ಮಡಿಕೇರಿ, ಆ. ೨೨: ಕಳೆದೆರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ತಾ. ೨೦ ರಂದು ಸುಂಟಿಕೊಪ್ಪ ಹಾಲೇರಿಯ ತಂತಿಬಾಣೆ ಪೈಸಾರಿಯ ಬಿ.ಪಿ. ಜನಾರ್ಧನ ಹಾಗೂ ವಿಶಾಲಾಕ್ಷಿ ಎಂಬವರಿಗೆ ಸೇರಿದ ಮನೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ.

ಈ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಪರಿಹಾರಕ್ಕೆ ಮನವಿ ಮಾಡಲಾಗಿದೆ.