ಚೆಯ್ಯಂಡಾಣೆ, ಆ. ೧೭: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆಯಿತು. ಕುಪ್ಪೋಡಂಡ ಅಬ್ದುಲ್ ರಶೀದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ಬಾರಿಯ ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಅದಂ.ಎಸ್. ಕುಶಾಲನಗರ ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಕೆ.ಎ. ನಾಪೋಕ್ಲು, ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಕುಪ್ಪೋಡಂಡ ಎಡಪಾಲ, ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್ ಬಜೆಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಆದಂ. ಎಸ್. ಕುಶಾಲನಗರÀÀÀ, ಸಹಕಾರ್ಯದರ್ಶಿಯಾಗಿ ಹ್ಯಾರಿಸ್ ನಂಜರಾಯಪಟ್ಟಣ, ಕೋಶಾಧಿಕಾರಿಯಾಗಿ ಮುಜೀಬ್ ಮೂರ್ನಾಡು ಆಯ್ಕೆಯಾದರೆ, ನಿರ್ದೇಶಕರಾಗಿ ಅಬ್ದುಲ್ ರಜಾಕ್ ಎಂ.ಕೆ. ಎಡಪಾಲ, ಹ್ಯಾರಿಸ್ ಲಾರ ಮಡಿಕೇರಿ, ಅಶ್ರಫ್ ಕುಂಜಿಲ, ಬಾಷಾ ಕುಶಾಲನಗರ, ಆತಿಫ್ ಮನ್ನಾ ವೀರಾಜಪೇಟೆ, ಜುನೈದ್ ಕೆ.ಎಂ. ಕಡಂಗ, ಕಾನೂನು ಸಲಹೆಗಾರರಾಗಿ ಸುಫಿಯಾನ್ ಮಡಿಕೇರಿ, ಮಾಧ್ಯಮ ಸಲಹೆಗಾರರಾಗಿ ಅಶ್ರಫ್ ಚೆಯ್ಯಂಡಾಣೆಯವರನ್ನು ಆಯ್ಕೆ ಮಾಡಲಾಯಿತು. ಅದಂ ಸ್ವಾಗತಿಸಿ, ಹಾರಿಸ್ ವಂದಿಸಿದರು.