ಮಡಿಕೇರಿ, ಆ. ೨೦ : ಗುಲ್ಶನ್ ದೇವಯ್ಯ ಬಾಲಿವುಡ್ ಸಿನಿಮಾ ರಂಗದಲ್ಲಿ ಖ್ಯಾತ ಹೆಸರು. ದಟ್ ಗರ್ಲ್ ಇನ್‌ಯಲ್ಲೋ ಬೂಟ್ಸ್, ದಮ್ ಮಾರೋ ದಮ್..., ಸೈತಾನ್, ಪೆಡ್ರ‍್ಸ್... ಕಮಾಂಡೋ-೩, ಥಾನ್ಸಿಕಾ ರಾಜ್‌ಕುಮಾರ್ ಸೇರಿದಂತೆ ಸುಮಾರು ೨೩ರಷ್ಟು ಹಿಂದಿ ಚಲನಚಿತ್ರಗಳು, ಹಲವಷ್ಟು ವೆಬ್‌ಸೀರೀಸ್‌ಗಳಲ್ಲಿ ನಟಿಸುವ ಮೂಲಕ ಜನಪ್ರಿಯ ನಟರಾಗಿ ಬಾಲಿವುಡ್‌ನಲ್ಲಿ ಗುರುತಿಸಲ್ಪಟ್ಟಿರುವ ಈ ನಟ ಕೊಡಗು ಜಿಲ್ಲೆಯವರು. ಇದೀಗ ಗುಲ್ಶನ್ ದೇವಯ್ಯ ಇದೇ ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಾದ ಕೆ.ಜಿ.ಎಫ್, ರಾಜಕುಮಾರ, ಕಾಂತಾರದAತಹ ಯಶಸ್ವಿ ಚಿತ್ರಗಳನ್ನು ಕನ್ನಡಿಗರಿಗೆ ಕೊಡುಗೆಯಾಗಿ ನೀಡಿದ ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ ಕಾಂತಾರ ಚಾಪ್ಟರ್-೧ ಚಿತ್ರದಲ್ಲಿ.. ಅಭೂತಪೂರ್ವ ಯಶಸ್ಸು ಕಂಡಿರುವ ಕಾಂತಾರ ಚಿತ್ರದ ಪೂರ್ವ ಅಧ್ಯಯದ ಕಥಾ ವಸ್ತುವನ್ನೊಳಗೊಂಡ ಚಿತ್ರವಾಗಿ ಕಾಂತಾರ ಚಾಪ್ಟರ್-೧ ತೆರೆಕಾಣಲು ಸಿದ್ಧವಾಗಿದೆ. ಇದೇ ಅಕ್ಟೋಬರ್ ೨ರಂದು ವಿಶ್ವಾದ್ಯಂತ ಈ ಚಿತ್ರ ತೆರೆ ಕಾಣಲಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ಮಲೆಯಾಳಂ, ಬಂಗಾಳಿ ಮತ್ತಿತರ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಭಾರತೀಯ ಚಲನ ಚಿತ್ರೋದ್ಯಮದ ಹಲವು ಹಿರಿಯ, ಕಿರಿಯ ಕಲಾವಿದರು ಈ ಚಿತ್ರದ ಭಾಗವಾಗಿದ್ದು ಕರ್ನಾಟಕದವರೇ ಆದ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟ ಗುಲ್ಶನ್ ದೇವಯ್ಯ ಅವರ ಎಂಟ್ರಿ ಈ ಮತ್ತೊಂದು ಹೊಸ ಆಯಾಮವನ್ನು ತಂದುಕೊ ಡುತ್ತಿದೆ ಎನ್ನಲಾಗಿದೆ. ಕಥೆಯ ಪ್ರಮುಖ ಪಾತ್ರವಾದ ಕುಲಶೇಖರನ ಗೆಟಪ್‌ನಲ್ಲಿ ಗುಲ್ಶನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲಂಸ್ ಬಹಿರಂಗಪಡಿಸಿದೆ. ರಿಷಬ್ ಶೆಟ್ಟಿ ಅವರದ್ದೇ ಆದ ಒಂದು ಕನ್ನಡ ಚಿತ್ರದಲ್ಲಿ ಈ ಹಿಂದೆ ಗುಲ್ಶನ್ ನಟಿಸಲು ಸಿದ್ಧತೆ ನಡೆದಿತ್ತಾದರೂ ನಂತರ ಕಾರಣಾಂತರದಿAದ ಅದು ಈಡೇರಿರಲಿಲ್ಲ ಎಂದು ಗುಲ್ಶನ್ ತಾಯಿ ಪುಷ್ಪ ಅವರು ‘ಶಕ್ತಿ’ಯೊಂದಿಗೆ ಹೇಳಿದ್ದಾರೆ. ಇದೀಗ ತವರು ರಾಜ್ಯದಲ್ಲಿ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ತಮಗೂ ಕುತೂಹಲವಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ೭ನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡಗಿನ ಕಂಬೆಯAಡ ಕುಟುಂಬದವರಾದ ನಟ ಗುಲ್ಶನ್ ದೇವಯ್ಯ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಈ ಚಿತ್ರದ ಕುರಿತಾಗಿ ಈಗಲೇ ಷರತ್ತಿನಂತೆ ತಾನು ಏನನ್ನು ಹಂಚಿಕೊಳ್ಳಲಾಗದು ಎಂದಷ್ಟೆ ಹೇಳಿದರು. ಇವರು ಮೂಲತಃ ಕಕ್ಕಬೆಯವರಾದ ಬೆಂಗಳೂರಿನಲ್ಲಿ ನೆಲೆಸಿರುವ ಕಂಬೆಯAಡ ದೇವಯ್ಯ ಹಾಗೂ ಪುಷ್ಪ ದಂಪತಿಯ ಪುತ್ರ.

ಈ ಹಿಂದೆ ತೆರೆಕಂಡು ರಾಷ್ಟಿçÃಯ ಮಟ್ಟದಲ್ಲೂ ಭಾರೀ ಯಶಸ್ಸು ಕಂಡಿದ್ದ ಕಾಂತಾರ ಚಿತ್ರದ ಪೂರ್ವ ಹಿನ್ನೆಲೆಯ ಕಥೆಯು ಈ ಚಿತ್ರದಲ್ಲಿದ್ದು ಇದಕ್ಕೆ ಕಾಂತಾರ ಚಾಪ್ಟರ್-೧ ಎಂದು ಹೆಸರಿಡಲಾಗಿದ್ದು ಕೌತುಕ ಸೃಷ್ಟಿಸಿದೆ.

- ಶಶಿ ಸೋಮಂiÀ