ಬೆಂಗಳೂರು, ಆ. ೧೭: ಪಶ್ಚಿಮ ಘಟ್ಟಗಳಿಗೆ ಪ್ರವಾಸಿಗರ ಲಗ್ಗೆ ದಿನೇ ದಿನೇ ಹೆಚ್ಚಾಗುತಿದ್ದು ಈ ಜೀವ ವೈವಿದ್ಯ ಘಟ್ಟಗಳನ್ನು ರಕ್ಷಿಸುವ ನಿಟ್ಟಿನ ಜತೆಗೇ ಪ್ರವಾಸೋದ್ಯಮವನ್ನು ಸುಸ್ಥಿರವಾಗಿ ನಿರ್ವಹಿಸುವ ಕ್ರಮವಾಗಿ ಸರ್ಕಾರವು ಪಶ್ಚಿಮ ಘಟ್ಟಗಳಿಗೆ ಪ್ರವಾಸಿಗರ ಭೇಟಿಗೆ ಈಗ ಹಸಿರು ಪಾಸ್ ಅಥವಾ ಇ-ಪಾಸ್ ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿವೆ.
ಉತ್ತರಾಖಂಡ ಮತ್ತು ಇತರ ಹಿಮಾಲಯ ಪ್ರದೇಶಗಳಲ್ಲಿ ಸಂಭವಿಸಿದAತೆಯೇ ಪಶ್ಚಿಮ ಘಟ್ಟ ಗಳಿಗೂ ಹೆಚ್ಚಿನ ಹಾನಿಯಾಗದಂತೆ ವಿವರವಾದ ಸಾಗಣೆ ಸಾಮರ್ಥ್ಯ ಅಧ್ಯಯನವನ್ನು ಸಹ ಕೈಗೊಳ್ಳಲಾಗುತ್ತಿದೆ. ಘಟ್ಟ ಗಳ ಸಾಗಣೆ ಸಾಮರ್ಥ್ಯ ಅಧ್ಯಯನವನ್ನು ಕೈಗೊಳ್ಳುವ ಕಾರ್ಯವನ್ನು ಪಶ್ಚಿಮ ಘಟ್ಟಗಳ ಕಾರ್ಯಪಡೆ ಸಮಿತಿ (Wesಣeಡಿಟಿ ಉhಚಿಣs ಖಿಚಿsಞ ಈoಡಿಛಿe ಅommiಣಣee)ಗೆ ವಹಿಸಲಾಗಿದೆ. ಈ ಕಾರ್ಯಪಡೆಯು ಇತ್ತೀಚೆಗೆ ಸಲ್ಲಿಸಲಾದ ಮೌಲ್ಯಮಾಪನ ವರದಿಯಲ್ಲಿ, ಕರ್ನಾಟಕದ ೧೦ ಜಿಲ್ಲೆ ಗಳಲ್ಲಿ, ಮುಖ್ಯವಾಗಿ ಕೊಡಗು, ಹಾಸನ, ಸಕಲೇಶಪುರ, ಶಿವಮೊಗ್ಗ, ಮಂಗಳೂರು, ಉತ್ತರ ಕನ್ನಡ ಮತ್ತು ಬೆಳಗಾವಿಯ ಜನಪ್ರಿಯ ಪ್ರವಾಸಿ ತಾಣಗಳಿಗೆ ಪಾಸ್ ಅನ್ನು ಪರಿಚಯಿಸಲು ಸಮಿತಿ ಶಿಫಾರಸು ಮಾಡಿದೆ. ಇದಲ್ಲದೆ ತಮಿಳುನಾಡಿನ ಗಿರಿಧಾಮಗಳಾದ ಊಟಿ ಮತ್ತು ಕೊಡೈಕೆನಾಲ್ ಗಳಲ್ಲಿಯೂ ಹಸಿರು ಪಾಸ್ ಜಾರಿಗೆ ಯೋಚಿಸಲಾಗುತ್ತಿದೆ.
ಪಶ್ಚಿಮ ಘಟ್ಟಗಳ ಪ್ರದೇಶ ಗಳಿಗೆ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತಿದ್ದು ಹೆಚ್ಚಿನ ಪ್ರವಾಸೀ ದಟ್ಟಣೆಯಿಂದಾಗಿ ಘಟ್ಟ ಪ್ರದೇಶಗಳಿಗೆ ಮಾನವ ಹಸ್ತ ಕ್ಷೇಪದ ಒತ್ತಡ ಹೆಚ್ಚಾಗಿ ಅವುಗಳಿಗೆ ಗಣನೀಯವಾಗಿ ಹಾನಿ ಆಗುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಬಹುಮುಖ್ಯವಾಗಿ ಪುಟ್ಟ ಜಿಲ್ಲೆ ಕೊಡಗಿನಲ್ಲೇ ಅನಿಯಂತ್ರಿತ ಪ್ರವಾ ಸಿಗರ ಸಂಖ್ಯೆಯಿAದಾಗಿ ಹೋಂ ಸ್ಟೇ ಮತ್ತು ರೆಸಾರ್ಟ್ ಸಂಖ್ಯೆಗಳು ಕಳೆದೊಂದು ದಶಕದಲ್ಲಿ ಗಣ ನೀಯವಾಗಿ ಹೆಚ್ಚಾಗಿವೆ.