ಕೂಡಿಗೆ, ಆ. ೧೭: ಕೂಡಿಗೆ ಸೈನಿಕ ಶಾಲೆಯ ರಾಧಾಕೃಷ್ಣನ್ ಸಭಾಂಗಣದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿ-೨೦೨೦ ರ ಅಡಿ ಎನ್‌ಡಿಎ ಪ್ರೇರಣಾ ಕ್ಲಬ್ ವತಿಯಿಂದ ಕಲಾ ಏಕೀಕರಣ ಕುರಿತ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ದಿವ್ಯಾ ಸಿಂಗ್‌ಭಾಗವಹಿಸಿ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಕಲೆಯ ಮಹತ್ವವನ್ನು ಕುರಿತು ವಿವರಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಕಲೆಯೊಂದಿಗೆ ಅಧ್ಯಯನವನ್ನು ಹೇಗೆ ನಡೆಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಕಲೆಯ ಮೂಲಕ ಸೃಜನಶೀಲತೆ, ವ್ಯಕ್ತಿತ್ವ ವಿಕಸನ ಹಾಗೂ ಅಧ್ಯಯನದ ಮೇಲಿನ ಆಸಕ್ತಿ ಹೆಚ್ಚಿಸಬಹುದೆಂಬುದನ್ನು ವಿವರಿಸಿದರು. ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಆಕರ್ಷಕ ಚಿತ್ರಗಳನ್ನು ರಚಿಸುವುದರ ಮೂಲಕ ಕಾರ್ಯಾಗಾರದ ಮೆರುಗನ್ನು ಹೆಚ್ಚಿಸಿದರು. ಈ ಸಂದರ್ಭ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಉಪ ಪ್ರಾಂಶುಪಾಲ ಸ್ಕಾ÷್ವ.ಲೀ. ಮೊಹಮದ್ ಶಾಜಿ, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಹಿರಿಯ ಶಿಕ್ಷಕ ವಿಬಿನ್ ಕುಮಾರ್, ಕಲಾ ಶಿಕ್ಷಕಿ ಭೀಮಾಂಬಿಕಾ ಜಿ. ಭೋವಿ ಹಾಜರಿದ್ದರು.

ಎನ್‌ಡಿಎ ಕ್ಲಬ್ ಮೇಲ್ವಿಚಾರಕಿ ವಿ.ಎಸ್. ಶ್ರೀಲೇಖಾ ಹಾಗೂ ದಾದಾ ಕೆ. ಕುಸನಾಳೆ ಕಾರ್ಯಕ್ರಮ