ಕೂಡಿಗೆ, ಆ. ೨೧: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಮೆಕ್ಕೆಜೋಳ ಬೆಳೆದ ರೈತರು ಜೋಳದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಮೆಕ್ಕೆಜೋಳದ ಬೆಳೆಯಲ್ಲಿ ಈಗಾಗಲೇ ತೆನೆ ಕಟ್ಟುವ ಹೂಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಜಮೀನಿನಲ್ಲಿ ರೈತರು ಜೋಳವು ಉತ್ತಮವಾಗಿ ಕಾಳು ಕಟ್ಟಲು ಮತ್ತು ದಪ್ಪವಾಗಿ ಬೆಳೆಯಲು ಬೇಕಾಗುವ ರಾಸಾಯನಿಕ ಗೊಬ್ಬರ ಮತ್ತು ಜೋಳದ ಬುಡಕ್ಕೆ ಮಣ್ಣು ಕೂಡುವ ಕೆಲಸವನ್ನು ಈ ವ್ಯಾಪ್ತಿಯ ನೂರಾರು ರೈತರು ಆರಂಭಿಸಿದ್ದಾರೆ.
ತಾಲೂಕು ವ್ಯಾಪ್ತಿಯಲ್ಲಿ ಮಳೆಯನ್ನೇ ಅವಲಂಬಿಸಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಮೆಕ್ಕೆಜೋಳಕ್ಕೆ ಮೇಲ್‌ಗೊಬ್ಬರವಾದ ಯೂರಿಯ ಗೊಬ್ಬರದ ಪೂರೈಕೆ ಮಾಡುವಲ್ಲಿ ಸಹಕಾರಿಯಾಗಿದೆ.