ನಾಪೋಕ್ಲು, ಆ. ೧೯: ಇಲ್ಲಿನ ಕೊಡವ ಸಮಾಜ ರಸ್ತೆಯ ಅಭಿವೃದ್ಧಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.

ಹೆಚ್ಚಿನ ಜನಸಂಚಾರ ಹಾಗೂ ವಾಹನ ದಟ್ಟಣೆ ಇರುವ ಈ ರಸ್ತೆ ಹದಗೆಟ್ಟಿರುವುದನ್ನು ಮನಗಂಡ ಶಾಸಕರು ೨೦ ಲಕ್ಷ ರೂಪಾಯಿ ಅನುದಾನÀವನ್ನು ಈ ರಸ್ತೆಯ ಅಭಿವೃದ್ಧಿಗೆ ನೀಡಿದ್ದರು. ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕರು ಅತ್ಯಂತ ಶೀಘ್ರದಲ್ಲಿ ಗುಣಮಟ್ಟ ಕಾಯ್ದುಕೊಂಡು ಈ ರಸ್ತೆ ನಿರ್ಮಾಣವಾಗಿ ಜನರ ಬಳಕೆಗೆ ಬಗುವಂತಾಗಲಿ ಎಂದರು. ಇದೇ ಸಂದರ್ಭ ನಾಪೋಕ್ಲು ಗ್ರಾಮ ಪಂಚಾಯಿತಿಗೆ ನೀಡಲಾದ ಮಲ ತ್ಯಾಜ್ಯ ನಿರ್ವಹಣಾ ಸಂಚಾರಿ ಘಟಕವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಅವರಿಗೆ ವಾಹನದ ಕೀಯನ್ನು ನೀಡುವ ಮೂಲಕ ಶಾಸಕರು ಹಸ್ತಾಂತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಸದಸ್ಯರುಗಳಾದ ಮಾಚೇಟಿರ ಕುಸು ಕುಶಾಲಪ್ಪ, ಅರುಣ್ ಬೇಬ, ಹೇಮಾವತಿ ಅರುಣ್, ಪ್ರತೀಪ ಬಿ.ಎಂ, ಅಹಮದ್ ಟಿ.ಎ, ಸಾಬಾ ತಿಮ್ಮಯ್ಯ, ಇಸ್ಮಾಯಿಲ್ ಕೆ.ಎ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸಿಬ್ಬಂದಿಗಳು, ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ ನಾಣಯ್ಯ ಹಾಗೂ ನಿರ್ದೇಶಕರುಗಳು, ಮಹಿಳಾ ಪರಿಷತ್ ಅಧ್ಯಕ್ಷೆ ನಿಶಾ ಮೇದಪ್ಪ ಹಾಗೂ ನಿರ್ದೇಶಕರುಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಮೇರಿ ಚಿಟ್ಟಿಯಪ್ಪ, ಸದಸ್ಯರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಬಾಚಮಂಡ ಲವ ಚಿಣ್ಣಪ್ಪ, ನಾಪೋಕ್ಲು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿರಾಜ್, ಸಿ. ಸೋಮಣ್ಣ, ಸಮಿತಿ ಸದಸ್ಯರು ಸಂಪನ್ ಅಯ್ಯಪ್ಪ, ಎಂ.ಎಚ್. ಅಬ್ದುಲ್ ರೆಹಮಾನ್, ಮಹಮ್ಮದ್ ಹಾಜಿ ಕುಂಜಿಲ, ಕೆಲೇಟಿರ ದೀಪು, ಎಂ.ಎ. ಮನ್ಸೂರ್ ಅಲಿ, ಅಝೀಜ್, ಲತೀಫ್ ಸಮಿತಿ ಸದಸ್ಯರು, ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.