ಭಾವನೆ ಎಂದರೆ ಸಾಮಾನ್ಯವಾಗಿ ಒಂದು ಮಾನಸಿಕ ಸ್ಥಿತಿ. ಒಂದು ನಿರ್ದಿಷ್ಟ ಪ್ರಚೋದಕಕ್ಕೆ ಪ್ರತಿಕ್ರಿಯೆ ಉಂಟಾಗುತ್ತದೆ ಮತ್ತು ಶಾರೀರಿಕ ಬದಲಾವಣೆಗಳೊಂದಿಗೆ ಮನಸ್ಸಿನಲ್ಲಿ ಆಗುವ ಸಂತೋಷ, ದುಃಖ, ಕೋಪ, ಭಯ, ಆಶ್ಚರ್ಯ ಇತ್ಯಾದಿಗಳ ಕಾರಣದಿಂದ ಉದ್ಭವಿಸುತ್ತದೆ. ಅದರಲ್ಲಿ ಕೆಟ್ಟ ಭಾವನೆಗಳು, ಕೀಳು ಭಾವನೆಗಳು ಮಾತ್ರ ಇರುವುದಿಲ್ಲ. ಒಳ್ಳೆಯ ಸದ್ಭಾವನೆಗಳು ಇರುತ್ತವೆ. ಸದ್ಭಾವನೆ ಎಂದರೆ ‘ಒಳ್ಳೆಯ ಹೆಸರು, ಖ್ಯಾತಿ ಅಥವಾ ವಿಶ್ವಾಸಾರ್ಹತೆ’. ‘ಯಾರಲ್ಲಾದರೂ ಅವರ ಬಗ್ಗೆ ತೋರುವ ಹಿತವಾದ ಅಥವಾ ಒಳ್ಳೆಯ ಭಾವನೆ”. ಎಲ್ಲರ ಮನಸ್ಸಿನಲ್ಲೂ ಎಲ್ಲರ ಬಗ್ಗೆಯೂ ಸದ್ಭಾವನೆ ಇದ್ದರೆ ಯಾವುದೇ ತಾಪತ್ರಯಗಳು, ಜಗಳಗಳು, ಗಲಾಟೆಗಳು, ಮುನಿಸುಗಳು, ವಿರೋಧಾಭಾಸಗಳು ಇರುವುದಿಲ್ಲ.

ಇಂತಹ ಸದ್ಭಾವನೆಗೂ ಒಂದು ದಿನವಿದೆ, ಅದೇ ಆಗಸ್ಟ್ ೨೦. ಇದನ್ನು ಸದ್ಭಾವನಾ ದಿನಾಚರಣೆ (ಊಚಿಡಿmoಟಿಥಿ ಆಚಿಥಿ) ಎಂದು ಆಚರಿಸಲಾಗುತ್ತದೆ. ಮತ್ತು ಅದಕ್ಕಾಗಿ ಒಂದು ಪ್ರತಿಜ್ಞಾ ವಿಧಿಯನ್ನು ಸಹ ಮಾಡಿ ಇಟ್ಟಿದ್ದಾರೆ.

“ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಭೇದ ಭಾವವಿಲ್ಲದೆ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ ಅಲ್ಲದೆ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿಯಾಗಲಿ ನಮ್ಮಲ್ಲಿರುವ ಎಲ್ಲಾ ಭೇದ ಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆಂದು ಸಹ ಪ್ರತಿಜ್ಞೆ ಮಾಡುತ್ತೇನೆ.”

ಇದರಲ್ಲಿ ತಿಳಿಸುವಂತೆ ಯಾವುದೇ ವ್ಯತಿರಿಕ್ತ ಭಾವನೆಗಳಿಂದ ಸೌಹಾರ್ದಕ್ಕೆ ತೊಂದರೆಯಾಗುವAತೆ ವರ್ತಿಸುವುದಿಲ್ಲ ಎಂಬ ತಿರುಳನ್ನು ಸೇರಿಸಲಾಗಿದೆ. ಅಂದರೆ ಸಮಾಜದಲ್ಲಿ ಯಾರೊಬ್ಬ ವ್ಯಕ್ತಿಯಾದರೂ ಬೇರೆಯವರಿಗೆ ತೊಂದರೆ ಆಗದಂತೆ ಬದುಕಲಿ, ತಾನು ಎಲ್ಲರಿಗಾಗಿ ಎಂಬ ಭಾವನೆಯನ್ನು ಹುದುಗಿಸಲು ಈ ಪ್ರತಿಜ್ಞೆಯ ಉದ್ದೇಶವಾಗಿದೆ.

