ಕುಶಾಲನಗರ, ಆ. ೨೩: ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸಹಕಾರ ಕೋರಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಶತಮಾನ ಕಂಡ ಸರಕಾರಿ ಶೈಕ್ಷಣಿಕ ಸಂಸ್ಥೆಯಾದ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಕಾರ್ಯಕ್ರಮ ಸಂಬAಧ ಸವಿನೆನಪಿಗಾಗಿ ಸುಮಾರು ೬ ಕೋಟಿ ರೂಗಳ ಅಂದಾಜು ವೆಚ್ಚದ ಭವನವೊಂದನ್ನು ಎಲ್ಲಾ ಹಿರಿಯ ವಿದ್ಯಾರ್ಥಿಗಳ ಸಹಕಾರದಲ್ಲಿ ಯೋಜನೆಯನ್ನು ರೂಪುಗೊಳಿಸಿದ್ದು, ಸಂಘದ ಪದಾಧಿಕಾರಿಗಳು ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ನೇತ್ರತ್ವದಲ್ಲಿ ನಿಯೋಗ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ, ಶಾಲೆಯ ಶತಮಾನೋತ್ಸವ ಭವನಕ್ಕೆ ಸಹಕಾರ ನೀಡಬೇಕೆಂದು ಮನವಿ ಸಲ್ಲಿಸಿತು.
ನಿಯೋಗದೊಂದಿಗೆ ಶಾಸಕ ಡಾ, ಮಂತರ್ ಗೌಡ ಅವರ ಕೋರಿಕೆಗೆ ಸಹಕಾರ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು, ಇದಕ್ಕೂ ಮುನ್ನ ಶಾಸಕ ಡಾ, ಮಂತರ್ ಗೌಡ ನೇತೃತ್ವದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಮಾಜಿ ಮುಖ್ಯಮಂತ್ರಿ ಆರ್ ಗುಂಡುರಾವ್ ಓದಿದ ಶಾಲೆಗೆ ಸಹಕರಿಸುವಂತೆ ಮನವಿ ಮಾಡಲಾಯಿತು, ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ಸಹಕಾರ ಕೋರಲಾಯಿತು,
ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದ ನಿಯೋಗದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಪದಾಧಿಕಾರಿಗಳಾದ ಎಂ.ವಿ. ನಾರಾಯಣ, ಎಂ.ಕೆ. ದಿನೇಶ್, ಆರ್.ಕೆ. ನಾಗೇಂದ್ರ ಬಾಬು, ವಿ.ಎಸ್. ಆನಂದ, ಎಂ.ಇ. ಮೋಹಿದಿನ್ , ಉಮಾಶಂಕರ್, ಬಿ.ಎಸ್. ಲೋಕೇಶ್ ಸಾಗರ್, ಹೆಚ್.ಟಿ. ವಸಂತ,