ಸುಂಟಿಕೊಪ್ಪ, ಆ. ೧೭: ತುಂಬು ಗರ್ಭಿಣಿ ಮಹಿಳೆಯೋರ್ವರನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಡನಕೊಲ್ಲಿ ಗ್ರಾಮ ನಿವಾಸಿ ದಾಸ ಎಂಬವರ ಪತ್ನಿ ಲಕ್ಷಿö್ಮ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ತಾ.೧೭ ರಂದು ಬೆಳಿಗ್ಗೆ ೧೦.೧೫ರ ವೇಳೆಗೆ ಸುಂಟಿಕೊಪ್ಪದ ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಸಿ.ಸಿ. ಸುನಿಲ್ ಕಾಂಡನಕೊಲ್ಲಿಯಿAದ ಗರ್ಭಿಣಿ ಮಹಿಳೆಯನ್ನು ಹಾಗೂ ಮನೆಯವರನ್ನು ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಹಟ್ಟಿಹೊಳೆ ಬಳಿ ಲಕ್ಷಿö್ಮÃ ಅವರಿಗೆ ಪ್ರಸವವೇದನೆ ತ್ರೀವ್ರಗೊಂಡಿದ್ದು ಆಟೋದಲ್ಲೇ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
ಪತಿ ಸೇರಿದಂತೆ ಮೂವರು ಮಹಿಳೆಯರು ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದ್ದು, ಕೂಡಲೇ ಈರ್ವರು ಮಹಿಳೆಯರು ಪ್ರಸವಕ್ಕೆ ಸಹಕರಿಸಿದ್ದು, ನಂತರ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಸಕಾಲದಲ್ಲಿ ತಾಯಿ ಮಗುವಿಗೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯವಾಗಿದ್ದಾರೆ. ತಾಯಿ ಮಗುವನ್ನು ಸುರಕ್ಷಿತವಾಗಿ ಕರೆದೊಯ್ದು ಮಾದಾಪುರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಿದ ಸುನಿಲ್ ಅವರ ಸೇವೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.