ರಾಜೀವ್ ಗಾಂಧಿ ರವರು ೧೯೪೬ ರಲ್ಲಿ ಆಗಸ್ಟ್ ೨೦ ರಂದು ಮುಂಬೈನಲ್ಲಿ ಜನಿಸುತ್ತಾರೆ. ತಮ್ಮ ತಾಯಿ ಇಂದಿರಾಗಾAಧಿಯವರು ಮರಣ ಹೊಂದಿದ ನಂತರ ತಮ್ಮ ೪೦ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಚಿಕ್ಕ ವಯಸ್ಸಿನ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.

೧೯೯೧ ಮೇ ೨೧ ರಂದು ತಮಿಳುನಾಡಿನ ಶ್ರೀ ಪೆರಂಬೂರಿನಲ್ಲಿ ನಡೆದ ಘಟನೆಯಲ್ಲಿ ಮರಣ ಹೊಂದುತ್ತಾರೆ. ಅವರ ನೆನಪಿಗೆ ಅವರ ಹುಟ್ಟುಹಬ್ಬದ ದಿನವಾದ ಆಗಸ್ಟ್ ೨೦ ರಂದು ರಾಷ್ಟಿçÃಯ ಏಕತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತ ಸರ್ಕಾರ ಸದ್ಭಾವನಾ ದಿನಾಚರಣೆ ಅಥವಾ ಸಾಮರಸ್ಯ ದಿನವನ್ನು ೧೯೯೨ ರಿಂದ ಆಚರಿಸುತ್ತಾ ಬಂದಿದೆ.

ರಾಜೀವ್ ಗಾಂಧಿ ಅವರು ಶೈಕ್ಷಣಿಕ ಪ್ರಗತಿ, ತಾಂತ್ರಿಕ ಪ್ರಗತಿ, ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ದೂರಸಂಪರ್ಕ ಕ್ರಾಂತಿ ಮಾಡುವ ಮೂಲಕ ದೇಶವನ್ನು ಸುಭದ್ರ ಸ್ಥಿತಿಗೆ ತರಲು ಸಾಧ್ಯವಾಗುತ್ತದೆ ಎಂದು ನಂಬಿದ್ದರು.

ಶಿಕ್ಷಣದಲ್ಲಿ ಸುಧಾರಣೆಗಳನ್ನು ತಂದು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲು ಬಯಸಿದ್ದರು. ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಜಾರಿಗೊಳಿಸಿದ್ದರು.

ಅವರ ಬಹಳಷ್ಟು ಯೋಜನೆಗಳು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಕಡೆಗೆ ಕೇಂದ್ರೀಕೃತಗೊAಡಿದ್ದವು.

ದೇಶದ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾದರೆ ಪ್ರಾದೇಶಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಅವರ ದೂರದೃಷ್ಟಿಯ ಆಶಯವಾಗಿತ್ತು.

ಶೈಕ್ಷಣಿಕ ಪ್ರಗತಿಯಾದರೆ ಸಮಾಜದಲ್ಲಿರುವ ಪಿಡುಗುಗಳು ನಾಶವಾಗಿ, ಜನರು ಒಬ್ಬರನ್ನೊಬ್ಬರು ಪ್ರೀತಿಸಲು ದ್ವೇಷವನ್ನು ದೂರವಿಡಲು ಬಯಸುತ್ತಾರೆ ಎಂಬುದು ಅವರ ಮನದಿಂಗಿತವಾಗಿತ್ತು.

ಅವರ ಇಂತಹ ಯೋಜನೆಗಳನ್ನು ಅವರ ಕಾಲ ನಂತರವೂ ಮುಂದುವರೆಯಲಿ ಎಂಬ ಮುಂದಾಲೋಚನೆಯಲ್ಲಿ ಭಾರತ ಸರ್ಕಾರವು ಸದ್ಭಾವನಾ ದಿನವನ್ನು ಮೀಸಲಿಟ್ಟಿದೆ.

ಸಮಾಜದಲ್ಲಿ ಜಾತಿ ಧರ್ಮ ಭಾಷೆ ಮತ್ತು ಪ್ರಾದೇಶಿಕತೆಗಳ ಭೇದಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಬಾಳುವ ವಾತಾವರಣ ನಿರ್ಮಾಣ ಮಾಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಜನರಲ್ಲಿ ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಶ್ರಮಿಸುವಂತೆ ಪ್ರೇರೇಪಿಸುವುದು ಈ ದಿನದ ಶಾಂತಿಯ ಸಂದೇಶ.

