ಕಣಿವೆ, ಆ. ೨೩: ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೆಚ್ಚಾಗಿ ಬೆಳೆಯುವ ಮುಸುಕಿನ ಜೋಳದ ಫಸಲು ಸಹಿತ ಬೆಳೆಗೆ ಭಾರೀ ಬೇಡಿಕೆ ಇದೆ.

ಹಾಗಾಗಿ ಕೃಷಿಕರು ಜೋಳದ ಫಸಲು ಸಹಿತ ಬೆಳೆಯನ್ನು ಹೊಲ ಗದ್ದೆಗಳಲ್ಲಿ ನೇರವಾಗಿ ಹೈನುಗಾರಿಕಾ ರೈತರಿಗೆ ಮಾರಾಟ ಮಾಡುತ್ತಿದ್ದಾರೆ.ಎಕರೆಯೊಂದರಲ್ಲಿ ಬೆಳೆಯುವ ಮುಸುಕಿನ ಜೋಳದ ಫಸಲಿಗೆ ೨೦ ರಿಂದ ೨೫ ಸಾವಿರ ರೂಗಳ ತನಕ ಮಾರಾಟ ಮಾಡುತ್ತಿದ್ದಾರೆ.

ಅದೇ ಫಸಲನ್ನು ರೈತರು ಕಟಾವು ಮಾಡಿ ಒಣಗಿಸಿ ಜೋಳವಾಗಿ ಮಾರ್ಪಡಿಸಿ ಮಾರಾಟ ಮಾಡಲು ತ್ರಾಸದ ಜೊತೆಗೆ ಹೆಚ್ಚಿನ ಖರ್ಚೂ ಕೂಡ ತಗಲುವುದರಿಂದ ನೇರವಾಗಿ ಹೊಲದಲ್ಲಿ ಇದ್ದ ಸ್ಥಿತಿಯಲ್ಲಿಯೇ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ.

೧೨೦ ದಿನಗಳಲ್ಲಿ ಕಟಾವಿಗೆ ಬರುವ ಜೋಳದ ಫಸಲಿಗೆ ರೈತರು ಎಕರೆಗೆ ೧೦ ಸಾವಿರದಿಂದ ೧೫ ಸಾವಿರ ರೂಗಳವರೆಗೆ ಖರ್ಚು ಮಾಡುತ್ತಾರೆ. ಅದೇ ಫಸಲನ್ನು ಹೈನುಗಾರಿಕಾ ರೈತರಿಗೆ ೨೫ ಸಾವಿರ ರೂಗಳಿಗೆ ಮಾರಾಟ ಮಾಡುತ್ತಾರೆ.

ಮಳೆಗಾಲದಲ್ಲಿ ತ್ರಾಸದ ಕಟಾವು

ಮಳೆಗಾಲದಲ್ಲಿ ಕಟಾವಿಗೆ ಬರುವ ಮುಸುಕಿನ ಜೋಳವನ್ನು ಕಟಾವು ಮಾಡಿ ಗಿಡದಿಂದ ಜೋಳದ ತೆನೆ ಭರಿತ ದಿಂಡುಗಳನ್ನು ಬೇರ್ಪಡಿಸಿ ಒಣಗಿಸಿ ಕಾಳು ಮಾಡಿ ಮಾರಾಟ ಮಾಡಲು ಒಂದಷ್ಟು ಹೆಚ್ಚಿನ ಖರ್ಚು ಹಾಗೂ ಸಮಯ ಬೇಕಾಗುತ್ತದೆ.

ಜೊತೆಗೆ ಬಿಡದೇ ನಿರಂತರವಾಗಿ ಸುರಿವ ಮಳೆಗೆ ಸಿಲುಕುವ ಜೋಳ ಗಿಡದಲ್ಲೇ ಮೊಳಕೆಯೊಡೆದು ನಷ್ಟ ಆಗುವ ಸಂಭವವೂ ಇರುವ ಕಾರಣದಿಂದ ಗಿಡದ ಮೇಲಿನ ಫಸಲಿಗೆ ಹೆಚ್ಚು ಬೇಡಿಕೆ ಹಾಗೂ ಲಾಭ ಎಂಬುದು ರೈತರ ನಿಲುವು.

ಹೈನುಗಾರಿಕೆ ಹೆಚ್ಚಳ

ಹಾಲು ಹಿಂಡುವ ಹಸುಗಳಿಗೆ ಹೆಚ್ಚು ಪ್ರಿಯವಾದ ಈ ಜೋಳದ ಗಿಡಗಳನ್ನು ಎಕರೆ ಗಟ್ಟಲೇ ಖರೀದಿ ಮಾಡುವ ಮೂಲಕ ಅದನ್ನು ಯಂತ್ರದಿAದ ತುಂಡರಿಸಿ ಪುಡಿ ಪುಡಿ ಮಾಡಿ ಅದಕ್ಕೆ ಉಪ್ಪು ಹಾಗೂ ಬೆಲ್ಲವನ್ನು ಪುಡಿ ಮಾಡಿ ಜೋಳದ ತ್ಯಾಜಕ್ಕೆ ಮಿಶ್ರಣ ಮಾಡಿ ಗಾಳಿಯಾಡದಂತೆ ಚೀಲಗಳಲ್ಲಿ ತುಂಬಿಸಿಟ್ಟು ತಿಂಗಳುಗಟ್ಟಲೇ ಹಾಲು ನೀಡುವ ಹಸುಗಳಿಗೆ ತಿನ್ನಿಸುವ ಮೂಲಕ ಹೈನುಗಾರರು ಜೋಳದಿಂದ ಹೆಚ್ಚಾಗಿ ಹಾಲು ಹಿಂಡುತ್ತಿದ್ದಾರೆ.

ಶುAಠಿಗಿAತ ಜೋಳಕ್ಕೆ ಮಾರು

ಶುಂಠಿಗಿAತ ಹೆಚ್ಚಾಗಿ ಜೋಳದ ಬೆಳೆಗೆ ಸಣ್ಣ ಸಣ್ಣ ರೈತರು ಮುಂದಾಗುತ್ತಾರೆ.

ಕಡಿಮೆ ಖರ್ಚಿನ ನಿಗದಿತ ಆದಾಯದ ಜೋಳದ ಫಸಲನ್ನು ವರ್ಷದಲ್ಲಿ ಮೂರು ಬಾರಿ ಬೆಳೆಯಬಹುದಾದ ಕಾರಣ ವರ್ಷಕ್ಕೆ ೭೦ ರಿಂದ ೮೦ ಸಾವಿರ ಲಾಭ ಗಳಿಕೆಯ ನಿರೀಕ್ಷೆ ರೈತರದ್ದು.

ಏಕೆಂದರೆ ಶುಂಠಿಗೆ ರೋಗ ಬಾಧಿಸಿದರೆ ಬೆಳೆ ಕ್ಷೀಣಗೊಂಡು ರೈತನ ಕೈಸುಡುತ್ತದೆ. ಆದರೆ ಜೋಳ ರೈತನ ಕೈ ಹಿಡಿಯುವ ಕಾರಣ ಹೆಚ್ಚಾಗಿ ಜೋಳದ ಬೆಳೆಯತ್ತ ಚಿತ್ತ ಹರಿಸುತ್ತಿದ್ದಾರೆ.