ಮಡಿಕೇರಿ, ಆ. ೧೯ : ನಗರದ ಪೊಲೀಸ್ ವಸತಿ ಗೃಹದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವುದಕ್ಕಾಗಿ ಪೊಲೀಸರು ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ಅಲೆದಾಡಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕಳವು ಪ್ರಕರಣದ ಬಗ್ಗೆ ಅವರು ಮಾಹಿತಿ ನೀಡಿದರು. ಜೂನ್ ತಿಂಗಳಿನಲ್ಲಿ ಪೊಲೀಸ್ ವಸತಿಗೃಹದಲ್ಲಿ ೯೫ ಸಾವಿರ ನಗದು ಹಾಗೂ ೫.೫ ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿರುವ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.
ಪ್ರಕರಣದ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ತನಿಖೆ ಕೈಗೊಂಡಾಗ ಮೂರು ಮಂದಿ ಬೈಕ್ನಲ್ಲಿ ಬಂದು ತೆರಳಿರುವ
ಬಗ್ಗೆ ಮಸುಕಾದ ಫೋಟೋ ಸಿಕ್ಕಿತ್ತು. ಅದರ ಜಾಡು ಹಿಡಿದು ಹೊರಟಾಗ ಬೈಕ್ ಸೋಮವಾರಪೇಟೆ ಕಡೆಗೆ ತೆರಳಿರುವುದು ತಿಳಿದುಬಂತು. ಆದರೆ ಬೈಕ್ ಸೋಮವಾರಪೇಟೆಯಿಂದ ಮುಂದಕ್ಕೆ ತೆರಳಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ ಕಾಂಡನಕೊಲ್ಲಿಯ ಕೆರೆಯೊಂದರಲ್ಲಿ ಬೈಕ್ ಪತ್ತೆಯಾಗಿತ್ತು. ಬೈಕ್ ಯಾರದೆಂದು ಪರಿಶೀಲಿಸಿದಾಗ ಅದು ಗೋವಾಕ್ಕೆ ಸೇರಿದ ವ್ಯಕ್ತಿಯೋರ್ವರಿಗೆ ಸೇರಿದ್ದು ಎಂಬುದು ತಿಳಿದು ಬಂತು. ಅಲ್ಲಿಗೆ ತೆರಳಿದಾಗ ಅಲ್ಲಿಯೂ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತು. ಅಲ್ಲದೇ ಕಳ್ಳರು ಗೋವಾದಿಂದ ಮಡಿಕೇರಿಗೆ ಆಗಮಿಸಿ ಕಳ್ಳತನ ಮಾಡಿರುವ ಬಗ್ಗೆ ಖಚಿತಗೊಂಡಿತು. ಬಳಿಕ ತನಿಖೆಯನ್ನು ಚುರುಕುಗೊಳಿಸಿ ಮಧ್ಯಪ್ರದೇಶ ರಾಜ್ಯದ ಥಾರ್ ಜಿಲ್ಲೆಯ ನಾರ್ವಲ್ಲ ಗ್ರಾಮದ ಸುರೇಶ್ ಸೆಂಗಾಲ್ (೨೩) ಹಾಗೂ ಮಾಲ್ಪುರ ಗ್ರಾಮದ ಮನೀಶ್ ಭಗೇಲ್ (೨೭) ಎಂಬವರುಗಳ ಬೆನ್ನತ್ತಿ ಅವರುಗಳನ್ನು ಬಂಧಿಸಲಾಯಿತು ಎಂದು ಎಸ್ಪಿ ಹೇಳಿದರು. ಇನ್ನಿಬ್ಬರು ಆರೋಪಿಗಳಾದ ಕಾಳು ಹಾಗೂ ಪೂನಮ್ ಬಂಧನಕ್ಕೆ ತನಿಖೆ ಮುಂದುವರಿದಿದೆ ಎಂದರು.
ಬೈಕ್ ಕಳವು ಮಾಡಿ ಕೃತ್ಯ
ಆರೋಪಿಗಳು ಗೋವಾದಿಂದ ಬೈಕ್ನಲ್ಲಿ ಬಂದು ಕಳವು ಕೃತ್ಯವೆಸಗಿದ್ದರು. ಆರೋಪಿಗಳು ಗೋವಾದಲ್ಲಿ ಬೈಕ್ನ್ನು ಕದ್ದು ಅಲ್ಲಿಂದ ಇಲ್ಲಿಗೆ ಬಂದು ಇಲ್ಲಿನ ಮಕ್ಕಂದೂರಿನಲ್ಲಿ ಮತ್ತೊಂದು ಬೈಕ್ನ್ನು ಕಳವು ಮಾಡಿ ತಾವು ಬಂದಿದ್ದ ಬೈಕ್ನ್ನು ಕಾಂಡನಕೊಲ್ಲಿ ಕೆರೆಯಲ್ಲಿ ಬಿಟ್ಟು ಮಕ್ಕಂದೂರಿನಲ್ಲಿ ಕಳವು ಮಾಡಿದ್ದ ಬೈಕ್ನಲ್ಲಿ ಬೇಲೂರಿಗೆ ತೆರಳಿ ಅಲ್ಲಿ ಅzನ್ನು ಬಿಟ್ಟು ಇನ್ನೊಂದು ಬೈಕನ್ನು ಕಳವು ಮಾಡಿ ಮಧ್ಯಪ್ರದೇಶಕ್ಕೆ ತೆರಳಿದ್ದರು. ಕಳವು ಕೃತ್ಯಕ್ಕಾಗಿ ಆರೋಪಿಗಳು ಅಲ್ಲಲ್ಲಿ ಬೈಕ್ಗಳನ್ನು ಕಳವು ಮಾಡಿ ಬೈಕ್ಗಳನ್ನು ಬದಲಾಯಿಸಿಕೊಂಡು ತೆರಳುತ್ತಿದ್ದರು ಎಂದು ಎಸ್ಪಿ ಮಾಹಿತಿಯಿತ್ತರು.
