ಮಡಿಕೇರಿ, ಆ. ೨೧: ಸುಳ್ಯದಲ್ಲಿ ಶಿಕ್ಷಣ ಪಡೆಯುತ್ತಿದ್ದ ಜಿಲ್ಲೆಯ ಮೂಲದ ಯುವಕ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವೀರಾಜಪೇಟೆ ಕಲ್ಲುಬಾಣೆ ನಿವಾಸಿ, ಮಾಜಿ ಸೈನಿಕ ಎಂ.ಜಿ. ವಿಜು ಜಾರ್ಜ್, ಶಿಕ್ಷಕಿ ಸುಮತಿ ದಂಪತಿ ಪುತ್ರ ಅಭಿ ಜಾರ್ಜ್ (೨೦) ಆತ್ಮಹತ್ಯೆ ಮಾಡಿಕೊಂಡ ಯುವಕ. ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿAಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಸಮೀಪದ ಪಿಜಿಯಲ್ಲಿ ವಾಸವಿದ್ದ. ಅಭಿ ಕಳೆದ ರಾತ್ರಿ ತನ್ನ ತಾಯಿಗೆ ಕರೆ ಮಾಡಿ ಮಾತನಾಡಿದ್ದು, ಬೆಳಿಗ್ಗೆ ಸಹಪಾಠಿಗಳು ಆತನ ರೂಂ ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನಂತರ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಕಲ್ಲುಬಾಣೆಗೆ ತರಲಾಗಿದೆ.