ನಾಪೋಕ್ಲು, ಆ. ೧೯: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೮ನೇ ವರ್ಷದ ೨೦೨೪-೨೫ರ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಜರುಗಿತು.
ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ ಪ್ರಧಾನ ಮಂತ್ರಿಯವರ ಕನಸಾದ ವಿಕಸಿತ ಭಾರತ ಸಂಕಲ್ಪಕ್ಕೆ ಸಹಕಾರ ಕ್ಷೇತ್ರವು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ೨೦೨೪-೨೫ರ ಸಾಲಿನ ವಾರ್ಷಿಕ ರೂ. ೬೧.೭೭ ಲಕ್ಷ ಲಾಭ ಗಳಿಸಿದ್ದು ಶೇ.೯ ಡಿವಿಡೆಂಡ್, ರಬ್ಬರ್ ವ್ಯಾಪಾರ ಮಾಡಿದ ಸದಸ್ಯರಿಗೆ ಕೆಜಿಗೆ. ರೂ೧.೫೦ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯ ಕ್ಷರಾದ ಅಶೋಕ ಪಿ ಎಂ, ನಿರ್ದೇಶಕರುಗಳಾದ ಜಯರಾಮ ನಿಡ್ಯಮಲೆ ಬಿ,, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪ್ರಮೀಳ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ ಎಂ, ದೀನರಾಜ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಜಯರಾಮ ಪಿ ಟಿ, ಕಿರಣ ಬಂಗಾರಕೋಡಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ವಿನೀತ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.
ಸಂಘದ ಸದಸ್ಯರು ಸಂಸ್ಥೆಯ ಪ್ರಗತಿಯ ಬಗ್ಗೆ ಸ್ವಾಗತಿಸಿ ಸಂಘದ ಲೆಕ್ಕಪತ್ರಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರ ವಿಮರ್ಶೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌತಮ್ ಬಂಗಾರಕೋಡಿ ಅವರು ಪ್ರಾರ್ಥನೆಗೈದು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಲೋಕೇಶ್ ಹೆಚ್ ಕೆ ರವರು ಸ್ವಾಗತಿಸಿದರು. ನಿರ್ದೇಶಕರಾದ ಪ್ರಮೀಳಾ ವಂದಿಸಿದರು. ರಾಷ್ಟçಗೀತೆಯೊಂದಿಗೆ ಮಹಾಸಭೆ ಮುಕ್ತಾಯಗೊಂಡಿತು.