ಶನಿವಾರಸಂತೆ, ಆ. ೧೬: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ವಲಯ ಒಕ್ಕೂಟದ ವತಿಯಿಂದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸಂಘಗಳ ಸದಸ್ಯರು ಬನದ ದೇವಸ್ಥಾನದ ಸುತ್ತಲಿನ ಆವರಣದಲ್ಲಿ ಬೆಳೆದಿದ್ದ ಕಳೆಸಸ್ಯ, ಮುಳ್ಳುಪೊದೆಗಳನ್ನು ಕಡಿದು, ಪೂಜಾ ಸಾಮಗ್ರಿಗಳನ್ನು ತೊಳೆದು ಶ್ರಮದಾನ ಮಾಡಿದರು.ನಂತರ ದೇವಿ-ದೈವಕ್ಕೆ ಹೂವು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಸೇವಾ ಪ್ರತಿನಿಧಿ ಮಂಜುಳಾ, ಒಕ್ಕೂಟದ ಸದಸ್ಯರಾದ ದೀಪಿಕಾ, ಕಲಾವತಿ, ಲಕ್ಷ್ಮೀ, ಜಲಜಾ, ಮಮತಾ, ಹಸೀನಾ, ಲತಾ, ನಸೀಮಾ, ಅನಿತಾ, ಹೊನ್ನಮ್ಮ, ರತ್ನಮ್ಮ, ಶ್ರುತಿ, ಇತರರು ಹಾಜರಿದ್ದರು.