ಮಡಿಕೇರಿ, ಆ. ೨೧: ವಿದ್ಯುತ್ ಕಂಬಕ್ಕೆ ಕಾರು ಅಪ್ಪಳಿಸಿದ ಘಟನೆ ಸುಂಟಿಕೊಪ್ಪ ಬಳಿಯ ಬಾಳೆಕಾಡುವಿನಲ್ಲಿ ಸಂಭವಿಸಿದೆ.

ಮಡಿಕೇರಿ ಮೂಲದ ನಾಣಯ್ಯ ಹಾಗೂ ಭೀಮಯ್ಯ ಎಂಬವರು ಕಂಬಿಬಾಣೆಯ ದೇವಾಲಯಕ್ಕೆ ಟಾಟ ಇಟಿಯೋಸ್ ಕಾರಿನಲ್ಲಿ ತೆರಳಿ ಮಡಿಕೇರಿಗೆ ಹಿಂದಿರುಗುವ ಸಂದರ್ಭ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕಾರು ನಜ್ಜುಗುಜ್ಜಾಗಿದೆ. ವಾಹನ ಚಲಾಯಿಸುತ್ತಿದ್ದ ನಾಣಯ್ಯ ಹಾಗೂ ಸಹ ಪ್ರಯಾಣಿಕ ಭೀಮಯ್ಯ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರ : ಚಿರಂತ£