ಮಡಿಕೇರಿ, ಆ. ೨೦ : ಮಹಾರಾಷ್ಟ್ರದ ಸೊಲಾಪುರದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಅಂಡರ್-೧೭ ಹಾಕಿ ಟೂರ್ನಿಯಲ್ಲಿ ಕೊಡಗು ವಿದ್ಯಾಲಯದ ಬಾಲ ಕಿಯರ ಮತ್ತು ಬಾಲಕರ ತಂಡಗಳು ಶ್ರೇಷ್ಠ ಪ್ರದರ್ಶನ ನೀಡಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿವೆ. ತೀವ್ರ ಪೈಪೋಟಿಯ ನಡು ವೆಯೂ ಎರಡೂ ತಂಡಗಳು ಫೈನಲ್ ಹಂತ ತಲುಪಿದ್ದು, ಕೇವಲ ಒಂದು ಗೋಲಿನ ಅಂತರದಿAದ ಸೋತು ಎರಡನೇ ಸ್ಥಾನ ಪಡೆದುಕೊಂಡಿವೆ.
ವೈಯಕ್ತಿಕ ಪುರಸ್ಕಾರಗಳು
ಅತ್ಯುತ್ತಮ ಗೋಲ್ ಕೀಪರ್ ವರ್ಣ ಬೋಜಮ್ಮ, ಅತ್ಯುತ್ತಮ ಡಿಫೆಂಡರ್ ಥನಿಷ್ ಎನ್. ಜಿ (೯ನೇ ತರಗತಿ) ಪ್ರಶಸ್ತಿ ಗಳಿಸಿದರು.
ಕೊಡಗು ವಿದ್ಯಾಲಯದ ತರಬೇತುದಾರರಾದ ದೀನ ಎಚ್.ಡಿ ಹಾಗೂ ಪಾರ್ವತಿ ಕೆ ಎ ಅವರ ತರಬೇತಿ, ಮಾರ್ಗದರ್ಶನ ನೀಡಿದ್ದರು.