ೆÆÃಣಿಕೊಪ್ಪಲು/ಶ್ರೀಮಂಗಲ ಆ. ೨೦: ದಕ್ಷಿಣ ಕೊಡಗಿನ ವೆಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟದಲ್ಲಿ ಹುಲಿಯೊಂದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಸುದ್ದಿ ತಿಳಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ರೈತನ ಕಾಫಿ ತೋಟದಲ್ಲಿ ಹುಲಿ ಸತ್ತುಬಿದ್ದಿರುವುದು ಮಧ್ಯಾಹ್ನ ವೇಳೆ ಕಾರ್ಮಿಕರು ತೋಟ ಕೆಲಸಕ್ಕೆ ತೆರಳಿದ ವೇಳೆ ಕಂಡುಬAದಿದೆ.
ವಿಷಯ ತಿಳಿದ ತೋಟದ ಮಾಲೀಕರು ಘಟನೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ರೈತರ ದೂರಿನ ಅನ್ವಯ ಶ್ರೀಮಂಗಲ ವನ್ಯಜೀವಿ ವಿಭಾಗದ ಆರ್.ಎಫ್.ಓ ಸೇರಿದಂತೆ ಅಧಿಕಾರಿಗಳು, ಸಂಕೇತ್ ಪೂವಯ್ಯ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹುಲಿಯೇ ಮೈಮೇಲೆ ಯಾವುದೇ ಗಾಯವಿಲ್ಲ ಆದರೂ
(ಮೊದಲ ಪುಟದಿಂದ) ಮರಣೋತ್ತರ ಪರೀಕ್ಷೆಯಲ್ಲಿ ಹುಲಿ ಅನಾರೋಗ್ಯ ಕ್ಕೆ ತುತ್ತಾಗಿರುವುದು ಕಂಡುಬAದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಶ್ವಾಸಕೋಶ, ಲಿವರ್ ಮತ್ತು ಕರುಳುಗಳು ಹಾನಿಯಾಗಿರುವುದು ಕಂಡುಬAದಿದೆ. ಕೆಲವು ದಿನಗಳ ಹಿಂದೆ ಮುಳ್ಳುಹಂದಿಯನ್ನು ತಿಂದು ಹೊಟ್ಟೆಯೊಳಗೆ ಮುಳ್ಳುಹಂದಿಯ ಮುಳ್ಳು ಚುಚ್ಚಿ ಗಾಯವಾಗಿರುವ ಶಂಕೆ ವ್ಯಕ್ತವಾಗಿದ್ದು, ಹುಲಿ ಸತ್ತಿರುವ ಸ್ಥಳದಲ್ಲಿ ಹುಲಿ ಮುಳ್ಳುಹಂದಿಯ ಮುಳ್ಳು ಸಹಿತ ವಾಂತಿ ಮಾಡಿರುವುದು ಪತ್ತೆಯಾಗಿದೆ.
ಹುಲಿ ನಿಶಕ್ತವಾಗಿದ್ದು ಓಡಾಡಲಾಗದೆ ನಿತ್ರಾಣವಾಗಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಪರೀಕ್ಷೆಯಲ್ಲಿ ರೋಗಗೃಸ್ತವಾಗಿರುವುದನ್ನು ವೈದ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ನಾಗರಹೊಳೆ ರಾಷ್ಟಿçÃಯ ಉದ್ಯಾನದ ಅನತಿ ದೂರದಲ್ಲಿರುವ ರೈತರ ಕಾಫಿ ತೋಟದಲ್ಲಿ ಹುಲಿಗಳ ಸಂಚಾರ ಈ ಭಾಗದಲ್ಲಿ ಕಂಡುಬAದಿತ್ತು.
ಅಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ರೈತರ ಜಾನುವಾರುಗಳ ಮೇಲೆಯೂ ಕೂಡ ಹುಲಿ ದಾಳಿ ನಡೆಸಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಹುಲಿಸೆರೆಗೆ ಶಾಸಕ ಎ.ಎಸ್. ಪೊನ್ನಣ್ಣ ಅನುಮತಿ ನೀಡಿದ್ದರು. ಕಳೆದ ೧ ತಿಂಗಳ ಹಿಂದೆ ಬೆಳ್ಳೂರು, ಹುದಿಕೇರಿ ಭಾಗದಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರ ೧೦ ದಿನಗಳ ಕಾರ್ಯಾಚರಣೆ ನಡೆಸಿದ್ದರು.ಸಾಕಾನೆಗಳ ಸಹಾಯದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