ಸೋಮವಾರಪೇಟೆ, ಆ. ೨೪: ಇಲ್ಲಿನ ಆಲೇಕಟ್ಟೆ ಬಳಿಯ ಸೈನಿಕ ರಸ್ತೆ ಮತ್ತು ಕಾವೇರಿ ಬಡಾವಣೆಯ ಏಕದಂತ ಸೇವಾ ಸಮಿತಿ ಹಾಗೂ ಯುವಕ ಸಂಘದ ವತಿಯಿಂದ ಎರಡನೇ ವರ್ಷದ ಜಿಲ್ಲಾಮಟ್ಟದ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ತಾ. ೨೭ ರಂದು ನಡೆಯಲಿದೆ.
ಆಲೇಕಟ್ಟೆ ರಸ್ತೆ ಸಮೀಪದ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದ್ದು ೨೫ ತಂಡಗಳಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಮೊ: ೭೬೧೯೧೫೦೦೮೫ ,೯೪೭೬೫೨೩೭೮೭ ಸಂಖ್ಯೆಯನ್ನು ಸಂಪರ್ಕಿಸುವAತೆ ಯುವಕ ಸಂಘದ ಅಧ್ಯಕ್ಷ ರಮೇಶ್ ತಿಳಿಸಿದ್ದಾರೆ.