ವೀರಾಜಪೇಟೆ, ಆ. ೨೧: ಆಟೋ ಹಾಗೂ ಕಾರ್ ನಡುವೆ ಸಂಭವಿಸಿದ ಅಪಘಾತ ದಲ್ಲಿ ಆಟೋ ಚಾಲಕ ದುರ್ಮರಣಕ್ಕೀಡಾದ ಘಟನೆ ಕಣ್ಣಂಗಾಲದಲ್ಲಿ ನಡೆದಿದೆ.

ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ ಗ್ರಾಮದ ಬಾಳಕೇರಿ ಪೈಸಾರಿ ನಿವಾಸಿ ಪೂಣಿ ಎಂಬವರ ಪುತ್ರ ಹೆಚ್.ಬಿ. ವಿನೋದ್ (೩೮) ಮೃತ ದುರ್ದೈವಿ.

ವಿನೋದ್ ಈ ಹಿಂದೆ ಆಟೋ ಚಾಲಕನಾಗಿದ್ದು, ಆ ಕೆಲಸ ಬಿಟ್ಟು ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ದೇವಣಗೇರಿ ನಿವಾಸಿ ದೇವಯ್ಯ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು

ಹೊಂದಿರುವ ಆಟೋ ಒಂಟಿಅAಗಡಿ ಗ್ರಾಮದಲ್ಲಿ ನಿಲುಗಡೆಯಾಗಿತ್ತು. ಈ ಹಿನ್ನೆಲೆ ವಿನೋದ್‌ಗೆ ನಿಲುಗಡೆಗೊಳಿಸಿದ್ದ ಆಟೋವನ್ನು ಮನೆಗೆ ತರಲು ಹೇಳಿದ್ದು, ಸಂಜೆ ೬.೪೫ಕ್ಕೆ ಒಂಟಿಅAಗಡಿಗೆ ತೆರಳಿ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಕಣ್ಣಂಗಾಲ- ಚೆಂಬೆಬೆಳ್ಳೂರು-ವೀರಾಜಪೇಟೆ ಮಾರ್ಗದಲ್ಲಿ ಎದುರಿನಿಂದ ಬಂದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ವಿನೋದ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ವಾಹನಗಳು ಜಖಂಗೊAಡಿವೆ.

ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕಾರು ಚಾಲಕ ಕಟ್ಟೆಮಾಡು ನಿವಾಸಿ ತಮನ್ ಪೊನ್ನಣ್ಣ (೨೬) ವಿರುದ್ಧ ಬಿ.ಎನ್.ಎಸ್. ೧೦೬ (೧), ೨೮೧ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. - ಕಿಶೋರ್ ಕುಮಾರ್ ಶೆಟ್ಟಿ