ಕಣಿವೆ, ಆ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡÀಗೊಟ್ಟ ಗಿರಿಜನ ನಿವಾಸಿಗಳಿಗೆ ಸರ್ಕಾರದಿಂದ ಉಚಿತವಾಗಿ ವಿತರಿಸುವ ಆಹಾರ ಕಿಟ್ ನೊಂದಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹಾಡಿಯಲ್ಲಿನ ಅಂಗನವಾಡಿಯ ಮೂಲಕ ಪ್ರತಿ ತಿಂಗಳು ವಿತರಿಸುವ ಆಹಾರ ಕಿಟ್ನೊಂದಿಗೆ ಕಳೆದ ಎರಡು ತಿಂಗಳಿನಿAದಲೂ ಕೊಳೆತ ಸ್ಥಿತಿಯಲ್ಲಿ ಗಬ್ಬೆದ್ದುನಾರುವ ಮೊಟ್ಟೆಗಳನ್ನು ನೀಡಲಾಗಿದೆ ಎಂದು ನಿವಾಸಿಗಳು ದೂರಿದ್ದು, ಮನೆಗೆ ಕೊಂಡೊಯ್ದಿದ್ದ ಮೊಟ್ಟೆಗಳನ್ನು ಅಂಗನವಾಡಿಗೆ ಮರಳಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಡಿಯ ಮಹಿಳಾ ಹೋರಾಟಗಾರ್ತಿ ಅನಿತಾ, ಜಿಲ್ಲಾಡಳಿತದಿಂದ ಹಾಡಿಯ ಫಲಾನುಭವಿಗಳಿಗೆ ನೀಡುವ ಮಾಸಿಕ ಆಹಾರದ ಕಿಟ್ನೊಂದಿಗೆ ಒಳಪಟ್ಟಿರುವ ಕೋಳಿ ಮೊಟ್ಟೆಗಳು ಗುಣಮಟ್ಟದಲ್ಲಿ ಇಲ್ಲ. ಈ ಹಿಂದೆಯೂ ಇಂತಹದೇ ಮೊಟ್ಟೆಗಳನ್ನು ವಿತರಿಸಿದ್ದ ಸಂದರ್ಭದಲ್ಲಿ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಕೆಲವು ತಿಂಗಳು ಒಳ್ಳೆಯ ಮೊಟ್ಟೆಗಳನ್ನು ನೀಡಲಾಗಿತ್ತು. ಈಗ ಮತ್ತೆ ಅದೇ ಕೊಳೆತ ಮೊಟ್ಟೆಗಳನ್ನು ನೀಡಲಾಗುತ್ತಿದೆ.
ಇದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ. ಸರ್ಕಾರದಿಂದ ಗಿರಿಜನರ ಕಲ್ಯಾಣಕ್ಕೆ ಒದಗಿಸಲಾಗಿರುವ ಸೌಲಭ್ಯ ಗಳನ್ನು ನಿಖರವಾಗಿ ತಲುಪಿಸುವ ಹೊಣೆಗಾರಿಕೆ ಸಂಬAಧಿಸಿದ ಇಲಾಖೆಗಳ ದ್ದಾಗಿದೆ. ಆದರೆ ಯಾವುದೇ ಅಧಿಕಾರಿಗಳು ಇತ್ತ ಪರಿಶೀಲನೆ ನಡೆಸದ ಕಾರಣ ಕೊಳೆತ ಮೊಟ್ಟೆ ವಿತರಣೆ ಆಗುತ್ತಿದೆ ಎಂದು ಆರೋಪಿಸಿದರು.
ಕೊಳೆತ ಮೊಟ್ಟೆ ಸೇವಿಸಿ ಮಕ್ಕಳು ಹಾಗೂ ಮಹಿಳೆಯರಿಗೆ ಯಾವುದಾದರೂ ತೊಂದರೆ ಕಾಣಿಸಿಕೊಂಡರೆ ಜಿಲ್ಲಾಡಳಿತವೇ ಹೊಣೆ ಎಂದು ಹಾಡಿ ನಿವಾಸಿಗಳಾದ ಅನಿತಾ, ಜಾನು, ಭಾಗ್ಯ, ಗೌರಿ, ಸಿದ್ದಯ್ಯ ಮೊದಲಾದವರು ಎಚ್ಚರಿಸಿದ್ದಾರೆ.