ಸದ್ಭಾವನಾ ದಿವಸದಂದು ಭಾರತದಾದ್ಯಂತ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳು ಮತ್ತು ಆಚರಣೆಗಳು ನಡೆಯುತ್ತವೆ. ಸರ್ಕಾರಿ ಅಧಿಕಾರಿಗಳು ರಾಜಕೀಯ ಮುಖಂಡರು ಮತ್ತು ನಾಗರಿಕರು ರಾಜೀವ್ ಗಾಂಧಿ ಯವರಿಗೆ ಗೌರವ ಸಲ್ಲಿಸಲು ಮತ್ತು ಸಾಮರಸ್ಯ ಮತ್ತು ಸಮೃದ್ಧ ರಾಷ್ಟ್ರದ ಅವರ ದೃಷ್ಟಿಕೋನವನ್ನು ತಾವು ಅರ್ಪಿಸಿಕೊಳ್ಳಲು ಒಟ್ಟುಗೂಡುತ್ತಾರೆ.

ದಿನದ ಮಹತ್ವವನ್ನು ಎತ್ತಿ ತೋರಿಸಲು ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರಣಾ ಸಂಕೀರ್ಣಗಳನ್ನು ಏರ್ಪಡಿಸಲಾಗುತ್ತದೆ. ರಾಜೀವ್ ಗಾಂಧಿ ಅವರ ಮಾತುಗಳು ರಾಷ್ಟçವನ್ನು ಸಾಮರಸ್ಯ ಮತ್ತು ಪ್ರಗತಿಯ ಭವಿಷ್ಯದತ್ತ ಪ್ರೇರೇಪಿಸುತ್ತೇವೆ ಮತ್ತು ಮಾರ್ಗದರ್ಶನ ಮಾಡುತ್ತಿವೆ ಎಂಬುದನ್ನು ತೋರಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಅಂದು ಪ್ರತಿಜ್ಞಾವಿಧಿಯನ್ನು ಮಕ್ಕಳಿಗೆ ಬೋಧಿಸಲಾಗುತ್ತದೆ.

ರಾಜೀವ್ ಗಾಂಧಿ ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಜೀವ್ ಗಾಂಧಿ ರಾಷ್ಟಿçÃಯ ಸದ್ಭಾವನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಕೇವಲ ಒಂದು ಕುಟುಂಬದಲ್ಲಿಯೇ ಸೌಹಾರ್ದತೆಯನ್ನು ಉಂಟು ಮಾಡಲು ಸಾಧ್ಯವಾಗದ ಇಂತಹ ದಿನಗಳಲ್ಲಿ ದೇಶದಲ್ಲಿಯೇ ಸದ್ಭಾವನೆ ಉಂಟು ಮಾಡುವುದು ಕಷ್ಟಕರವಾದ ಸನ್ನಿವೇಶ ಈಗಿನ ಸಮಾಜದಲ್ಲಿ ಉದ್ಭವಿಸಿದೆ. ಆದ್ದರಿಂದ ಸೌಹಾರ್ದತೆ ಸದ್ಭಾವನೆ ಈಗಿನ ದಿನಕ್ಕೆ ಅಗತ್ಯವಾದದ್ದು.

ಜಾತಿ, ಧರ್ಮ, ಭಾಷೆ ಪ್ರಾದೇಶಿಕತೆಗಳ ಹೆಸರಿನಲ್ಲಿ ಒಡೆದು ಹೋಗುತ್ತಿರುವ ನಮ್ಮ ದೇಶಕ್ಕೆ ಏಕತೆ ತಂದು ಕೊಡುವುದೇ ಈ ಸೌಹಾರ್ದತೆ ಮತ್ತು ಸದ್ಭಾವನೆಗಳು.

ದೇಶದ ಪ್ರತಿಯೊಬ್ಬ ಪ್ರಜೆಯು ತನ್ನಲ್ಲಿ ಈ ಗುಣವನ್ನು ಅಳವಡಿಸಿಕೊಂಡರೆ ಭಾರತ ವಿಶ್ವದಲ್ಲಿಯೇ ಒಂದು ಪ್ರಬಲ ರಾಷ್ಟçವಾಗುವುದರಲ್ಲಿ ಅನುಮಾನವಿಲ್ಲ.

