ಗೋಣಿಕೊಪ್ಪ ವರದಿ, ಆ. ೨೩: ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ನಲ್ಲಿ ನಡೆದ ಅಂತರ್ ಶಾಲಾ ಕ್ರೀಡಾಕೂಟದಲ್ಲಿ ನ್ಯಾಷನಲ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ವೈಯಕ್ತಿಕವಾಗಿ ಪ್ರೌಢ ಶಾಲಾ ವಿಭಾಗದಲ್ಲಿ ಕಾಳಪಂಡ ದಿಯಾ ಗಂಗಮ್ಮ ೧೦೦ ಮೀಟರ್ ಓಟದಲ್ಲಿ ಪ್ರಥಮ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ೧೦೦ ಮೀ. ಓಟದಲ್ಲಿ ಕುಟ್ಟಂಡ ಶಿವಾನಿ ಸೋಮಣ್ಣ ತೃತೀಯ, ಇದೇ ವಿಭಾಗದಲ್ಲಿ ಕುಟ್ಟಂಡ ಶಿವಾನಿ ಸೋಮಣ್ಣ, ಅಣ್ಣೀರ ಜಿ. ಬೆನಿಶ್ ಬೋಜಮ್ಮ, ಕೆ.ಪಿ. ನವನಿಕ, ಹಾಗೂ ಯುವಾನಿಕ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.
ಪ್ರೌಢಶಾಲಾ ವಿಭಾಗ ಗುಂಪು ಥ್ರೋಬಾಲ್ನಲ್ಲಿ ಕಾಳಪಂಡ ದಿಯಾ ಗಂಗಮ್ಮ, ಕುಟ್ಟಂಡ ಲೀಶ ಸೋಮಣ್ಣ, ರಕ್ಷಾ ಕಾರ್ಲಪಾಡ್ಡಿ, ಕೆ. ಎಸ್. ದಿಯಾ, ಚೀರಂಡ ಅನ್ವಿತಾ ಚೊಂದಮ್ಮ, ಲವಿತ ಕಡ್ಲೆರ, ನೇಹಾಲ್ ತೆಕ್ಕಡೆ, ಮನಕ್ಷಾ ನಾಯ್ಕ್, ವಿ. ವೈ ಚರಿಷ್ಮಾ ಮತ್ತು ಬಯವಂಡ ಬೋಜಮ್ಮ ದ್ವಿತೀಯ ಸ್ಥಾನ ಪಡೆದರು. ಪ್ರೌಢಶಾಲೆ ಬಾಲಕರ ವಿಭಾಗದ ಹಗ್ಗ ಜಗ್ಗಾಟದಲ್ಲಿ ಅಂಜಪರವAಡ ದೇವಯ್ಯ, ಎಸ್. ಲಿಖಿತ್, ಅಪ್ಪನೆರವಂಡ ತೇಜಸ್ ಮೊಣ್ಣಪ್ಪ, ಪೋರಂಗಡ ಸಾರ್ಥಕ್ ಸುಬ್ಬಯ್ಯ, ಕಿರಿಯಮಾಡ ಉತ್ತಪ್ಪ, ಕೆ. ಸಿ ತೇಜಸ್ ಗೌಡ, ಎಂ.ಆರ್. ರಮೀಜ್, ಪ್ರದೀಪ್ ಪವಾರ್, ಮೋಕ್ಷಿತ್ ಮಂಜನೆರೀರ ದ್ವಿತೀಯ ಬಹುಮಾನ ಪಡೆದರು.
ಸಿ.ಬಿ.ಎಸ್.ಇ. ಕೆಸರು ಗದ್ದೆ ಆಟೋಟ ಸ್ಪರ್ಧೆಯಲ್ಲಿ ನ್ಯಾಷನಲ್ ಅಕಾಡೆಮಿ ಶಾಲೆ ೨ ನೇ ಚಾಂಪಿಯನ್ ಆಗಿ ಹೊರಹೊಮ್ಮಿದೆ.