ಸಿದ್ದಾಪುರ, ಆ. ೨೩: ಕಾಫಿ ತೋಟ ಹಾಗೂ ಮನೆ ಅಂಗಳದಲ್ಲಿ ಕಾಡಾನೆ ದಾಂಧಲೆ ನಡೆಸಿ ಭೀತಿ ಹುಟ್ಟಿಸಿದೆ. ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ನಿವಾಸಿ ಥೋಮಸ್ ಎಂಬವರ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟು ಕೃಷಿ ಫಸಲು, ಹಣ್ಣಿನ ಗಿಡಗಳನ್ನು ನಾಶಗೊಳಿಸುತ್ತಿವೆ. ಜೊತೆಗೆ ಅವರ ಮನೆಯ ಅಂಗಳಕ್ಕೆ ದಾಳಿಯಿಟ್ಟ ಕಾಡಾನೆ ಹಿಂಡು ಘೀಳಿಡುತ್ತ ಸಂಚರಿಸಿ ಗೋಡೆಗಳಿಗೆ ದಂತದಿAದ ತಿವಿದು ಮನೆಯ ಮುಂಭಾಗದಲ್ಲಿದ್ದ ಹೂ ಕುಂಡಗಳನ್ನು ಧ್ವಂಸಗೊಳಿಸಿದೆ. ಅಂಗಳದಲ್ಲಿದ್ದ ಬಾಸ್ಕೆಟ್ ಬಾಲ್ ಕಂಬ ಹಾಗೂ ನೆಟ್‌ಗಳನ್ನು ಎಳೆದು ಬೀಳಿಸಿ ನಾಯಿ ಗೂಡನ್ನು ಹಾನಿಗೊಳಿಸಿದೆ ಎಂದು ಥೋಮಸ್ ಮಾಹಿತಿ ನೀಡಿದ್ದಾರೆ.
(ಮೊದಲ ಪುಟದಿಂದ) ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕ್ರಮ ಕೈಗೊಂಡರು