ಕೇವಲ ಸಾರ್ವಜನಿಕರಿಗೆ ಮಾತ್ರ ಇದರ ಉದ್ದೇಶ ಅರ್ಥವಾದರೆ ಸಾಕಾಗುವುದಿಲ್ಲ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇತರ ಎಲ್ಲಾ ವರ್ಗದ ಜನರಿಗೂ ಇದರ ಉದ್ದೇಶ ತಲುಪಲು ಕ್ರಮ ಕೈಗೊಳ್ಳಬೇಕು.

ಸಾಮಾನ್ಯ ಪ್ರಜೆಯಲ್ಲಿ ಜಾತಿ ಧರ್ಮದ ಸಂಕೋಲೆಯನ್ನು ಸೃಷ್ಟಿಸುವ ಕಾರ್ಯ ಚುನಾವಣಾ ಸಂದರ್ಭದಲ್ಲಿ ಹೆಚ್ಚಾಗಿ ಕಂಡುಬರುತ್ತದೆ .ನಂತರ ಗೆದ್ದವರು ಸೋತವರು ಬೇರೆ ಬೇರೆ ರೀತಿಯಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಕಾರ್ಯ ಮಾಡುತ್ತಾರೆ.

ತಮ್ಮ ಸ್ವಾರ್ಥ ಸಾಧನೆಗೆ ಜಾತಿ, ಧರ್ಮವೆಂಬ ಭೇದ ಭಾವವನ್ನು ಸೃಷ್ಟಿಸುವ ಕಾಯಕ ನಿಲ್ಲುವವರೆಗೂ ಭಾರತದಲ್ಲಿ ಸೌಹಾರ್ದತೆ ಅಥವಾ ಸದ್ಭಾವನೆಯನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂಬುದು ಜನರ ಅಭಿಪ್ರಾಯ. ಆದರೆ ಒಂದು ವೇಳೆ ಸಂವಿಧಾನದ ಆಶಯಗಳನ್ನು ಕಟ್ಟುನಿಟ್ಟಾಗಿ ಮತ್ತು ಕ್ರಮಬದ್ಧವಾಗಿ ಅಳವಡಿಸಿದರೆ ಅಂತಹ ಯಾವುದೇ ಭೇದ ಭಾವಗಳು ಉದ್ಭವಿಸಲಾರವು ಎಂಬುವುದು ತುಂಬಾ ಜನರ ಅಭಿಪ್ರಾಯ.

ಏನೇ ಆದರೂ ಜನರ ಭಾವನೆಗಳಿಗೆ ಬೆಲೆ ನೀಡಲೇಬೇಕು ಇಂದಿನ ಆತುರದ ದಿನಗಳಲ್ಲಿ ಎಲ್ಲರಲ್ಲಿಯೂ ತಾಳ್ಮೆ ಎಂಬುದು ಮರೀಚಿಕೆಯಾಗಿದೆ.

ಸ್ವಾತಂತ್ರ‍್ಯ ಬಂದು ೭೯ ವರ್ಷಗಳು ಕಳೆದರು ಇನ್ನೂ ನಮ್ಮಲ್ಲಿ ಕೆಲವು ಪಿಡುಗುಗಳು ಆಳದಲ್ಲಿಯೇ ಹುದುಗಿರುವುದು ಬೇಸರದ ಸಂಗತಿ.

ಶೈಕ್ಷಣಿಕ ಪ್ರಗತಿ ಸಾಧಿಸಿ ಚಂದ್ರನಲ್ಲಿಗೆ ಹೋದರೂ ಪಕ್ಕದಲ್ಲಿರುವ ಹೃದಯವಂತಿಕೆಯನ್ನು ಗುರುತಿಸಲು ವಿಫಲರಾಗಿದ್ದೇವೆ.

ಭಾರತ ಮೌಲ್ಯಾಧಾರಿತವಾದ ದೇಶ. ಇಲ್ಲಿ ಮೌಲ್ಯಗಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಆದರೆ ಇಂದು ಆ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿರುವುದು ಕರಾಳ ಸತ್ಯ.

ಯಾವಾಗ ನಾವು ಹಿಂದಿನ ಮೌಲ್ಯಗಳಿಗೆ ಬೆಲೆ ಕೊಟ್ಟು ಬದುಕುತ್ತೇವೆಯೋ ಅಂದು ಸೌಹಾರ್ದತೆ, ಸದ್ಭಾವನೆ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.

- ಪಿ.ಎಸ್. ಜಾನ್, ಪ್ರಾಂಶುಪಾಲರು, ಸರಕಾರಿ ಬಾಲಕಿಯರ ಪ.ಪೂ. ಕಾಲೇಜು, ಮೈಸೂರು.

ಮೊ. ೯೮೪೫೪೧೩೧೫೧