ಸಿದ್ದಾಪುರ, ಆ. ೧೬ : ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಕಾಕೋಟುಪರಂಬು ಗ್ರಾಮ ಪಂಚಾಯಿತಿಗೆ ಒಳಪಡುವ ನಾಲ್ಕೇರಿ ಗ್ರಾಮದಲ್ಲಿ ಕಾಡಾನೆಗಳು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸಿ ಬಾಳೆ ಹಾಗೂ ಕಾಫಿ ಗಿಡಗಳನ್ನು ಧ್ವಂಸಗೊಳಿಸಿದ ಹಿನ್ನೆಲೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊAದಿಗೆ ತೆರಳಿ ಪರಿಶೀಲನೆ ನಡೆಸಿ ರೈತರೊಂದಿಗೆ ಚರ್ಚಿಸಿದರು. ಈ ವೇಳೆ ಸ್ಥಳೀಯ ರೈತರು ಮಾತನಾಡಿ ಈ ಭಾಗದಲ್ಲಿ ಕಾಡಾನೆಗಳು ಕಾಫಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆಗಳನ್ನು ನಾಶಗೊಳಿಸಿ ದ್ದು ಶಾಲೆ ಕಾಲೇಜುಗಳಿಗೆ ತೆರಳುವ ಮಕ್ಕಳಿಗೂ ಕೂಡ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು. ಈ ಸಂದರ್ಭ ಮಾತನಾಡಿದ ಸಂಕೇತ್ ಪೂವಯ್ಯ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕೇರಿ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಮೂರು ಕಾಡಾನೆಗಳು ಈ ಭಾಗದ ಕಾಫಿ ತೋಟಗಳಿಗೆ ನುಗ್ಗಿ ಬಾಳೆ ಸೇರಿದಂತೆ ಇನ್ನಿತರ ಕೃಷಿ ಫಸಲುಗಳನ್ನು ತುಳಿದು ಧ್ವಂಸಗೊಳಿಸಿವೆ. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕಾಡಾನೆಗಳ ಸಂಚಾರ ಕಂಡುಬAದಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಇಂದಿನಿAದಲೇ ಕಾರ್ಯಾಚರಣೆ ನಡೆಸಿ ಸಮೀಪದ ಕಾಡಿಗೆ ಕಾಡಾನೆಗಳನ್ನು ಅಟ್ಟುವಂತೆ ಸೂಚನೆ ನೀಡಿದರು. ಅಲ್ಲದೆ ಕಾಡಾನೆಗಳನ್ನು ಹಿಂತಿರುಗಿ ಕಾಫಿ ತೋಟದೊಳÀೆ್ಕ ಬಾರದ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಂಡು ಸಿಬ್ಬಂದಿಗಳನ್ನು ಹಗಲು ರಾತ್ರಿ ಗಸ್ತು ತಿರುಗುವಂತೆ ನಿರ್ದೇಶನ ನೀಡಿದರು. ಕಾಡಾನೆಗಳ ಉಪಟಳದಿಂದ ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ರ ಹರಿಹಾರ ಕೊಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಮುಖರಾದ ಪೊನ್ನಕ್ಕಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮೋಹನ್ ಎ.ಬಿ., ಸ್ಥಳೀಯರಾದ ತಿಮ್ಮಯ್ಯ, ನಿಮಿತ, ವಿನೋದ್, ಕಾರ್ಯಪ್ಪ, ಮಂದಣ್ಣ, ಗಣೇಶ, ಮಂಜು, ಪೂಜಾ, ಅರಣ್ಯ ಸಿಬ್ಬಂದಿಗಳು ಮತ್ತು ಆರ್‌ಆರ್‌ಟಿ. ಮತ್ತು ಆನೆ ಕಾರ್ಯಪಡೆ, ಕ್ಷೀಪ್ರ ಕಾರ್ಯಪಡೆ ಸಿಬ್ಬಂದಿಗಳು ಹಾಜರಿದ್ದರು.