೫೦೦ಕ್ಕೂ ಅಧಿಕ
ಸಿಸಿ ಕ್ಯಾಮರಾ ಪರಿಶೀಲನೆ
ಆರೋಪಿಗಳ ಪತ್ತೆಗಾಗಿ ಗೋವಾ, ಮಹಾರಾಷ್ಟç, ಮಧ್ಯಪ್ರದೇಶ, ಉಡುಪಿ, ಉತ್ತರ ಕನ್ನಡ, ಮಂಗಳೂರು, ಹಾಸನಗಳಲ್ಲಿ ಪೊಲೀಸರ ತಂಡ ತನಿಖೆ ನಡೆಸಿತ್ತು. ಅಲ್ಲದೆ ಸುಮಾರು ೭೦೦ ಕಿ.ಮೀ.ವರೆಗೆ ೫೦೦ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿತ್ತು. ತಾಂತ್ರಿಕ ತಂಡ ಹಾಗೂ ಹೊರಜಿಲ್ಲೆ, ಹೊರರಾಜ್ಯಗಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಸಹಕಾರದೊಂದಿಗೆ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳ ಊರಾದ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಪೊಲೀಸರ ತಂಡ ಒಂದು ತಿಂಗಳ ಕಾಲ ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸಿತು.
ಈ ಕಾರ್ಯಾಚರಣೆಗಾಗಿ ಇಲಾಖೆಯಿಂದ ರೂ. ೧೫ ಲಕ್ಷ ವೆಚ್ಚ ಮಾಡಲಾಯಿತು ಎಂದು ರಾಮರಾಜನ್ ತಿಳಿಸಿದರು.
ಕುರಿ ಬಲಿ ಕೊಡುತ್ತಿದ್ದರು!
ಕಳವು ಪ್ರಕರಣಗಳ ಆರೋಪಿಗಳು ತಾವು ನಡೆಸಿದ ಕಳವು ಕೃತ್ಯ ಯಶಸ್ವಿಯಾದರೆ ಮಧ್ಯಪ್ರದೇಶದ ತಾಂಡಾ ಎಂಬಲ್ಲಿರುವ ದೇವಿ ಸನ್ನಿಧಿಯೊಂದರಲ್ಲಿ ಕುರಿ ಬಲಿ ಕೊಟ್ಟು
(ಮೊದಲ ಪುಟದಿಂದ) ನಂತರ ಮನೆಗಳಿಗೆ ಹಿಂತಿರುಗುತ್ತಿದ್ದರು. ಆರೋಪಿಗಳ ಪತ್ತೆಗೆ ತೆರಳಿದ್ದ ಪೊಲೀಸರ ತಂಡಕ್ಕೆ ಸುಮಾರು ೧೫ ದಿನಗಳವರೆಗೆ ಆರೋಪಿಗಳ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಆರೋಪಿಗಳು ಕುರಿ ಬಲಿ ಕೊಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅದೇ ಸನ್ನಿಧಿಗೆ ತೆರಳಿ ಆರೋಪಿಗಳು ಆದಷ್ಟು ಬೇಗ ಸೆರೆಯಾಗುವಂತಾಗಲಿ ಎಂದು ಪ್ರಾರ್ಥಿಸಿ ಕೋಳಿ ಬಲಿ ನೀಡಿದ್ದರು ಎಂದು ರಾಮರಾಜನ್ ವಿವರಿಸಿದರು. ಕಳವು ನಡೆದ ಸ್ಥಳಗಳಲ್ಲಿ ರಕ್ತ ಪತ್ತೆಯಾಗಿದ್ದು ಅದನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
೨೫ಕ್ಕೂ ಹೆಚ್ಚು ಪ್ರಕರಣ
ಬಂಧಿತ ಆರೋಪಿಗಳ ಪೈಕಿ ಸುರೇಶ್ ಸೆಂಗಾಲ್ ಎಂಬಾತನ ವಿರುದ್ಧ ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ ಸುಮಾರು ೨೫ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ತಲೆಮರೆಸಿಕೊಂಡಿರುವ ಪೂನಮ್ ವಿರುದ್ಧ ಕೊಲೆ ಪ್ರಕರಣ ಹಾಗೂ ಕಾಳು ವಿರುದ್ಧ ಕೊಲೆಯತ್ನ ಪ್ರಕರಣಗಳು ಥಾರ್ ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ರಾಮರಾಜನ್ ತಿಳಿಸಿದರು. ಬಂಧಿತರಿAದ ೫೦,೪೮೦ ರೂ. ನಗದು, ೯ ಮೊಬೈಲ್ಗಳು, ಒಂದು ಬೋಲ್ಟ್ ಕಟ್ಟರ್, ಒಂದು ಕಬ್ಬಿಣದ ರಾಡ್, ಒಂದು ಬ್ಯಾಕ್ಪ್ಯಾಕ್ ಬ್ಯಾಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿಯಿತ್ತರು.
ಈ ಪ್ರಕರಣದ ಆರೋಪಿಗಳು ಕುಖ್ಯಾತ ಕ್ರಿಮಿನಲ್ಗಳಾಗಿದ್ದು, ಇವರುಗಳಿಗೆ ಕಠಿಣ ಶಿಕ್ಷೆಯಾಗುವ ನಿಟ್ಟನಲ್ಲಿ ಇಲಾಖೆ ಅಗತ್ಯ ಸಾಕ್ಷಾö್ಯಧಾರಗಳನ್ನು ಕಲೆ ಹಾಕಿ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.