ಸುAಟಿಕೊಪ್ಪ, ಆ.೧೭: ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಚಾಲಕ ಸೇರಿದಂತೆ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಡಿಕೇರಿ-ಕುಶಾಲನಗರ ಎದ್ದಾರಿ ನಡುವಿನ ಬಾಳೆಕಾಡುವಿನಲ್ಲಿ ನಡೆದಿದೆ. ರಾಷ್ಟಿçÃಯ ಹೆದ್ದಾರಿ ೨೭೫ರಲ್ಲಿ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ರಿಡ್ಸ್ ಕಾರು(ಕೆಎ-೩೦-ಎನ್-೧೭೦೯) ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್(ಕೆಎ-೨೧-ಎಫ್-೦೧೨೨) ನಡುವೆ ಡಿಕ್ಕಿ ಸಂಭವಿಸಿದೆ.ಅಪಘಾತದ ರಬ್ಬಸಕ್ಕೆ ಕಾರು ಜಖಂಗೊAಡಿದ್ದು, ಕಾರು ಚಲಾಯಿಸುತ್ತಿದ್ದ ಚಾಲಕ ರಂಜಿತ್ ಹಾಗೂ ಪ್ರಯಾಣಿಕ ಕಮಾರ ಎಂಬವರು ಗಂಭಿರ ಗಾಯಗೊಂಡಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ತೆರಳಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.