ವೀರಾಜಪೇಟೆ, ಆ. ೧೭: ವಿದ್ಯುತ್ ಅವಘಡದಿಂದ ಹಸು ಸಾವನ್ನಪ್ಪಿದ ಹಿನ್ನೆಲೆ ಪರಿಹಾರ ಚೆಕ್ ಅನ್ನು ಮಾಲೀಕರಿಗೆ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಸ್ತಾಂತರಿಸಿದರು. ಶಾಸಕರ ಗೃಹ ಕಚೇರಿಯಲ್ಲಿ ಕಾಕೋಟುಪರಂಬು ಪಂಚಾಯಿತಿಯ ಕುಂಜಲಗೇರಿ ಗ್ರಾಮದ ಚಿಯಂಡೀರ ಸುರೇಶ್ ಹಾಗೂ ಸುಬ್ರಮಣಿ ಎಂಬವರ ರೈತರ ಹಸುಗಳು, ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದವು. ಇವರು ಹೈನುಗಾರಿಕೆಯನ್ನು ಮಾತ್ರ ಅವಲಂಬಿಸಿದ್ದರು. ವಿಷಯ ತಿಳಿದ ಕೂಡಲೇ ಸರಕಾರದ ಮಟ್ಟದಿಂದ ಶಾಸಕರು ರೈತ ಕುಟುಂಬಕ್ಕೆ ೧.೬೨ಲಕ್ಷ ಪರಿಹಾರ ಒದಗಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಬಟ್ಟಕಾಳಂಡ ರಾಜ, ಮುಂಡAಡ ಅನಿಲ್ ಬಿದ್ದಪ್ಪ, ದಯಾ ರೈ, ಬೋವೇರಿಯಂಡ ಅಜಿತ್, ಚೆಸ್ಕಾಂ ಅಧಿಕಾರಿಗಳಾದ ಸುರೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.