ಕಣಿವೆ, ಆ. ೨೨: ನೀರಿನ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದ ಏಲಕ್ಕನೂರು ಹೊಸಳ್ಳಿ ಬಳಿಯ ಹಳೆ ಮದಲಾಪುರ ಗಿರಿಜನ ಹಾಡಿಗೆ ಇದೀಗ ನೀರಿನ ಭಾಗ್ಯ ದೊರೆತಿದೆ.
‘ಶಕ್ತಿ’ಯಲ್ಲಿ ಪ್ರಕಟಗೊಂ ಡಿದ್ದ ವರದಿ ಗಮನಿಸಿದ ಸೋಮವಾರಪೇಟೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪರಮೇಶ್ ನಾಯಕ್ ಅವರು ಸ್ಥಳ ಪರಿಶೀಲಿಸಿ ವಾಸ್ತವ ಅರಿತು ಸಂಬAಧಿಸಿದ ಅಬ್ಬೂರುಕಟ್ಟೆ ಗ್ರಾಪಂ ವತಿಯಿಂದ ಪ್ರತ್ಯೇಕವಾದ ಪೈಪ್ಲೈನ್ ಅಳವಡಿಸಿ ಕುಡಿಯುವ ನೀರು ಕಲ್ಪಿಸಿದ್ದಾರೆ. ಇದರಿಂದಾಗಿ ಅನೇಕ ವರ್ಷಗಳಿಂದಲೂ ಪರಿತಪಿಸುತ್ತಿದ್ದ ಕುಟುಂಬಗಳಲ್ಲಿ ಹರ್ಷ ಮೂಡಿದೆ.
ಮಳೆಗಾಲದಲ್ಲಿ ಮನೆಯ ಸೂರಿನಲ್ಲಿ ಬೀಳುವ ಮಳೆಯ ನೀರನ್ನು ಬಿಂದಿಗೆಯಲ್ಲಿ ಸಂಗ್ರಹಿಸಿಟ್ಟು ಕುಡಿಯುವ ಸ್ಥಿತಿ ಸೃಷ್ಟಿಯಾಗಿತ್ತು.