ಮಡಿಕೇರಿ, ಆ. ೨೧: ಮತಬ್ಯಾಂಕ್‌ಗಾಗಿ ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಾಗಳಿಗೆ ಕೊಡಗಿನಲ್ಲಿ ನೆಲೆ ಕಲ್ಪಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹುನ್ನಾರ ನಡೆಯುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಆರೋಪ ಮಾಡಿದರು.
ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಸಿದ್ದಾಪುರದಲ್ಲಿ ೧೦ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾಗಳಿAದ ಕೊಡವ ಲ್ಯಾಂಡ್‌ಗೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾಂಗ್ಲಾದೇಶಿಗರು ಹಾಗೂ ರೋಹಿಂಗ್ಯಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಅವರ ಇರುವಿಕೆಯನ್ನು ಸಕ್ರಮಗೊಳಿಸುವ ಮತ್ತು ಕೊಡವ ನೆಲದಲ್ಲಿ ನೆಲೆ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಕೊಡವ ನೆಲದ ಆಯಕಟ್ಟಿನ ಜಾಗಗಳಲ್ಲಿ ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಎನ್ನುವ ನಕಲಿ ಹೊದಿಕೆ ಹಾಕಿ ನೂರಾರು ಏಕರೆ ಜಾಗವನ್ನು ಮಂಜೂರು ಮಾಡಲು ಹವಣಿಸಲಾಗುತ್ತಿದೆ. ಈ ಪ್ರಯತ್ನ ಜನಸಂಖ್ಯಾ ಪಲ್ಲಟಕ್ಕೆ ಕಾರಣವಾಗಲಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಕೊಡವ ನೆಲದ ನಿಜ ವಾರಸುದಾರರಾದ ಆದಿಮಸಂಜಾತ ಕೊಡವರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಬಾಂಗ್ಲಾ ಮತ್ತು ಮಾಯನ್ಮಾರ್‌ನ ರಾಖಿನೆ ಪ್ರಾಂತ್ಯದ ರೋಹಿಂಗ್ಯಾಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಸಂಚು ನಡೆದಿದೆ ಎಂದು ಆರೋಪಿಸಿದರು.
ಸುಮಾರು ೧ ಲಕ್ಷ ವಿದೇಶಿಯರು ಅಕ್ರಮವಾಗಿ ಕೊಡವ ಭೂಮಿಯಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ಇದೆ. ದೊಡ್ಡ ದೊಡ್ಡ ಕಂಪೆನಿ ತೋಟಗಳು ಇದರಲ್ಲಿ ಶಾಮೀಲಾಗಿದ್ದು, ಅವರನ್ನು ಸಂಪರ್ಕಿಸಿರುವ ಆಡಳಿತಾಂಗ ಸಮೃದ್ಧ ಗ್ಯಾರಂಟಿ ಮತಬ್ಯಾಂಕ್ ನಿರ್ಮಿಸಲು ಕಾರಸ್ಥಾನ ರೂಪಿಸಿದೆ. ಇದು ಕೊಡವ ನೆಲದ ಜನಸಂಖ್ಯೆ ಪಲ್ಲಟ ಮತ್ತು ಜನಸಂಖ್ಯಾ ದುರಾಕ್ರಮಣಕ್ಕೆ ಕಾರಣವಾಗಿ ರಾಷ್ಟಿçÃಯ ಭದ್ರತೆಗೆ ಸವಾಲಾಗಲಿದೆ. ಈ ವಿಪತ್ತಿನಿಂದ ಹೊರ ಬರಬೇಕಾದರೆ ಕೊಡವರ ಹಕ್ಕು ರಕ್ಷಣೆಯಾಗಬೇಕು. ಆ ಹಕ್ಕು ರಕ್ಷಣೆಯ ಖಾತರಿಯಾಗಬೇಕಾದರೆ ಕೊಡವರ ಜನಸಂಖ್ಯಾ ಮಾಹಿತಿಯ ಅನನ್ಯತೆ, ಅದಕ್ಕೆ ಪೂರಕವಾದ “ಕೋಡ್ ಮತ್ತು ಕಲಂ” ಅನ್ನು ೨೦೨೬ರ ರಾಷ್ಟಿçÃಯ ಜನಗಣತಿಯಲ್ಲಿ ಜಾತಿವಾರು ಮಾಹಿತಿ ಕಲೆ ಹಾಕುವ ಸಂದರ್ಭ ಸ್ಪಷ್ಟವಾಗಿ ದಾಖಸಲ್ಪಡಬೇಕೆಂದು ಎನ್.ಯು.ನಾಚಪ್ಪ ಹೇಳಿದರು.
ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯ ಹಕ್ಕು ಮತ್ತು ಎಸ್‌ಟಿ ವರ್ಗೀಕರಣವು ಸೇರಿದಂತೆ ೨೦೨೬ರ ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ
ಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕೆನ್ನುವ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ವಿವಿಧಡೆ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ತಾ.೨೭ ರಂದು ವೀರಾಜಪೇಟೆಯಲ್ಲಿ ಜನಜಾಗೃತಿ
ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗಿದೆ. ತಾ.೨೭ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆಯಲ್ಲಿ ೧೧ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.
ಕಾರ್ಯಕ್ರಮದಲ್ಲಿ ಚೋಳಪಂಡ ಜ್ಯೋತಿ ನಾಣಯ್ಯ, ನಂದಿನೆರವAಡ ರೇಖಾ ನಾಚಪ್ಪ, ಕಾವಡಿಚಂಡ ಕಮಲಾ, ಕಮೋಡೋರ್ ಕುಕ್ಕೇರ ಕೇಶು ಉತ್ತಪ್ಪ, ಕುಕ್ಕೇರ ಜಯ ಚಿಣ್ಣಪ್ಪ, ಚೇರಂಡ ಸುಭಾಷ್, ಚೇಂದAಡ ಚುಮ್ಮಿ ಪೂವಯ್ಯ, ಪಾಲಚಂಡ ಜಾಲಿ ತಮ್ಮಯ್ಯ, ಕಾಡುಮಂಡ ತಮ್ಮಯ್ಯ, ಮೂಕೊಂಡ ದಿಲೀಪ್, ಅಜ್ಜಿನಿಕಂಡ ಸನ್ನಿ, ನೆಲ್ಲಮಕ್ಕಡ ವಿವೇಕ್, ಚೋಳಪಂಡ ನಾಣಯ್ಯ, ಬಲ್ಲಾರಂಡ ಅಭಿನ್, ಬಲ್ಲಚಂಡ ಸುನಿಲ್, ಬಲ್ಲಚಂಡ ಚಂದನ್, ಪುಟ್ಟಿಚಂಡ ಸನ್ನು, ಬಲ್ಲಚಂಡ ವಿಠಲ್ ಕಾವೇರಪ್ಪ, ಮರುವಂಡ ಸಾಬು, ಮರುವಂಡ ಕವಿನ್, ಕಂಗAಡ ಮುದ್ದಯ್ಯ, ಅಣ್ಣಾರ್ಕಂಡ ವಿಜು, ಮಂಡೀರ ಬಬ್ಬು, ಪುಟ್ಟಿಚಂಡ ಉದಯ, ಕೂಪದಿರ ಸಾಬು, ಮೇಕೇರಿರ ದಿಲೀಪ್, ಚೇರಂಡ ಸುನಿಲ್, ಚೇರಂಡ ನಂದ, ಕುಕ್ಕೇರ ಗಣೇಶ್, ಕುಮ್ಮಂಡ ದರ್ಶನ್ ಬೋಪಣ್ಣ, ಪಟ್ಟಡ ವಿಜು, ಚೇನಂಡ ಉತ್ತಯ್ಯ, ಬಲ್ಲಚಂಡ ಮುತ್ತಣ್ಣ, ಕುಕ್ಕೇರ ಅಯ್ಯಪ್ಪ, ಮಂಡೇಪAಡ ಅರ್ಜುನ್, ಅಣ್ಣಾರ್ಕಂಡ ಸೋಮಯ್ಯ, ತೊಂಡಿಯAಡ ಕುಶ, ಮೂಕೊಂಡ ಸುಬ್ರಮಣಿ, ಬೊಮ್ಮಂಡ ಬೋಪಣ್ಣ, ಬಾಳೆಯಡ ಸದಾ ಕುಶಾಲಪ್ಪ, ಮುರುವಂಡ ಸತೀಶ್, ಕುಕ್ಕೇರ ಪಾಲು ಪೂಣಚ್ಚ, ಮತ್ತಿತರರು ಪಾಲ್ಗೊಂಡಿದ್ದರು.