂ ವೆಂಕಟೇಶ ವಹಿಸಿದ್ದರು. ಇದೇ ಸಂದರ್ಭ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಎಸ್ ಮಹೇಶ್ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಚೆಕ್ ವಿತರಣೆ ಮಾಡಿದರು. ಈ ಸಂದರ್ಭ ಶಾಲಾ ದೈಹಿಕ ಶಿಕ್ಷಕಿಯಾದ ವಂಜಮ್ಮ. ಶಿಕ್ಷಕರಾದ ಶಿವಾನಂದ ಮತ್ತು ರಮ್ಯ ಹಾಜರಿದ್ದರು. ಪುಷ್ಪಾವತಿ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಬಬಿತ ವಂದಿಸಿದರು.