ಶನಿವಾರಸಂತೆ: ಆ. ೨೨: ಪಟ್ಟಣದ ಶ್ರೀ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾದ್ಯಮ ಶಾಲೆಯ ೨೦೨೫-೨೬ ನೇ ಸಾಲಿನ ಶನಿವಾರಸಂತೆ ವಲಯಮಟ್ಟದ ೧೪ ವಯೋಮಿತಿಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ತಾ. ೨೨ ಮತ್ತು ೨೩ ರಂದು ಬೆಳಿಗ್ಗೆ ೯:೩೦ ಗಂಟೆಗೆ ಶಾಲಾ ಮೈದಾನದಲ್ಲಿ ನಡೆಯಲಿದೆ.

ಸಮಾರಂಭವನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಉದ್ಘಾಟಿಸಲಿದ್ದು. ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಬಿ. ಲೋಕೇಶ್ ಅಧ್ಯಕ್ಷತೆ ವಹಿಸುತ್ತಾರೆ. ಕಾರ್ಯದರ್ಶಿ ಸಿ.ಎನ್. ಬೆಳ್ಳಿಯಪ್ಪ ಕ್ರೀಡಾ ಧ್ವಜಾರೋಹಣ ನೆರವೇರಿಸುತ್ತಾರೆ.

ವಿಶೇಷ ಆಹ್ವಾನಿತರಾಗಿ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿಗುರು, ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಹರೀಶ್, ಮುಖ್ಯ ಅತಿಥಿಗಳಾಗಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೆ.ಈ. ಕೃಷ್ಣರಾಜ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಕುಮಾರಿ, ಶ್ರೀ ವಿಘ್ನೇಶ್ವರ ಬಾಲಿಕಾ ಪಿ.ಯು. ಕಾಲೇಜ್ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್, ವಲಯಮಟ್ಟದ ಕ್ರೀಡಾಕೂಟ ಕಾರ್ಯದರ್ಶಿ ಕೆ.ಎಂ. ಸುನಂದಾ, ನಿರ್ದೇಶಕರಾದ ಗೋವಿಂದೇಗೌಡ, ಯು.ಎನ್. ದೇವರಾಜ್, ಜೆ.ಬಿ. ಗಣೇಶ್, ಎ.ಎಸ್. ರಾಮಣ್ಣ, ಡಿ.ಜಿ. ನಿತ್ಯಾನಿಧಿ, ಬಿ.ಎಸ್. ಸೀತಮ್ಮ ಪಾಲ್ಗೊಳ್ಳುತ್ತಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.